ಚಿತ್ರದುರ್ಗದಲ್ಲಿ ಪೃಥ್ವಿ ರೆಡ್ಡಿ ಆರೋಪ.

ಚಿತ್ರದುರ್ಗ, ಫೆಬ್ರವರಿ, 10: ರಾಜ್ಯ ಬಿಜೆಪಿ ಆಮ್ ಆದ್ಮಿ ಪಕ್ಷದ ಕಾರ್ಯಸೂಚಿಗಳನ್ನು ನಕಲು ಮಾಡಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಚಿತ್ರದುರ್ಗದಲ್ಲಿ ಆರೋಪಿಸಿದರು.

ಮಾರ್ಚ್ 4ರಂದು ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದಾವಣಗೆರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯವನ್ನು ಹಮ್ಮಿಕೊಳ್ಳಲಾಗತ್ತು.

ಸಭೆ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಮೂರು ಪಕ್ಷಗಳ ನಾಯಕರು ಎಎಪಿ ಪಕ್ಷದ ಕಾರ್ಯಸೂಚಿಗಳನ್ನು ನಕಲು ಮಾಡಿದ್ದಾರೆ. ಬಿಜೆಪಿ ಸರ್ಕಾರ “ನಮ್ಮ ಕ್ಲಿನಿಕ್” ಅನ್ನು ಜಾರಿಗೆ ತಂದಿದೆ. ಆಮ್ ಆದ್ಮಿ ಪಕ್ಷದ ಮೊಹಲ್ಲಾ ಕ್ಲಿನಿಕ್‌ ಎಂದು ಇದೆ. ಇದನ್ನು ಬಿಜೆಪಿಯವರು ನಕಲು ಮಾಡಿ “ನಮ್ಮ ಕ್ಲಿನಿಕ್” ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ದೆಹಲಿ ಅಂತಹ ಚಿಕ್ಕ ನಗರದಲ್ಲಿ 500 ಕ್ಲಿನಿಕ್‌ಗಳನ್ನು ಪ್ರಾರಂಭಿಸಿದ್ದೇವೆ. ಆದರೆ ಈ ರಾಜ್ಯದಲ್ಲಿ 434 ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ 243 ಕ್ಲಿನಿಕ್‌ಗಳನ್ನು ಆರಂಭಿಸಿದ್ದಾರೆ. ಉಳಿದ ರಾಜ್ಯದಲ್ಲಿ 190 ಕ್ಲಿನಿಕ್ ತೆರೆಯಲಾಗಿದೆ ಎಂದರು.

ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಹೊಸದಾಗಿ 24 ಸಾವಿರ ಶಾಲಾ ಕಟ್ಟಡಗಳನ್ನು ಕಟ್ಟಲಾಗುವುದು ಎಂದಿದ್ದರು. ಇದೀಗ ಅದು ಸುಳ್ಳು ಭರವಸೆಯಾಗಿ ಉಳಿದಿದೆ. ಶಾಲಾ ಮಕ್ಕಳಿಗೆ ಶೂ ಮತ್ತು ಸಮವಸ್ತ್ರ ಕೊಡಲು ಯೋಗ್ಯತೆ ಇಲ್ಲವೆಂದು ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸುಳ್ಳು ಭರವಸೆಗಳ ಹೇಳಿಕೆಗಳನ್ನು ನೀಡುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಕಾಂಗ್ರೆಸ್ ಪಕ್ಷದವರು ನಿಜವಾಗಿಯೂ ಉಚಿತ ವಿದ್ಯುತ್ ಕೊಡುವ ಉದ್ದೇಶ ಹಾಗೂ ನಿಜಾಂಶವಿದ್ದರೇ ಆಡಳಿತವಿರುವ ರಾಜ್ಯಗಳಲ್ಲಿ ಅದನ್ನು ಜಾರಿ ಮಾಡಲಿ. ನಂತರ ನಮ್ಮ ರಾಜ್ಯದಲ್ಲಿ ಕೊಡಲಿ ಎಂದು ಆಗ್ರಹಿಸಿದರು.

AAP ಕಾರ್ಯಸೂಚಿಯನ್ನ ಕಾಪಿ ಮಾಡಲಾಗಿದೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯಲ್ಲಿ ರಾಜ್ಯ ಸುತ್ತುತ್ತಿದ್ದಾರೆ. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗುಣ ಮಟ್ಟದ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳುತ್ತಾರೆ. ಅವರಿಗೆ ಈಗಾಗಲೇ ಜನತೆ ಎರಡು ಬಾರಿ ಅವಕಾಶ ನೀಡಿದ್ದಾರೆ. ಆದರೆ ಯಾವುದು ಆಗಿಲ್ಲ. ಸಂತೋಷದ ವಿಷಯ ಎಂದರೇ ಎಎಪಿಯ ಇಡೀ ಚುನಾವಣೆಯ ಕಾರ್ಯಸೂಚಿಯನ್ನು ಕಾಪಿ ಮಾಡಲಾಗಿದೆ ಎಂದು ತಿಳಿಸಿದರು.

