ಮೂರೇ ತಿಂಗಳಲ್ಲಿ ₹6,000 ಏರಿಕೆ, ₹57,000 ದಾಟಿದ ಚಿನ್ನದ ದರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿರುವ ಚಿನ್ನದ ದರ ಶುಕ್ರವಾರ ಮತ್ತೆ ಏರಿಕೆ ಕಂಡಿದೆ. ಇತ್ತ ಬೆಳ್ಳಿ ಬೆಲೆಯೂ ಹೆಚ್ಚಳವಾಗಿದ್ದು ಮದುವೆ ಸೀಸನ್‌ನಲ್ಲಿ ಆಭರಣ ಪ್ರಿಯರ ಜೇಬು ಸುಡುವಂತೆ ಮಾಡಿದೆ.

ದೃಢವಾದ ಜಾಗತಿಕ ದರಗಳ ಬೆಂಬಲದೊಂದಿಗೆ ಭಾರತೀಯ ಫ್ಯೂಚರ್‌ ಮಾರುಕಟ್ಟೆಗಳಲ್ಲಿ ಶುಕ್ರವಾರ ಚಿನ್ನದ ಬೆಲೆಗಳು ಮತ್ತೊನ್ನೆ ದಾಖಲೆಯ ಮಟ್ಟಕ್ಕೆ ತಲುಪಿವೆ.

ಎಂಸಿಎಕ್ಸ್‌ನಲ್ಲಿ ಗೋಲ್ಡ್‌ ಫ್ಯೂಚರ್ಸ್ ದಿನದ ಗರಿಷ್ಠ ಮಟ್ಟದಲ್ಲಿ ಶೇ. 0.3ರಷ್ಟು ಏರಿಕೆ ಕಂಡು 10 ಗ್ರಾಂಗೆ 56,850 ರೂ.ಗೆ ಏರಿಕೆಯಾಗಿವೆ. ಮತ್ತು ಬೆಳ್ಳಿಯು ಕೆಜಿಗೆ 68,743 ರೂ.ಗೆ ಏರಿಕೆ ಕಂಡಿತ್ತು.

ಡಾಲರ್ ಮತ್ತು ಅಮೆರಿಕದ ಟ್ರೆಷರಿ ಇಳುವರಿಯಲ್ಲಿನ ಕುಸಿತದಿಂದ ನವೆಂಬರ್ ಆರಂಭದಿಂದಲೂ ಚಿನ್ನದ ಬೆಲೆ ಏರುತ್ತಲೇ ಇದೆ. ನವೆಂಬರ್ ಆರಂಭದಿಂದ ಇಲ್ಲಿಯವರೆಗೆ ಮೂರು ತಿಂಗಳಲ್ಲಿ ಚಿನ್ನದ ಬೆಲೆ ಸುಮಾರು 6,000 ರೂ.ನಷ್ಟು ಏರಿಕೆ ಕಂಡಿದೆ.

“ಪ್ರಸಕ್ತ ವರ್ಷ ಚಿನ್ನದ ದರ ಏರುಗತಿಯಲ್ಲಿಯೇ ಮುಂದುವರಿಯಲಿದೆ. ಬಡ್ಡಿ ದರವು ಅಮೆರಿಕದಲ್ಲಿ ಇಳಿಕೆಯಾಗುವ ಅವಕಾಶಗಳಿವೆ. ಹೀಗಾಗಿ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದು. ಹೀಗಾಗಿ ಚಿನ್ನದ ದರ ಇನ್ನಷ್ಟು ಹೆಚ್ಚಳವಾಗಬಹುದು,” ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ಬೆಂಗಳೂರಿನಲ್ಲಿಎಷ್ಟಿದೆದರ?

  • ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನಕ್ಕೆ 10 ಗ್ರಾಂಗೆ 57,110 ರೂ. ದರವಿದೆ. ಅಂದರೆ ಪ್ರತಿ ಗ್ರಾಂಗೆ 5,711 ರೂ. ದರವಿದೆ.
  • ಆಭರಣ ಚಿನ್ನ ಅಂದರೆ 22 ಕ್ಯಾರಟ್‌ ಚಿನ್ನಕ್ಕೆ 52,300 ರೂ. ದರವಿದೆ. ಅಂದರೆ ಪ್ರತಿ ಗ್ರಾಂಗೆ 5,230 ರೂ. ದರವಿದೆ.

ಇದರಲ್ಲಿ ಶೇ. 3 ಜಿಎಸ್‌ಟಿ ಹಾಗೂ ತಯಾರಿ ವೆಚ್ಚಗಳು, ವೇಸ್ಟೇಜ್‌ ಸೇರಿರುವುದಿಲ್ಲ. ಇವುಗಳನ್ನೂ ಲೆಕ್ಕ ಹಾಕಿದಾಗ ಆಭರಣ ಚಿನ್ನದ ದರ ಮತ್ತೂ ಜಾಸ್ತಿಯಾಗುತ್ತವೆ. ಚಿನ್ನದ ದರಗಳು ಬೇರೆ ಬೇರೆ ಊರುಗಳಿಗೆ, ಚಿನ್ನದ ಅಂಗಡಿಗಳಿಂದ ಅಂಗಡಿಗಳಿಗೆ ಬದಲಾಗುತ್ತವೆ. ಆದರೆ ಹೆಚ್ಚು ಕಡಿಮೆ ಇದೇ ದರವಿರುತ್ತದೆ. ಅಲ್ಪ ಬದಲಾವಣೆಯಷ್ಟೇ ಇರುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿಗೆ ಗೆಲ್ಲುವ ಧೈರ್ಯ ಇದ್ದಿದ್ದರೇ ಮೋದಿ ಯಾಕ್ ಬರಬೇಕು...?

Mon Feb 27 , 2023
ಚಾಮರಾಜನಗರ:ಬಿಜೆಪಿಗೆ ನಿಜಕ್ಕೂ ಗೆಲ್ಲುವ ಧೈರ್ಯ ಇದ್ದಿದ್ದರೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಯಾಕೆ ಇಷ್ಟು ಬಾರಿ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರಶ್ನೆ ಮಾಡಿದರು.ಚಾಮರಾಜನಗರದಲ್ಲಿ ಮಾಧ್ಯಮದದವರೊಟ್ಟಿಗೆ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ,ರಾಜ್ಯಕ್ಕೆ ಇಷ್ಟು ಬಾರಿ ಬರ್ತಾ ಇದಾರಲ್ಲ ರಾಜ್ಯವೇ ಮಳೆಯಿಂದ ಮುಳುಗಿದಾಗ ಏಕೆ ಬರಲಿಲ್ಲ, ಕೊರೊನಾ ಅವಾಂತರದಲ್ಲಿ ಏಕೆ ಬರಲಿಲ್ಲ, ವಿಶೇಷ ಅನುದಾನ ಏಕೆ ಕೊಡಲಿಲ್ಲ..? ಬಿಜೆಪಿಗೆ ಗೆಲ್ಲುವ ಧೈರ್ಯ ಇದ್ದಿದ್ದರೇ ಮೋದಿ ಡೆಲ್ಲಿಯಲ್ಲೇ ಕುಳಿತು […]

Advertisement

Wordpress Social Share Plugin powered by Ultimatelysocial