ಮನೆ ಇಲ್ಲದವರಿಗೆ ನಿವೇಶನ ಒದಗಿಸಿಕೊಡಲು ಒತ್ತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಕಡುಬಡವರಿಗೆ ಹಾಗೂ ಮನೆ ಇಲ್ಲದವರಿಗೆ ಮತ್ತು ನಿರ್ಗತಿಕ ಕುಟುಂಬಗಳಿಗೆ ನಿವೇಶನ ಒದಗಿಸಿಕೊಡಲು ಒತ್ತು ನೀಡುವುದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದ್ದಾರೆ.ಕುಷ್ಟಗಿ ನಗರದ ಕೆರೆ ಅಂಗಳದಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಪಟ್ಟಣದ ಕೆರೆ ಅಂಗಳದಲ್ಲಿ ಸುಮಾರು 292 ಅರ್ಜಿದಾರರು ವಾಸವಾಗಿದ್ದರು. ಅದರಲ್ಲಿ 93 ಅರ್ಜಿದಾರರು ಸರಿಯಾದ ರೀತಿಯಲ್ಲಿ ದಾಖಲಾತಿ ಹೊಂದಿಲ್ಲದ ಕಾರಣ ತಿರಸ್ಕಾರ ಮಾಡಲಾಗಿದೆ. ಉಳಿದ ಅರ್ಜಿದಾರನ್ನು ಮಾನ್ಯ ಮಾಡಿ ಅರ್ಜಿ ಸಲ್ಲಿಸಿದ ನಿವಾಸಿಗಳಿಗೆ ಅಕ್ರಮ ಸಕ್ರಮ ಯೋಜನೆ ಯಲ್ಲಿ ಸದ್ಯ 80 ಮನೆಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದರು.

ಇನ್ನು ಹೆಚ್ಚಿನ ಮನೆಗಳನ್ನು ಹಂಚಿಕೆ ಮಾಡಲು ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಪಕ್ಕದಲ್ಲಿ ಸರಕಾರದಿಂದ ಜಾಗವನ್ನು ಖರೀದಿ ಮಾಡಲಾಗಿದೆ ಅದರಲ್ಲಿ ಸುಮಾರು 1000 ಸಾವಿರ ಫಲಾನುಭವಿಗಳಿಗೆ ನಿವೇಶನ ಒದಗಿಸಿಕೊಡಬಹುದು ಆದರೆ ಪುರಸಭೆ ಮತ್ತು ತಹಶೀಲ್ದಾರ ಸೇರಿ ಮನೆಯಿಲ್ಲದವರಿಗೆ ಮತ್ತು ನಿರ್ಗತಿಕರಿಗೆ ನಿವೇಶನವನ್ನು ಕೊಡಲು ಆನ್ಲೈನ್ ಮುಖಾಂತರ ಅರ್ಜಿಯನ್ನು ಕರೆಯುತ್ತಾರೆ ಕರೆದ ನಂತರ sc.st.obc ಜನತೆಗೆ ನಿವೇಶನವನ್ನು ಹಂಚಿಕೆ ಮಾಡಲಾಗುವುದು ಇದರಲ್ಲಿ ಯಾರಿಗೆ ಮನೆ ಇರುವದಿಲ್ಲವೋ ಅಂತವರಿಗೆ ಮನೆಯನ್ನು ನಿರ್ಮಿಸಿ ಕೊಡುತ್ತೇವೆ. ಆದರೆ ಅಲ್ಲಿ ವಾಸ ಮಾಡಲು ವಾಸ ಮಾಡಲು ಯಾವುದೇ ರೀತಿಯಿಂದ ತೊಂದರೆ ಯಾಗುವದಿಲ್ಲ. ಸರಕಾರಿ ಶಾಲೆ ಮತ್ತು ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸಿ ಕೊಡುತ್ತದೆ.

