ರಸ್ತೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿದ ಪತಿ

ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲವಕುಶ ನಗರದಲ್ಲಿ ತನ್ನ ಪತ್ನಿಯನ್ನೇ ರಸ್ತೆಯಲ್ಲಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಹೇಮಾ ಕೊಲೆಯಾದ ದುರ್ದೈವಿ ಪತ್ನಿ. ಕೊಲೆ ಮಾಡಿದ ಆರೋಪಿ ಪತಿ ಮಂಜುನಾಥ್, ಎಸ್ಕೇಪ್ ಆಗಿದ್ದಾನೆ. ಮಂಜುನಾಥ್ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈತನ ಪತ್ನಿ ಕೂಡ ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳೆನ್ನಲಾಗಿದೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ  ಜಗಳ ಪ್ರಾರಂಭವಾಗಿದ್ದು ಮೊದಲು ಚಾಕುವಿನಿಂದ ತನ್ನ ಮನೆಯಲ್ಲಿ ಪತ್ನಿಗೆ ಇರಿದು ನಂತರ ಮಂಜುನಾಥ್ ತನ್ನ ಪತ್ನಿಯನ್ನು ರಸ್ತೆಯಲ್ಲಿ ಅಟ್ಟಾಡಿಸಿ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ ಎನ್ನಲಾಗಿದೆ. ಮಂಜುನಾಥ್ ಹಾಗೂ ಹೇಮಾಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮಂಜುನಾಥ್​​ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನಿ ಉಗ್ರನ ಹತ್ಯೆ

Wed Jul 1 , 2020
ಜಮ್ಮು ಮತ್ತು ಕಾಶ್ಮೀರದ ರಜೌರಿಯ ಗಡಿ ನಿಯಂತ್ರಣ ರೇಖೆ ಬಳಿ ಇಂದು ನುಸುಳಲು ಯತ್ನಿಸುತ್ತಿದ್ದ ಓರ್ವ ಉಗ್ರನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.ಎಂದು ತಿಳಿದುಬಂದಿದೆ. ಕೇರಿ ಸೆಕ್ಟರ್‌ ಬಳಿ ಪಾಕಿಸ್ತಾನಿ ಉಗ್ರ ನುಸುಳುತ್ತಿದ್ದ ವೇಳೆ ಇದನ್ನು ಗಮನಿಸಿದ ಭದ್ರತಾಪಡೆಗಳು ಉಗ್ರರ ಮೇಲೆ ಗುಂಡಿನ ಚಕಮಕಿ ನಡೆಸಿದ್ದಾರೆ. ಇದರಲ್ಲಿ ಉಗ್ರನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಉಗ್ರನ ಸಂಚು ವಿಫಲಗೊಳಿಸಿದ್ದಾರೆ. ಹತ್ಯೆಯಾದ ಉಗ್ರನಿಂದ 1 ಎಕೆ 47 ಮತ್ತು ಮಾಸ ಪತ್ರಿಕೆಗಳನ್ನು ವಶಕ್ಕೆ […]

Advertisement

Wordpress Social Share Plugin powered by Ultimatelysocial