ಧನಂಜಯ ಶಿಲ್ಪಿ ಶಿಲ್ಪಕಲೆಯಲ್ಲಿ ಪ್ರಸಿದ್ಧರಾಗಿದ್ದವರು.

 

ಧನಂಜಯ ಶಿಲ್ಪಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 1934ರ ಜನವರಿ 20ರಂದು ಜನಿಸಿದರು. ತಂದೆ ಶಿವಬಸಪ್ಪ. ತಾಯಿ ಮಾಣಿಕ್ಕಮ್ಮ. ಅಥಣಿಯಲ್ಲಿ ಪ್ರಾರಂಭಿಕ ಶಿಕ್ಷಣ ಪೂರೈಸಿ ಬೆಳಗಾವಿಯ ಸರದಾರ್ ಹೈಸ್ಕೂಲಿನಲ್ಲಿ ಓದಿದರು. ಚಿಕ್ಕಂದಿನಿಂದಲೂ ಧನಂಜಯ ಶಿಲ್ಪಿ ಮಣ್ಣಿನ ಮೂರ್ತಿಗಳನ್ನು ರಚಿಸಿ ಅಕ್ಕಪಕ್ಕದವರನ್ನು ಬೆರಗುಗೊಳಿಸುತ್ತಿದ್ದರು. ಹೈಸ್ಕೂಲಿನ ಉಪಾಧ್ಯಾಯರಾದ ಸಿ.ವಿ. ಕಾರದಗಿಯವರು ಶಿಲ್ಪಕಲೆ ಮತ್ತು ಚಿತ್ರಕಲೆಗೆ ಕೊಟ್ಟ ಪ್ರೋತ್ಸಾಹದಿಂದ ವಿದ್ಯಾರ್ಥಿಯಾಗಿದ್ದಾಗಲೇ ಕಲಾಸ್ಪರ್ಧೆಯಲ್ಲಿ ಭಾಗವಹಿಸಿ 300 ರೂ ಪ್ರಥಮ ಬಹುಮಾನ ಪಡೆದಿದ್ದರು.
ಧನಂಜಯ ಶಿಲ್ಪಿ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದರು. ಅವರಿಗೆ ಮುಂಬಯಿಯ ಕಲಾಶಾಲೆ ಸೇರಬೇಕೆಂಬ ಆಸೆಯಿತ್ತು. ಆದರೆ ಬಡತನದ ಬದುಕು. ಹೀಗಾಗಿ ಓದಿಗೆ ತಿಲಾಂಜಲಿ ಇತ್ತು ಗ್ರಾಮ ಸೇವಕನ ಹುದ್ದೆಗೆ ತೊಡಗಿದರು. ಕೆಲಕಾಲ ಸೋಷಿಯಲ್ ವೆಲ್‌ಫೇ‌ರ್ ಇನ್‌ಸ್ಪೆಕ್ಟರ್‌ ಹುದ್ದೆ ನಿರ್ವಹಿಸಿದರು. ಉದ್ಯೋಗ ಬೇಸರ ತರಿಸಿ ಮುಂಬಯಿಯ ಜೆ.ಜೆ. ಕಲಾಶಾಲೆ ಸೇರಿದರು.
ಧನಂಜಯ ಶಿಲ್ಪಿ ಸದಾ ಪ್ರಥಮ ರ್ಯಾಂಕ್ ಸಾಧನೆಯಲ್ಲೇ ಕಲಿಕೆ ಮಾಡಿ ಮೂರು ಶಿಷ್ಯವೇತನಗಳನ್ನು ಪಡೆದರು. ಮಹಾರಾಜ ಆಫ್ ಕಚ್ ಎಂಡೋಮೊಟ್ ಸ್ಕಾಲರ್‌ಷಿಪ್, ಸೆಂಟ್ರಲ್ ಗೌರ್ನಮೆಂಟ್ ಮೆರಿಟ್ ಸ್ಕಾಲರ್‌ಷಿಪ್, ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಮೆರಿಟ್ ಸ್ಕಾಲರ್‌ಷಿಪ್ ಇವುಗಳಿಂದ ಕಲಿಕಾ ದಾಹ ಹೆಚ್ಚಾಯಿತು. ಕಲ್ಲು, ಸಿಮೆಂಟು, ಲೋಹ, ಪ್ಲಾಸ್ಟರ್ ಆಫ್ ಪ್ಯಾರಿಸ್, ಅಮೃತಶಿಲೆ ಎಲ್ಲದರಲ್ಲೂ ಕೆತ್ತನೆಯ ಕೆಲಸದಲ್ಲಿ ಅಸಾಧಾರಣ ಪ್ರತಿಭೆ ತೋರಿದರು.
ಧನಂಜಯ ಶಿಲ್ಪಿ ಶಿಕ್ಷಣ ಮುಗಿಸಿ ಹಲವಾರು ಕಡೆ ಉದ್ಯೋಗ ಮಾಡಿದರು. ಕಲ್ಕತ್ತೆಯ ಬೆಂಗಾಲ್ ಪಾಟ್ರಿಜ್ ಕಂಪನಿ ‘ಚೀಫ್ ಮಾಡಲರ್’ ಆಗಿ ನಂತರ ಓದಿದ ಜೆ.ಜೆ. ಕಲಾಶಾಲೆಯ ಉಪನ್ಯಾಸಕರಾಗಿ ಸೇರಿ ಡೀನ್ ಹಂತದವರೆಗೆ ಹೋದರೂ ಆತ್ಮಾಭಿಮಾನಿಯಾದ ಧನಂಜಯರವರು ರಾಜೀನಾಮೆ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃದ್ಧನಿಗೆ ಡಿಕ್ಕಿ ಹೊಡೆದು 8 ಕಿ.ಮೀ.ವರೆಗೆ ಎಳೆದೊಯ್ದು ಕೊಂದ ಕಾರು ಚಾಲಕ.

Sun Jan 22 , 2023
ಪಾಟ್ನಾ: ವೇಗವಾಗಿ ಬಂದ ಕಾರೊಂದು 70 ವರ್ಷದ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದು 8 ಕಿ.ಮೀ ದೂರ ಎಳೆದೊಯ್ದು ಆತನನ್ನು ಕೊಂದ ಘಟನೆ ಶುಕ್ರವಾರ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ನಂತ್ರ, ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಮೃತನನ್ನು ಶಂಕರ್ ಚೌಧರಿ (70) ಎಂದು ಗುರುತಿಸಲಾಗಿದೆ. ಶಂಕರ್ ಚೌಧರಿ ತಮ್ಮ ಬೈಸಿಕಲ್‌ನಲ್ಲಿ ಎನ್‌ಎಚ್ -28 ರ ಕೊಟವಾ ಬಳಿ ರಸ್ತೆ ದಾಟುತ್ತಿದ್ದಾಗ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ, […]

Advertisement

Wordpress Social Share Plugin powered by Ultimatelysocial