ವಿಶ್ವಾಸಮತ ಯಾಚನೆಗೆ ನಮಗೆ ಅಗತ್ಯವಾದ ಸಂಖ್ಯಾಬಲ

ರಾಜಸ್ಥಾನದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದೆ. ಈ ನಡುವೆ ನಮಗೆ ಸಂಪೂರ್ಣ ಬಹುಮತವಿದೆ. ಆದಷ್ಟು ಶೀಘ್ರ ನಾವು ಅಧಿವೇಶನ ಕರೆಯುತ್ತೇವೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಭಿಪ್ರಾಯ ಪಟ್ಟಿದ್ದಾರೆ. ನಮ್ಮೆಲ್ಲಾ ಕಾಂಗ್ರೆಸ್ ಶಾಸಕರು ಒಂದಾಗಿದ್ದೇವೆ. ಶೀಘ್ರ ಅಧಿವೇಶನ ಕರೆದು, ನಾವು ಬಹುಮತ ಸಾಬೀತು ಪಡಿಸಲಿದ್ದೇವೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಡಿಸಿಎಂ ಆಗಿದ್ದ ಸಚಿನ್ ಪೈಲಟ್ ಸರ್ಕಾರದ ವಿರುದ್ಧ ತಿರುಗಿ ನಿಂತ ನಂತರ ರಾಜಕೀಯ ಅಸ್ಥಿರತೆ ಎದುರಾಗಿತ್ತು.

ಸಚಿನ್ ಪೈಲಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈ ಮಧ್ಯೆ ಸ್ಪೀಕರ್ ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರಿಗೆ ಅನರ್ಹತೆಯ ನೋಟಿಸ್ ನೀಡಿದ್ದರು. ಈ ವಿಚಾರ ಈಗ ಕೋರ್ಟ್ ಮೆಟ್ಟಿಲೇರಿದೆ. ಸಚಿನ್ ಪೈಲಟ್ ಬೆಂಬಲಿತ ಶಾಸಕರು ಇಲ್ಲದ ಹೊರತಾಗಿಯೂ ವಿಶ್ವಾಸಮತ ಯಾಚನೆಗೆ ನಮಗೆ ಅಗತ್ಯವಾದ ಸಂಖ್ಯಾಬಲ ಇದೆ. ಹೀಗಾಗಿ ಸೂಕ್ತ ಸಮಯದಲ್ಲಿ ಅಧಿವೇಶನ ಕರೆಯುತ್ತೇವೆ. ಅಧಿವೇಶನ ಕರೆದಾಗ ಭಿನ್ನಮತೀಯ ಶಾಸಕರೂ ಸಹ ಪಾಲ್ಗೊಳ್ಳಲಿದ್ದಾರೆ ಎಂದು ಸಿಎಂ ಗೆಹ್ಲೋಟ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬೀದರ ಜಿಲ್ಲೆಯಲ್ಲಿ  ಕೊರೊನಾ ಆರ್ಭಟ

Fri Jul 24 , 2020
ಬೀದರ ಜಿಲ್ಲೆಯಲ್ಲಿ  ಕೊರೊನಾ ಆರ್ಭಟ ಮುಂದುವರದಿದೆ ಮತ್ತೆ 95 ಜನರಲ್ಲಿ ಸೋಂಕು ಇರುವುದು ದೃಡಪಟ್ಟಿದೆ.  ಕಳೆದ  ಮೂರು ದಿನಗಳಲ್ಲಿ 234 ಸೋಂಕು ದೃಢಪಟ್ಟಿದೆ. ಹಿನ್ನಲೆಯಲ್ಲಿ ದಿನ ದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದು ಕೊರೊನಾ ಆರ್ಭಟ ಮುಂದುವರೆಯುತ್ತದೆ. ಕೊರೊನಾ  ವಾರಿಯರ್ಸಗಳಲ್ಲಿಯೂ ಆತಂಕ ಹೆಚ್ಚಿದೆ ವೈದ್ಯರು, ಸಿಬ್ಬಂದಿ ಸೇರಿದಂತೆ ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಒಟ್ಟು ಸೋಂಕಿತರ ಸಂಖ್ಯೆ 1637 ಏರಿಕೆಯಾಗಿದೆ.  ಇದುವರೆಗೂ 69 ಜನರು […]

Advertisement

Wordpress Social Share Plugin powered by Ultimatelysocial