ರಾಜ್ಯದಲ್ಲಿ ಸದ್ಯಕ್ಕೆ ಆರಂಭವಾಗೋಲ್ಲ ಶಾಲೆ..! –

ಅಕ್ಟೋಬರ್ 15ರಿಂದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲಾ  ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಹೀಗಾಗಿ ರಾಜ್ಯದಲ್ಲೂ ಶಾಲೆಗಳನ್ನು ಆರಂಭಿಸಲಾಗುತ್ತಾದಾ ಎಂಬ ಪ್ರಶ್ನೆ ಮೂಡಿತ್ತು.ಆದರೆ ತರಾತುರಿಯಲ್ಲಿ ಅಕ್ಟೋಬರ್ 15ರಿಂದ ಶಾಲಾ  ಕಾಲೇಜುಗಳನ್ನು ಆರಂಭಿಸುವ ಕುರಿತು ರಾಜ್ಯ ಸರ್ಕಾರ ತೀರ್ಮಾನಿಸುವುದಿಲ್ಲ ಎಂದು ಹೇಳಲಾಗಿದೆ. ಹೀಗಾಗಿಯೇ ತಜ್ಞರು ಹಾಗೂ ಪೋಷಕರ ಜೊತೆ ಚರ್ಚೆಗಳನ್ನು ನಡೆಸಲಾಗುತ್ತಿದ್ದು, ಆ ಬಳಿಕವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೊರೊನಾ ಸೋಂಕಿಗೊಳಗಾಗಿ ಕ್ವಾರಂಟೈನ್ ನಲ್ಲಿದ್ದು ಇಂತಹ ಸಂದರ್ಭದಲ್ಲೂ ತಜ್ಞರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸಮಾಲೋಚನೆ ನಡೆಸುತ್ತಿದ್ದಾರೆ. ಶಾಲಾ ಕಾಲೇಜುಗಳನ್ನು ಆರಂಭಿಸುವ ಸಾಧಕ – ಬಾಧಕಗಳ ಪರಿಶೀಲನೆ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಒಂದೇ ವಾರದಲ್ಲಿ ಆರ್.ಸಿ.ಬಿ ಭವಿಷ್ಯ ನಿರ್ಧಾರ

Thu Oct 8 , 2020
ಕಪ್ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂರ್ಜರ್ಸ್ ಬೆಂಗಳೂರು ತಂಡವು ಈ ಭಾರಿಯ ಟೂರ್ನಿಯಲ್ಲಿ ಮಿಶ್ರ ಫಲಿತಾಂಶ ಅನುಭವಿಸಿದೆ. 13 ನೇ ಆವೃತಿಯ ಟೂರ್ನಿಯಲ್ಲಿ ಆರ್.ಸಿ.ಬಿ ತಂಡವು ಒಟ್ಟು 5 ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಗೆಲುವಿನ ನಗೆ ಬೀರಿದ್ರೆ, ಎರಡರಲ್ಲಿ ಸೋಲಿನ ರುಚಿ ಕಂಡಿದೆ. ತಂಡದ ಫಲಿತಾಂಶದ ಕುರಿತು ಮೌನ ಮುರಿದಿರುವ ಆರ್.ಸಿ.ಬಿ ಕೋಚ್ ಸೈಮನ  ಕ್ಯಾಟೀಚ್,  “ಮುಂದಿನ  ಒಂದು ವಾರದಲ್ಲಿ ಆರ್.ಸಿ.ಬಿ ತಂಡವು ನಾಲ್ಕು ಪಂದ್ಯಗಳನ್ನಾಡಲಿವೆ. ಇದರಲ್ಲಿ ಭರ್ಜರಿ ಪ್ರದರ್ಶನ ತೋರಿದ್ರೆ […]

Advertisement

Wordpress Social Share Plugin powered by Ultimatelysocial