ಬೆಂಗಳೂರು ಮತ್ತು ಮೈಸೂರು ಮಧ್ಯೆ ಸೋಮವಾರ(ಜ. 16)ದಿಂದ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭಗೊಳ್ಳಲಿದೆ.

ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ಮಧ್ಯೆ ಸೋಮವಾರ(ಜ. 16)ದಿಂದ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭಗೊಳ್ಳಲಿದೆ.

ಮುಂದಿನ ಒಂದು ತಿಂಗಳಲ್ಲಿ ಬೆಂಗಳೂರಿನಿಂದ ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಮತ್ತು ವಿರಾಜಪೇಟೆಗಳಿಗೆ ಎಲೆಕ್ಟ್ರಿಕ್‌ ಬಸ್‌ ಸಂಚಾರ ಪ್ರಾರಂಭಗೊಳ್ಳಲಿದೆ.

ಕೆಎಸ್‌ಆರ್‌ಟಿಸಿಯು ಕೇಂದ್ರ ಸರಕಾರದ ಫೇಮ್‌ -2 ಯೋಜನೆಯಡಿ ಮೊದಲ ಬಾರಿಗೆ ಅಂತರ ನಗರ (ಬೆಂಗಳೂರು – ಮೈಸೂರು)ದ ಮಧ್ಯೆ ಎಲೆಕ್ಟ್ರಿಕ್‌ ಬಸ್‌ ಸಂಚಾರ ಪ್ರಾರಂಭಿ ಸಲಿದೆ.

ಓಲೆಕ್ಟ್ರಾ ಗ್ರೀನ್ಟೆಕ್ ಕಂಪೆನಿಯಿಂದ ಜಿಸಿಸಿ(ಗ್ರಾಸ್‌ ಕಾಸ್ಟ್‌ ಕಂಟ್ರಾಕ್ಟ್) ಮಾದರಿಯಲ್ಲಿ 50 ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಪಡೆಯು ತ್ತಿದ್ದು, ಇದರ ಮೊದಲ ಬಸ್‌ ಈ ಮಾರ್ಗದಲ್ಲಿ ಸಂಚರಿಸಲಿದೆ. ಉಳಿದ 49 ಬಸ್‌ಗಳು ವಿವಿಧ ಹಂತದಲ್ಲಿ ಮಾರ್ಗಕ್ಕಿಳಿಯಲಿದ್ದು ಅವು ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗ ಳೂರು ಮಧ್ಯೆ ಸಂಚರಿಸಲಿದೆ.

ಫೆಬ್ರವರಿ 2ನೇ ವಾರದ ಹೊತ್ತಿಗೆ ಎಲ್ಲ 50 ಬಸ್‌ಗಳು ವಾಣಿಜ್ಯ ಸಂಚಾರಕ್ಕೆ ಲಭ್ಯ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಲ್ಲೆನಡೆಸಿ ಜೀವಬೆದರಿಕೆ ಹಾಕಿದ 7 ಜನರಿಗೆ ಜೈಲುಶಿಕ್ಷೆ

Sat Jan 14 , 2023
ಅಫಜಲಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಘತ್ತರಗಾ ಗ್ರಾಮದಲ್ಲಿ ಹಲ್ಲೆ ನಡೆಸಿ ಜೀವಭಯ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ಏಳು ಜನರಿಗೆ ಕಲಬುರಗಿಯ 2 ನೇ ಅಪರ ಜೆಎಂಎಫ್‍ಸಿ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ,ತಲಾ 3 ಸಾವಿರ ರೂ ದಂಡ ವಿಧಿಸಿದೆ. 2014 ರ ಡಿಸೆಂಬರ್ 24 ರಂದು ಘತ್ತರಗಾ ಗ್ರಾಮದ ಸುಭಾಷ ಕುಂಬಾರ ಎಂಬುವವರು ಅದೇ ಗ್ರಾಮದ ಕಾಳಮ್ಮ ಎಂಬುವವರಿಗೆ ನಮ್ಮ ಕೌಟುಂಬಿಕ ವಿಷಯವನ್ನು ಜನರ ಮುಂದೆ ಏಕೆ ಹೇಳುತ್ತಿರುವೆ  […]

Advertisement

Wordpress Social Share Plugin powered by Ultimatelysocial