ಛತ್ತೀಸ್‌ಗಡ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್‌ಗೆ ಜಯ, ಬಿಜೆಪಿಗೆ ಹಿನ್ನಡೆ

ಛತ್ತೀಸ್‌ಗಡ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್‌ಗೆ ಜಯ, ಬಿಜೆಪಿಗೆ ಹಿನ್ನಡೆ

ರಾಯ್‌ಪುರ: ಛತ್ತೀಸ್‌ಗಡದ 15 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಮತ ಎಣಿಕೆ ಪೂರ್ಣಗೊಂಡ 300 ವಾರ್ಡ್‌ಗಳ ಪೈಕಿ 174ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. 89 ವಾರ್ಡ್‌ಗಳಲ್ಲಿ ಗೆದ್ದಿರುವ ಭಾರತೀಯ ಜನತಾ ಪಕ್ಷವು (ಬಿಜೆಪಿ) ಹಿನ್ನಡೆ ಅನುಭವಿಸಿದೆ.

15 ನಗರ ಸಂಸ್ಥೆಗಳು ಮತ್ತು 15 ಪ್ರತ್ಯೇಕ ವಾರ್ಡ್‌ಗಳ ಉಪಚುನಾವಣೆಯ ಮತದಾನ ಸೋಮವಾರ ನಡೆದಿತ್ತು. ಮತಎಣಿಕೆ ಕಾರ್ಯ ಗುರುವಾರ 29 ಕೇಂದ್ರಗಳಲ್ಲಿ ನಡೆಯಿತು.

ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ‘ನಮ್ಮ ಸರ್ಕಾರ ಪ್ರಾರಂಭಿಸಿದ ಕಲ್ಯಾಣ ಯೋಜನೆಗಳ ಯಶಸ್ಸನ್ನು ಈ ಫಲಿತಾಂಶ ಸೂಚಿಸುತ್ತಿದೆ,’ ಎಂದು ಹೇಳಿದರು.

15 ನಗರ ಸಂಸ್ಥೆಗಳ ಒಟ್ಟು 370 ವಾರ್ಡ್‌ಗಳ ಪೈಕಿ 300 ವಾರ್ಡ್‌ಗಳ ಫಲಿತಾಂಶವನ್ನು ಚುನಾವಣಾ ಆಯೋಗ ಈ ವರೆಗೆ ಪ್ರಕಟಿಸಿದೆ. 174 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು, 89 ರಲ್ಲಿ ಬಿಜೆಪಿ, 6 ರಲ್ಲಿ ಜನತಾ ಕಾಂಗ್ರೆಸ್ ಛತ್ತೀಸ್‌ಗಡ (ಜೆ) ಮತ್ತು 31 ರಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಜಾಜ್‌ ಪಟೇಲ್‌ಗೆ ನ್ಯೂಜಿಲ್ಯಾಂಡ್‌ ಟೆಸ್ಟ್‌ ತಂಡದಲ್ಲಿ ಜಾಗವಿಲ್ಲ!

Fri Dec 24 , 2021
ಕ್ರೈಸ್ಟ್‌ಚರ್ಚ್‌: ಭಾರತದೆದುರಿನ ಮುಂಬಯಿ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸಿನ ಎಲ್ಲ 10 ವಿಕೆಟ್‌ ಉರುಳಿಸಿ ಇತಿಹಾಸ ನಿರ್ಮಿಸಿದ ಬೌಲರ್‌ ನ್ಯೂಜಿಲ್ಯಾಂಡಿನ ಅಜಾಜ್‌ ಪಟೇಲ್‌. ಈ ಸಾಧನೆಗೈದ ವಿಶ್ವದ ಕೇವಲ 3ನೇ ಬೌಲರ್‌ ಎಂಬುದು ಇವರ ಹಿರಿಮೆ. ಆದರೆ ಈಗಿನ ಸುದ್ದಿ ಏನೆಂದರೆ, ಈ ಅಸಾಮಾನ್ಯ ಬೌಲಿಂಗ್‌ ಸಾಧಕನಿಗೆ ನ್ಯೂಜಿಲ್ಯಾಂಡ್‌ ಟೆಸ್ಟ್‌ ತಂಡದಲ್ಲಿ ಸ್ಥಾನ ಲಭಿಸಿಲ್ಲ! ಪ್ರವಾಸಿ ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್‌ ಸರಣಿಗಾಗಿ 13 ಸದಸ್ಯರ ತಂಡವನ್ನು ಪ್ರಕಟಿಸಿರುವ ನ್ಯೂಜಿಲ್ಯಾಂಡ್‌, […]

Advertisement

Wordpress Social Share Plugin powered by Ultimatelysocial