’ರಾಘು’ ಟ್ರೇಲರ್ ರಿಲೀಸ್…ಸೋಲೋ ಆಕ್ಟರ್ ಆಗಿ ಬಂದ ಚಿನ್ನಾರಿ ಮುತ್ತನಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್

 

ಕನ್ನಡ ಚಿತ್ರರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆ ಜೊತೆಯಲಿ ಭಿನ್ನ-ವಿಭಿನ್ನ ಹಾಗೂ ಪ್ರಯೋಗಾತ್ಮಕ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದೇ ಸಾಲಿಗೆ ಒಂದಿಷ್ಟು ಕೌತುಕಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿರುವ ರಾಘು ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ 28ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿರುವ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹೊಸ ಬಗೆಯ ರಾಘು ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.

‘ರಾಘು’ಗೆ ಶಿವಣ್ಣ ಬಲ

ಯುವ ನಿರ್ದೇಶಕ ಎಂ ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ರಾಘು ಸಿನಿಮಾ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರವಾಗಿದೆ. ಹೊಸ ಬಗೆ ಥ್ರಿಲ್ ನೀಡುವ ಈ ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಇರಲಿದ್ದಾರೆ. ಇದನ್ನು ಸೋಲೋ ಆಕ್ಟಿಂಗ್ ಸಿನಿಮಾ ಎನ್ನಬಹುದು. ಸೋಲೋ ಆಗಿ ಬರ್ತಿರುವ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. ರಾಘು ಟ್ರೇಲರ್ ಗೆ ಶಿವಣ್ಣನ ಪವರ್ ಫುಲ್ ವಾಯ್ಸ್ ಸಿಕ್ಕಿದ್ದು, ಚಿತ್ರದ ಖದರ್ ಮತ್ತಷ್ಟು ಹೆಚ್ಚಿದೆ. ಜೀವನದ ದಾರಿಯಲ್ಲಿ ಕಷ್ಟ ಎಂಬ ಗುಡಿಗಳಿರುತ್ತದೆ. ಆದರೆ ಇವನ ದಾರಿಯಲ್ಲಿ ಆಪತ್ತು ಎಂಬ ಅಡ್ಡ ದೊಡ್ಡ ಗೋಡೆ ನಿಂತಿತ್ತು ಎಂಬ ಪಂಚಿಂಗ್ ಡೈಲಾಗ್ ಮೂಲಕ ರಾಘು ಟ್ರೇಲರ್ ತೆರೆದುಕೊಳ್ಳಲಿದೆ. ಶಿವಣ್ಣನ ವಾಯ್ಸ್, ವಿಜಯ್ ರಾಘವೇಂದ್ರ ಆಕ್ಟಿಂಗ್, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನೋಡುಗರ ಗಮನಸೆಳೆಯುತ್ತಿದೆ.

ಟ್ರೇಲರ್ ರಿಲೀಸ್ ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, ರಾಘು ಸಿನಿಮಾ ಬಗ್ಗೆ ಮಾತಾನಾಡಲು ತುಂಬಾ ಅಂಶವಿದೆ. ಸಿನಿಮಾ ಹಿಂದೆ ಪಟ್ಟಿರುವ ಶ್ರಮ, ಟೆನ್ನಿಕಾಲಿಟಿಸ್ ಸೇರಿದಂತೆ ತುಂಬಾ ವಿಚಾರಗಳ ಬಗ್ಗೆ ಮಾತಾಡಬೇಕು. 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್ , ಸಾಂಗ್ ನೋಡಿ ಖುಷಿಪಡುತ್ತಿದ್ದೇವೋ ಅವೆಲ್ಲರದ ಬಗ್ಗೆ ಮಾತನಾಡಲು 28 ಆಗಬೇಕು. ಜನ ಸಿನಿಮಾ ನೋಡಬೇಕು. ಈಗ ಒಂದು ಹಿತವಾದ ಗೊಂದಲವಿದೆ. ಅದು ನಮ್ಮ ರಾಘು ಸಿನಿಮಾದ ಬಲ. ಸೋಲೋ ಆಕ್ಟರ್ ಚಿತ್ರವಾಗಿದ್ದು, ಒಬ್ಬನೇ ಕಲಾವಿದ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. 28ಕ್ಕೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಬೆಂಬಲಿಸಿ ಎಂದರು.

