ವೆನ್‌ ರೇಪ್‌ ಈಸ್‌ ಇನ್‌ಎವಿಟೇಬಲ್ ! ಸದನದಲ್ಲಿ ಅಸೂಕ್ಷ್ಮ ಉದಾಹರಣೆ ನೀಡಿದ ರಮೇಶ್ ಕುಮಾರ್ !

ವಿಧಾನ ಸಭೆ ಅಧಿವೇಶನ:-ಸದನದಲ್ಲಿ ಸ್ಪೀಕರ್ ಪರಿಸ್ಥಿತಿಯ ಕುರಿತಾಗಿ ಹೇಳಿಕೆ ಕೊಡುವ ಭರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರ ನಡೆಯುವ ಸನ್ನಿವೇಶದ ಕುರಿತಾದ ವಿವಾದಿತ ಉದಾಹರಣೆಯೊಂದನ್ನು ನೀಡುವ ಮೂಲಕ ಅಸೂಕ್ಷ್ಮತೆಯಿಂದ ವರ್ತಿಸಿದ್ದಾರೆ.ಅತಿವೃಷ್ಠಿ ಹಾಗೂ ಪ್ರವಾಹ ಹಾನಿ ವಿಚಾರವಾಗಿ ನಿಯಮ 69 ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಸ್ಪೀಕರ್ ಕಾಗೇರಿ ಅವರಲ್ಲಿ ಮನವಿ ಮಾಡುತ್ತಾರೆ.ಇದಕ್ಕೆ ಉತ್ತರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,‌ “ಎಷ್ಟು ಬೇಕಾದರೂ ಮಾತನಾಡಲು ಅವಕಾಶ ಕೊಡುತ್ತೇನೆ,ಗಮನ‌ ಸೆಳೆಯುವ ಸೂಚನೆ ಕೈಬಿಟ್ಟುಬಿಡುತ್ತೇನೆ. ಉಳಿದಿದ್ದನ್ನು ಮುಂದುವರಿಸಿಕೊಂಡು ಹೋಗುತ್ತೇನೆ”‌ಎಂದರು. ಈ ಮಾತುಕತೆಯ ವೇಳೆ ಎದ್ದು ನಿಂತು ಮಾತನಾಡಿದ ರಮೇಶ್ ಕುಮಾರ್ ಇಂಗ್ಲಿಷ್ ನುಡಿಗಟ್ಟನ್ನು ಉಲ್ಲೇಖಿಸಿ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.

ಮಾತುಕತೆಯ ಪೂರ್ಣ ವಿವರ ಇಲ್ಲಿದೆ

ಸ್ಪೀಕರ್ ಕಾಗೇರಿ: -ನೀವು ನೀವೇ ಡಿಸೈಡ್‌ ಮಾಡಿಕೊಂಡ್ರಾಯ್ತು ಈಗ. ನೀವೇನು ಡಿಸೈಡ್‌ ಮಾಡ್ಕೋತೀರೋ ಅದಿಕ್ಕೆ ಹೂಂ ಅತೀನಿ ಈಗ. ಯೆಸ್‌ ಯೆಸ್‌ ಅನ್ನೋದು ಅಷ್ಟೇ… ಹ್ಹಿ ಹ್ಹಿ ಈಗ ಅದ್ಕೆ ಅನ್ಸಿದೆ ಈಗ. ರಮೇಶ್‌ ಕುಮಾರ್‌ ಅವ್ರು, ನನಿಗೆ ಏನ್ ಅನ್ಸಿದೆ ಈಗ, ಲೆಟ್‌ ಅಸ್‌ ಎಂಜಾಯ್‌ ದ ಸಿಚುವೇಷನ್‌ ಅಂತ. ಇದನ್ನು ಕಂಟ್ರೋಲ್‌ ಮಾಡಿ, ಇದನ್ನು ನಿಯಂತ್ರಣದಲ್ಲಿ ಇಟ್ಟು, ಇದನ್ನು ಒಂದು ವ್ಯವಸ್ಥಿತವಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಬಿಟ್ಟು ಹಿಂಗೆ ಮಾತಾಡ್ರಪ್ಪ ಅಂತ ಹೇಳ್ಬಿಡೋದು ಈಗ. ಈಗ ಆ ಸ್ಥತಿಗೆ ಬಂದು ಮುಟ್ಟಿದ್ರೆ, ಉಳಿದ ಬಿಸಿನೆಸ್‌ ಆಗ್ತಾ ಇಲ್ಲ ಅಂತ ಅನ್ನೋದು ಅಷ್ಟೇ ನಂದು…

ಈ ವೇಳೆ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌: ದೇರ್‌ ಈಸ್‌ ಎ ಸೇಯಿಂಗ್‌ … ವೆನ್‌ ರೇಪ್‌ ಈಸ್‌ ಇನ್‌ಎವಿಟೇಬಲ್‌….
ರಮೇಶ್‌ ಕುಮಾರ್‌: … ಲೈ ಬ್ಯಾಕ್‌ ಆಂಡ್‌ ಎಂಜಾಯ್‌ ಇಟ್‌ (When rape is inevitable, lie back and enjoy it!) That is exactly the position into which you are. ಎಂದರು.

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಇಬ್ರಾಹಿಂ ನಡುವಿನ ಮಾತಿನ ಚಕಮಕಿ 

Fri Dec 17 , 2021
  ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ನಡುವಿನ ಮಾತಿನ ಚಕಮಕಿ ವಿಡಿಯೋ ಕ್ಲಿಪ್’ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕ ಕೂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಇಬ್ಬರು ನಾಯಕರು ಅವಾಚ್ಯ ಶಬ್ಧಗಳಿಂದ ಒಬ್ಬರನ್ನೊಬ್ಬರು ನಿಂದಿಸಿರುವುದು ಕಂಡು ಬಂದಿದೆ.ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ […]

Advertisement

Wordpress Social Share Plugin powered by Ultimatelysocial