ಕುಷ್ಟಗಿ ಪಟ್ಟಣದ ಜನತೆ ತಮ್ಮ ಮನೆ ಅಂಗಳದ ಕಸವನ್ನು ಚರಂಡಿಗೆ ಹಾಕುತ್ತೀರುವುದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಕಸವನ್ನು ಎಲ್ಲೆಂದರಲ್ಲಿ ಚೆಲ್ಲದೇ, ಒಂದು ಸಣ್ಣ ಡಬ್ಬಿಯಲ್ಲಿ ಹಾಕಬೇಕು. ಡಬ್ಬಿಯಲ್ಲಿ ಹಾಕಿದ ಕಸವನ್ನು ಪುರಸಭೆಯ ಗಾಡಿ ಬಂದು ತೆಗೆದುಕೊಂಡು ಹೋಗುತ್ತದೆ ಸಾರ್ವಜನಿಕರು ಪರಿಸರ ಮಾಲಿನ್ಯವನ್ನು ಕಾಪಾಡಲು ಮುಂದಾಗಬೇಕು ಮತ್ತು ಪಟ್ಟಣವನ್ನು ಸ್ವಚ್ಚವಾಗಿ ಇಡಲು ಸಹಕರಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ಎಂ.ಸಿದ್ದೇಶ ಪ್ರಾಸ್ಥವಿಕವಾಗಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಆಡೂರ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿಕೊಂಡರು. ಪುರಸಭೆ ಸದಸ್ಯರಾದ ಮೈನುದ್ದೀನ್ ಮುಲ್ಲಾ, ಅಂಬ್ಬಣ್ಣ ಭಜೇಂತ್ರಿ, ವಸಂತ ಮೇಲಿನಮನಿ, ಕಲ್ಲೇಶ ತಾಳದ್, ಮಾಹಾತೇಶ ಕಲಬಾವಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ಪುರಸಭೆ ವ್ಯವಸ್ಥಾಪಕ ಜೋಶಿ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದನ್ನು ಓದಿ:ಮನೆ ಇಲ್ಲದವರಿಗೆ ನಿವೇಶನ ಒದಗಿಸಿಕೊಡಲು ಒತ್ತು.
Please follow and like us:

Leave a Reply

Your email address will not be published. Required fields are marked *

Next Post

ದೇವರ ಮನೆಯಲ್ಲಿ ಹೆಡೆ ಎತ್ತಿ ಬುಸುಗುಟ್ಟಿದ ನಾಗಪ್ಪ.

Wed Nov 25 , 2020
ಮೈಸೂರಿನಲ್ಲಿ ದೇವರ ಮನೆ ಸೇರಿದ್ದ ನಾಗರಹಾವಿನ ರಕ್ಷಣೆ. ಮೈಸೂರಿನ ಬೋಗಾದಿ ಬಡಾವಣೆಯಲ್ಲಿ ಘಟ‌ನೆ‌ ತೋಟದಾರ್ಯ ಅವರ ಮನೆಯಲ್ಲಿದ್ದ ನಾಗರಹಾವು‌. ದೇವರ ಮನೆಯಲ್ಲಿ ಹೆಡೆ ಎತ್ತಿ ಬುಸುಗುಡುತ್ತಾ ಕುಳಿತಿದ್ದ ನಾಗರಹಾವು. ಅಪರೂಪದ ಘಟನೆಗೆ ಸಾಕ್ಷಿಯಾದ ಘಟನೆ ಸ್ಥಳಕ್ಕೆ ಆಗಮಿಸಿದ ಉರುಗ ಸಂರಕ್ಷಕ ಸ್ನೇಕ್ ಶ್ಯಾಮ್‌ರಿಂದ ರಕ್ಷಣೆ‌‌. ಶ್ರದ್ದಾ ಭಕ್ತಿಯಿಂದ ಹಾವನ್ನು ಬೀಳ್ಕೊಟ್ಟ ಮನೆಯವರು. ನಾಗರಹಾವು ಸಂರಕ್ಷಿಸಿದ ನಂತರವೂ ಆತಂಕದಲ್ಲೇ ಇದ್ದ ಮನೆಯವರು. ಇದನ್ನು ಓದಿ : ಮನೆ ಇಲ್ಲದವರಿಗೆ ನಿವೇಶನ ಒದಗಿಸಿಕೊಡಲು ಒತ್ತು. […]

Advertisement

Wordpress Social Share Plugin powered by Ultimatelysocial