ನಿರ್ದೇಶಕ ಎಂ.ಆನಂದ್ ರಾಜ್ ಮಾತನಾಡಿ, ರಾಘು ಪಯಣಕ್ಕೆ ಬೆಂಬಲ ಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ಎಲ್ಲಾ ಆಕ್ಟರ್ಸ್ಸ್ ಹಾಕಿಕೊಂಡು ಸಿನಿಮಾ ಮಾಡಿದಾಗ ನಿರ್ಮಾಪಕರು ಸಿಗುವುದು ಕಷ್ಟ. ಇನ್ನೂ ಸೋಲೋ ಆಕ್ಟರ್ ಇಟ್ಟುಕೊಂಡು ಕಥೆ ಎಣೆದು ಸಿನಿಮಾ ಮಾಡುವುದು ತುಸು ಕಷ್ಟವೇ. ಇದು ಸಂಪೂರ್ಣ ಟೆಕ್ನಿಕಲ್ ಚಿತ್ರವಾಗಿದ್ದು, ಸೋಲೋ ಆಕ್ಟರ್ ಕಥೆಯಾಗಿದ್ರೂ ಸಾಂಗ್ಸ್, ಫೈಟ್ಸ್, ಟ್ವಿಸ್ಟ್ ಎಲ್ಲವೂ ಇದೆ. ಇದೇ 28ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿ ಎಂದರು.

ನಿರ್ಮಾಪಕ ರನ್ವಿತ್ ಶಿವಕುಮಾರ್, ರಾಘು ಬರೀ ಸಿನಿಮಾವಲ್ಲ. ನಮ್ಮ ತಂಡಕ್ಕೆ ಒಂದು ಎಮೋಷನ್. ಹೊಸ ತಂಡ ಹೊಸ ಪ್ರೊಡಕ್ಷನ್ ಜೊತೆ ಬಂದಾಗ ಜನರಿಗೆ ತಲುಪಿಸಲು ಇರುವ ಸೇತುವ ಮಾಧ್ಯಮ. ಆರಂಭದಿಂದ ಇಲ್ಲಿವರೆಗೂ ಅದೇ ಪ್ರೀತಿ ತೋರಿಸುತ್ತಿದ್ದೀರ. ಅಂದುಕೊಂಡತೆ ಅಚ್ಚುಕಟ್ಟಾಗಿ ಸಿನಿಮಾ ಮುಗಿಸಿಕೊಂಡಿದ್ದೇವೆ. ದೊಡ್ಮನೆಯಿಂದ ಬೆಂಬಲ ಸಿಕ್ಕಿದೆ. ಶಿವಣ್ಣ ಸಿನಿಮಾ ನೋಡಿ ಖುಷಿಪಟ್ಟರು. ಕನ್ನಡಕ್ಕೆ ನಮ್ಮ ತಂಡದಿಂದ ಒಳ್ಳೆ ಸಿನಿಮಾ ಕೊಟ್ಟಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಹಾರೈಸಿ ಎಂದರು.

ನಿರ್ಮಾಪಕ ಅಭಿಷೇಕ್ ಕೋಟ ಮಾತನಾಡಿ, ರಾಘು ಸರ್ ಅದ್ಭುತ ಕಲಾವಿದರು. ಆನಂದ್ ಗೆ ಧನ್ಯವಾದ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆ ಸಿನಿಮಾ ಮಾಡಿ. ಇದೇ 28ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂದರು.

ಡಿಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ನಡಿ ರಾಘು ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ ಕೋಟ ನಿರ್ಮಾಣ ಮಾಡಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜತೇತ್ ಚಂದ್ರ ಸಂಕಲನ, ರಿತ್ವಿಕ್ ಮುರುಳಿದರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸೂರಜ್ ಜೋಯಿಸಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ all ok ಧ್ವನಿಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪಸಂದಾಗಿದೆ "ರವಿಕೆ ಪ್ರಸಂಗ"ದ ಟೀಸರ್ .

Mon Apr 17 , 2023
  ಹೆಣ್ಣುಮಕ್ಕಳು ಮನೆಯಲ್ಲಿ ಯಾವುದೇ ಸಮಾರಂಭವಾದರೂ ಸೀರೆಗೆ ತಕ್ಕಂತೆ ರವಿಕೆ ಹೊಲಿಸಿಕೊಳ್ಳುವುದು ರೂಡಿ. ಅಂತಹ ರವಿಕೆಯ ಕುರಿತಾದ ” ರವಿಕೆ ಪ್ರಸಂಗ” ಎಂಬ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಪ್ರಚಾರದ ಮೊದಲ ಹೆಜ್ಜೆಯಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮಕ್ಕೆ ಮಾಹಿತಿ ನೀಡಿದರು. ನಮ್ಮ ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ […]

Advertisement

Wordpress Social Share Plugin powered by Ultimatelysocial