ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಂದೆ ವಿಧಿವಶ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ತಂದೆ ನಿಧನರಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸಿ.ಟಿ. ರವಿ, ನನ್ನಾತ್ಮಬಲದ ಭಾಗವೊಂದು ಇಂದು ನನ್ನನ್ನಗಲಿದೆ. ಮೊದಲ ಬಾರಿಗೆ ಅಪ್ಪನಿಲ್ಲದೆ, ಲೋಕವನ್ನು ನಾನೆದುರಿಸಬೇಕಾಗಿದೆ.ಓಂಶಾಂತಿ ಅಣ್ಣ ಎಂದು ಬರೆದುಕೊಂಡಿದ್ದಾರೆ.ಸಿ.ಟಿ. ರವಿ ಅವರ ತಂದೆ ತಿಮ್ಮೇಗೌಡ(92) ವಯೋ ಸಹಜ ಅನಾರೋಗ್ಯದಿಂದಾಗಿ ಇಂದು ಸಾವನ್ನಪ್ಪಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಭಾನುವಾರ ಅವರ ಸ್ವಗ್ರಾಮ ಚಿಕ್ಕಮಾಗರವಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. ಮೃತರಿಗೆ ಪತ್ನಿ ಹೊನ್ನಮ್ಮ, ಬಿಜೆಪಿ ನಾಯಕ ಸಿ.ಟಿ. ರವಿ ಸೇರಿದಂತೆ, ಸಿ.ಟಿ. ರಘು, ಪುತ್ರಿಯರಾದ ರೋಹಿಣಿ, ರೇವತಿ, ರೇಣುಕಾ ಇದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

Headset:ಮಾರುಕಟ್ಟೆಯಲ್ಲಿ ಅತ್ಯುತ್ತಮ ಗೇಮಿಂಗ್ ಹೆಡ್‌ಫೋನ್‌;

Sat Jan 29 , 2022
ಟೆಕ್ ಮಾರುಕಟ್ಟೆಯಲ್ಲಿ ಹೆಡ್‌ಫೋನ್‌ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವೈವಿಧ್ಯಮಯವಾದ ಹೆಡ್‌ಫೋನ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ ಗೇಮಿಂಗ್‌ ಹೆಡ್‌ಫೋನ್‌ಗಳು ಕೂಡ ಸಾಕಷ್ಟು ಜನಪ್ರಿಯತೆ ಪಡೆದಿವೆ. ನಿಮ್ಮ ಆದ್ಯತೆಯ ಆಧಾರದ ಮೇಲೆ ನೀವು ಆಯ್ಕೆ ಮಾಡಬಹುದಾದ ಹಲವಾರು ಗೇಮಿಂಗ್ ಹೆಡ್‌ಫೋನ್‌ಗಳಿವೆ. ಗೇಮಿಂಗ್‌ ಪ್ರಿಯರಿಗೆ ಈ ಹೆಡ್‌ಫೋನ್‌ಗಳು ಉತ್ತಮ ಅನುಭವ ನೀಡಲಿವೆ. ಸ್ಟೀಲ್ ಸಿರೀಸ್ ಆರ್ಕ್ಟಿಸ್ 7 ಸ್ಟೀಲ್ ಸಿರೀಸ್ ಆರ್ಕ್ಟಿಸ್ 7 ಹೆಡ್‌ಫೋನ್‌ 2.4GHz ವಾಯರ್‌ಲೆಸ್ ಜೋಡಿ ಹೆಡ್‌ಫೋನ್‌ […]

Advertisement

Wordpress Social Share Plugin powered by Ultimatelysocial