ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್.. ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ!

 

 

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬ ವ್ಯಕ್ತಿ ಕಳೆದ ಡಿಸೆಂಬರ್‌ನಲ್ಲಿ ಹಳೆಯ ವಾಹನದ ಬಿಡಿ ಭಾಗಗಳನ್ನ ಬಳಸಿ ‘ಜೀಪ್’ (Jeep) ತಯಾರಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral)​​ ಆಗಿತ್ತು.

ಲೋಹರ್ ದ್ವಿಚಕ್ರ ವಾಹನದ ಎಂಜಿನ್, ರಿಕ್ಷಾ ಟೈರ್‌ಗಳು ಮತ್ತು ಅವರ ಫ್ಯಾಬ್ರಿಕೇಶನ್ ಅಂಗಡಿಯಲ್ಲಿ ತಯಾರಿಸಿದ ಸ್ಟೀರಿಂಗ್ ಸೇರಿದಂತೆ ವಿವಿಧ ಭಾಗಗಳಿಂದ ‘ಜೀಪ್’ ರೆಡಿ ಮಾಡಿದ್ದರು. ಲೋಹರ್ ತನ್ನ ಮಕ್ಕಳಿಗಾಗಿ ಈ ‘ಜೀಪ್’ನ್ನು ನಿರ್ಮಿಸಿದ್ದರು. ಕಾರ್ ಬೇಕೆಂದು ಕೇಳಿದ್ದ ಮಕ್ಕಳ ಆಸೆ ಪೂರೈಸಲು ಲೋಹರ್ ಈ ಕಿಕ್-ಸ್ಟಾರ್ಟಿಂಗ್ ಜೀಪ್‌ ತಯಾರಿಸಿದ್ದರು.

ಇದನ್ನ ಶೇರ್ ಮಾಡಿಕೊಂಡಿದ್ದ ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ (Anand Mahindra), “ನಿಸ್ಸಂಶಯವಾಗಿ ಇದಕ್ಕೆ ಯಾವುದು ಹೋಲಿಕೆಯಿಲ್ಲ. ಆದರೆ, ನಮ್ಮ ಜನರ ಜಾಣ್ಮೆಯನ್ನು ನಾನು ಪ್ರಶಂಸಿಸುತ್ತೇನೆ. ಹೆಚ್ಚು ಹೆಚ್ಚು ಸಾಮರ್ಥ್ಯಗಳನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇನೆ” ಎಂದು ಬರೆದುಕೊಂಡಿದ್ದರು. ಇದರ ಜೊತೆಗೆ ಹಳೆಯ ವಾಹನದ ಬದಲಾಗಿ ಬೊಲೆರೋ ಕಾರನ್ನು ಗಿಫ್ಟ್​​ ಆಗಿ ನೀಡುವುದಾಗಿ ತಿಳಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಬಳಿಕ ಟ್ವಿಟರ್ ಬಯೋ ಬದಲಾಯಿಸಿದ್ದಾರೆಂಬ ವರದಿಗೆ ಗುಲಾಂ ನಬಿ ಆಝಾದ್ ಕಿಡಿ

Wed Jan 26 , 2022
                                      ಹೊಸದಿಲ್ಲಿ: ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಬಳಿಕ ತಮ್ಮ ಟ್ವಿಟ್ಟರ್ ಬಯೋವನ್ನು ಬದಲಾಯಿಸಿದ್ದಾರೆ ಎಂಬ ವರದಿಗಳ ವಿರುದ್ಧ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಕಿಡಿ ಕಾರಿದ್ದಾರೆ ಹಾಗೂ ಇದು ಕಿಡಿಗೇಡಿತನದ ಪ್ರಚಾರ ಎಂದು ಹೇಳಿದ್ದಾರೆ.   […]

Advertisement

Wordpress Social Share Plugin powered by Ultimatelysocial