224 ಕ್ಷೇತ್ರಗಳಲ್ಲಿ AAP ಅಭ್ಯರ್ಥಿಗಳ ಸ್ಪರ್ಧೆ

ದೇಶದಲ್ಲಿ ನುಡಿದಂತೆ ನಡೆದಿರುವ ಏಕೈಕ ಪಕ್ಷ ಎಂದರೇ ಅದು ಆಮ್ ಆದ್ಮಿ ಪಕ್ಷವಾಗಿದೆ. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ವಿದ್ಯುತ್ ಪೂರೈಕೆ ಇಂತಹ ಉಚಿತ ಯೋಜನೆಗಳ ನೆನಪು ಮನಸ್ಸಿನಲ್ಲಿ ಬರುತ್ತದೆ ಎಂದರೇ ಆಮ್ ಆದ್ಮಿ ಪಕ್ಷದ ಕೊಡೆಗೆಯಾಗಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಸೋಲು- ಗೆಲುವು ಆಮೇಲೆ. ನಮಗೆ ಮೊದಲು ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮುಖ್ಯವಾಗಿದೆ. ಈ ಹಿಂದೆ ಗುಜರಾತ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯೇ 30 ವರ್ಷ ಆಳಿದವು. ನಾವು ಅಲ್ಲಿಗೂ ನುಗ್ಗಿ ಪ್ರಧಾನಿಯವರ ಕ್ಷೇತ್ರಕ್ಕೆ ಹೋಗಿ ಶೇಕಡಾ 15% ಮತಗಳನ್ನು ಪಡೆಯುವ ಮೂಲಕ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆವು. ಬೇರೆ ಬೇರೆ ಪಕ್ಷಗಳಲ್ಲಿ ಹಣಬಲ ಇರಬಹುದು, ಆದರೆ ನಮ್ಮ ಎಎಪಿ ಪಕ್ಷದಲ್ಲಿ ಜನ ಬಲ ಇದೆ. ಇಂತಹ ಜನಬಲದಿಂದ ನಾವು ಗೆಲುವು ಸಾಧಿಸುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕರ್ತರನ್ನ ಒಂದೆಡೆ ಸೇರಿಸಲಾಗುವುದು

ಮಾರ್ಚ್ 4 ರಂದು ಅರವಿಂದ್ ಕೇಜ್ರಿವಾಲ್ ಅವರು ದಾವಣಗೆರೆಗೆ ಆಗಮಿಸಲಿದ್ದಾರೆ. ಬೀದರ್‌ನಿಂದ ಹಿಡಿದು ಚಾಮರಾಜನಗರದ ಪಕ್ಷದ ಪದಾಧಿಕಾರಿಗಳನ್ನು ಸೇರಿಸಿ ಸಭೆ ನಡೆಸುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಸಾರ್ವಜನಿಕರ ಸಭೆ ಇಲ್ಲ ಎಂದು ಮಾಹಿತಿ ನೀಡಿದರು. ಹೈದರಾಬಾದ್ ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು ಹಾಗೂ ಕರಾವಳಿ ಭಾಗದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹಾಗೆಯೇ ಮಾರ್ಚ್ ಮೊದಲ ವಾರದಲ್ಲಿ ಎಎಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳಾಗಿದ್ದಾರೆ. ಸದ್ಯದಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕೆ.ಟಿ. ತಿಪ್ಪೇಸ್ವಾಮಿ ಆಕಾಂಕ್ಷಿಯಾಗಿದ್ದಾರೆ ಎಂದರು

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ವಿಶ್ವನಾಥ್, ಜಿಲ್ಲಾಧ್ಯಕ್ಷ ಫಾರೂಕ್ ಅಲಿ, ಮಹಿಳಾ ಅಧ್ಯಕ್ಷೆ ಪಿ. ರಾಧಮ್ಮ, ಮೇಘನಾ, ಆಕಾಂಕ್ಷಿಗಳಾದ ರಾಜು ಹೊಸದುರ್ಗ, ಹೊಳಲ್ಕೆರೆ ಮಾಂತೇಶ್, ಚಳ್ಳಕೆರೆ ಪಾಪಣ್ಣ, ಕೆಂಚಪ್ಪ ಲಕ್ಷ್ಮಣ್ ನಾರಾಯಣ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬರೋಬ್ಬರಿ 13 ಗಂಟೆ ವಿಳಂಬವಾಯ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ!

Fri Feb 10 , 2023
ಮುಂಬೈನಿಂದ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬರೋಬ್ಬರಿ 13 ಗಂಟೆ ತಡವಾಗಿ ಹೊರಟಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾಂತ್ರಿಕ ದೋಷದಿಂದಾಗಿ 13 ಗಂಟೆ ವಿಮಾನ ಹೊರಡುವುದು ವಿಳಂಬವಾಗಿದ್ದು, 170 ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿಯೇ ಕಾದು ಹೈರಾಣಾಗಿದ್ದಾರೆ. ನಿನ್ನ ಮಧ್ಯಾಹ್ನ ಹೊರಡಬೇಕಿದ್ದ ವಿಮಾನ ಬೆಳಗಿನ ಜಾವ 4 ಗಂಟೆಗೆ ಹೊರಟಿದೆ. ಇಂಜಿನಿಯರಿಂಗ್ ಸಂಬಂಧಿತ ಸಮಸ್ಯೆ ಎದುರಾಗಿದ್ದು, ಸ್ವಲ್ಪ ಸಮಯ ಕಾಯುವಂತೆ ಸಿಬ್ಬಂದಿ ಸೂಚನೆ ನೀಡಿದ್ದರು. ತಾಂತ್ರಿಕ ದೋಷ ಸರಿಯಾಗುವಲ್ಲಿ ಬೆಳಗಿನ ಜಾವ […]

Advertisement

Wordpress Social Share Plugin powered by Ultimatelysocial