ವಾರದ ಮೊದಲ ದಿನವೇ ಷೇರು ಪೇಟೆಯಲ್ಲಿ ಕುಸಿತ: 2000 ಅಂಕಗಳಿಂದ ಕುಸಿದ ಸೆನ್ಸೆಕ್ಸ್..​..!

ವಾರದ ಆರಂಭದ ದಿನವಾದ ಇಂದೇ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದು ಆರ್ಥಿಕ ತಜ್ಞರು ಇದನ್ನು ಬ್ಲ್ಯಾಕ್​ ಮಂಡೇ ಎಂದಿದ್ದಾರೆ. ಬಿಎಸ್​ಇ ಸೆನ್ಸೆಕ್ಸ್​​​ ಇಂದು 2000ಕ್ಕೂ ಅಧಿಕ ಅಂಕಕ್ಕೆ ಕುಸಿದಿದೆ. ಸೆನ್ಸೆಕ್ಸ್​ ಹಾಗೂ ನಿಫ್ಟಿಗಳೆರಡೂ ಶೇಕಡಾ 3-3 ಕುಸಿತದೊಂದಿಗೆ ವಹಿವಾಟನ್ನು ನಡೆಸುತ್ತಿವೆ.

ಮಿಡ್​ ಕ್ಯಾಪ್​ ಸೂಚ್ಯಂಕವು ಕಳೆದ 9 ತಿಂಗಳ ಅವಧಿಯಲ್ಲಿಯೇ ಅತೀ ಹೆಚ್ಚು ಕುಸಿತ ಕಂಡಿದೆ. ನಿಫ್ಟಾ ಇಂಟ್ರಾ ಡೇನಲ್ಲಿ 17000ಕ್ಕಿಂತ ಕಡಿಮೆಗೆ ಕುಸಿದಿದೆ.

ಹಾಗೂ ನಿಫ್ಟಿ ಕಳೆದ ವರ್ಷದ ಡಿಸೆಂಬರ್ 27ರ ಬಳಿಕ ಇದೇ ಮೊದಲ ಬಾರಿಗ 17 ಸಾವಿರಕ್ಕಿಂತ ಕಡಿಮೆಯಾಗಿದೆ. ಏಪ್ರಿಲ್​ 2021ರಿಂದ ನಿಫ್ಟಿ ಇಂಡ್ರಾ ಡೇನಲ್ಲಿ ಇದೊಂದು ಅತೀದೊಡ್ಡ ಕುಸಿತ ಎನಿಸಿದೆ.

ನಿಫ್ಟಿ 620 ಪಾಯಿಂಟ್​ಗಳಿಂದ ಭರ್ಜರಿ ಕುಸಿತ ಕಂಡಿದೆ. ಹಾಗೂ ಇದು 16,997.85ಕ್ಕೆ ಕುಸಿತ ಕಂಡಿದೆ. ಅಂದರೆ ನಿಫ್ಟಿ 17000ಕ್ಕಿಂತ ಕಡಿಮೆಯಾಗಿದೆ. ಸೆನ್ಸೆಕ್ಸ್​ನಲ್ಲಿ 2000 ಅಂಕಗಳ ಭಾರೀ ಕುಸಿತವು ದಾಖಲಾಗಿದೆ.

ಮಧ್ಯಾಹ್ನ 2:13ರ ಸುಮಾರಿಗೆ ಸೆನ್ಸೆಕ್ಸ್​​ 1960.53 ಅಂಕ ಅಂದರೆ 3.32 ಶೇಕಡಾ ಕುಸಿದ ಪರಿಣಾಮ 57,076.65ರಲ್ಲಿ ವಹಿವಾಟನ್ನು ನಡೆಸುತ್ತಿದೆ. ನಿಫ್ಟಿ 597. 70 ಅಂಕ ಅಥವಾ 3.39 ಶೇಕಡಾಗೆ ಕುಸಿದು 17, 019ಕ್ಕೆ ಕುಸಿತ ಕಂಡಿದೆ.

ಇಂದು ಷೇರು ಮಾರುಕಟ್ಟೆ ಪತನವಾದ ಪರಿಣಾಮ ಮಾರುಕಟ್ಟೆ ಬಂಡವಾಳದಲ್ಲಿ ಹೂಡಿಕೆದಾರರ ಒಟ್ಟು 8 ಲಕ್ಷ ಕೋಟಿ ರೂಪಾಯಿಗಳು ಮುಳುಗಿದೆ. ಶುಕ್ರವಾರದಂದು ಮಾರುಕಟ್ಟೆ ಬಂಡವಾಳ 270 ಲಕ್ಷ ಕೋಟಿಗಳಷ್ಟಿತ್ತು. ಇಂದು ಇದು 262 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬರುವ 700bhp ಫೆರಾರಿ 488;

Mon Jan 24 , 2022
ವದಂತಿಗಳು ಯಾವುದಾದರೂ ಇದ್ದರೆ, 488 GTO ಅನ್ನು 488 ರ ಹೆಚ್ಚು ಶಕ್ತಿಯುತ ಮತ್ತು ಹಾರ್ಡ್‌ಕೋರ್ ಆವೃತ್ತಿಯಾಗಿ ವಿನ್ಯಾಸಗೊಳಿಸಲಾಗಿದೆ, ಇದು ಟ್ರ್ಯಾಕ್ ಕಾರ್ಯಕ್ಷಮತೆಗೆ ಆದ್ಯತೆ ನೀಡುತ್ತದೆ – 458 ಇಟಾಲಿಯಾಕ್ಕೆ 458 ಸ್ಪೆಶಲಿ ಇದ್ದಂತೆಯೇ. ಮುಂಬರುವ ಸೂಪರ್‌ಕಾರ್‌ನ ಪರೀಕ್ಷಾ ಮೂಲಮಾದರಿಯು ಅದರ ಕೆಲವು ಭಾಗಗಳನ್ನು ಮರೆಮಾಚುತ್ತದೆ, ಹೀಗಾಗಿ ನವೀಕರಿಸಿದ ಪ್ರದೇಶಗಳ ಮೇಲೆ ನಮ್ಮ ಗಮನವನ್ನು ಸೆಳೆಯುತ್ತದೆ. ಬಂಪರ್‌ನ ಆಕಾರವು GTB ಯಂತೆಯೇ ಇರುತ್ತದೆ ಮತ್ತು ಯಾವುದೇ ಹೆಚ್ಚುವರಿ ವಾಯುಬಲವೈಜ್ಞಾನಿಕ ಅನುಬಂಧಗಳು […]

Advertisement

Wordpress Social Share Plugin powered by Ultimatelysocial