ಕಾಲೇಜು ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ ಪಾರ್ಟ್‌ ಟೈಮ್‌, ವರ್ಕ್‌ ಫ್ರಮ್ ಹೋಮ್ ಜಾಬ್‌

ಇಂದು ಇಂಟರ್ನೆಟ್‌ ಜಗತ್ತು ಸಂಪಾದನೆಯನ್ನು ಸುಲಭಗೊಳಿಸಿದೆ. ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದನೆ ಮಾಡಲು ಅವಕಾಶ ನೀಡಿದೆ. ವಿದ್ಯಾರ್ಥಿಗಳು ಓದಿನ ಜತೆಗೆ ತಮ್ಮ ಖರ್ಚು ವೆಚ್ಚಗಳಿಗೆ ತಾವೇ ಸಂಪಾದನೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಗೃಹಿಣಿ ಮನೆಯಲ್ಲೇ ಸಂಸಾರ ನಿಭಾಯಿಸಿಕೊಂಡು ಜತೆಗೆ ಪಾರ್ಟ್‌ ಟೈಮ್‌ ಉದ್ಯೋಗವನ್ನು ಮನೆಯಿಂದಲೇ ಮಾಡಬಹುದಾಗಿದೆ. ಅಂತಹ ಅವಕಾಶವನ್ನು ಇಂದಿನ ಜಗತ್ತು ನೀಡಿದೆ. ಅದಕ್ಕೆಲ್ಲಾ ಮೂಲಕ ಕಾರಣ ಇಂಟರ್ನೆಟ್, ಡಿಜಿಟಲೈಜೇಷನ್ ಆಗಿದೆ. ಈ ರೀತಿ ಆನ್‌ಲೈನ್‌ ವರ್ಕ್‌ ಫ್ರಮ್ ಹೋಮ್‌ ಜಾಬ್ ಮಾಡಬೇಕೆಂದರೆ ಕೆಲವು ಬೇಸಿಕ್‌ ಸ್ಕಿಲ್‌ಗಳಾದ ಸಂವಹನ (ಇಂಗ್ಲಿಷ್‌ ಭಾಷೆಯಲ್ಲಿ), ಕಂಪ್ಯೂಟರ್ ಬಳಕೆ ಅರಿವು ಬೇಕೆ ಬೇಕು. ಇವುಗಳಿದ್ದರೆ ಇಂದಿನ ಜಗತ್ತಿನಲ್ಲಿ ಪಾರ್ಟ್‌ ಟೈಮ್‌ ಅಥವಾ ಫುಲ್‌ ಟೈಮ್‌ ಆನ್‌ಲೈನ್‌ ವರ್ಕ್‌ ಫ್ರಮ್‌ ಹೋಮ್ ಜಾಬ್‌ ಖಂಡಿತ ಪಡೆಯಬಹುದಾಗಿದೆ.ಕಾಲೇಜು ವಿದ್ಯಾರ್ಥಿಗಳು ತಮ್ಮ ಖರ್ಚು ತಾವೇ ಬರಿಸಿಕೊಳ್ಳಲು ಪಾರ್ಟ್‌ ಟೈಮ್‌ ಆನ್‌ಲೈನ್‌ ಜಾಬ್ ನಾದ್ರು ಮಾಡಬೇಕು ಎಂದುಕೊಳ್ಳುವುದು ಈಗ ಸಹಜವಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಇಂದಿನ ಲೇಖನದಲ್ಲಿ ಯಾವೆಲ್ಲ ಆನ್‌ಲೈನ್‌ ವರ್ಕ್‌ ಫ್ರಮ್ ಹೋಮ್‌ ಪಾರ್ಟ್‌ ಟೈಮ್‌ ಜಾಬ್ ಮಾಡಬಹುದು ಎಂದು ತಿಳಿಸಲಾಗಿದೆ.
ಈ ಕೆಳಗಿನ ಆನ್‌ಲೈನ್‌ ಜಾಬ್‌ಗಳು ಒಮ್ಮೆ ಪಡೆಯುವುದು ಕಷ್ಠ. ಒಮ್ಮೆ ನೀವು ಆರಂಭಿಸಿದರೆ ದೀರ್ಘಕಾಲದ ಸ್ಕಿಲ್ ಪಡೆದು, ಇದರಲ್ಲೇ ನೀವು ಉತ್ತಮ ಪ್ರೊಫೇಶನಲ್‌ಗಳಾಗಬಹುದು, ಕರಿಯರ್ / ಬ್ಯುಸಿನೆಸ್ ರೂಪಿಸಿಕೊಳ್ಳಬಹುದು.ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಕೆಲವು ವಿಷಯಗಳಲ್ಲಿ ಪಾಸ್‌ ಆಗಲು ಶ್ರಮ ಪಡುತ್ತಾರೆ. ಆದರೆ ನೀವು ಅವರಿಗೆಲ್ಲಾ ಬೋಧಿಸುವ ಜ್ಞಾನವಂತರೂ, ಬುದ್ಧಿವಂತರಾಗಿದ್ದೀರಾ.. ಅಂತಹ ಒಂದು ಸ್ಕಿಲ್‌ ನಿಮಗಿದ್ದರೆ ನೀವು ಅವರಿಗೆ ಟೀಚ್ ಮಾಡಬೇಕಿಲ್ಲ. ಶಾಲಾ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟೀಚಿಂಗ್ ಮಾಡಿ ಹಣ ಗಳಿಸಬಹುದಾಗಿದೆ. ಕೇವಲ ಭೌತಿಕವಾಗಿ ಮಾತ್ರವಲ್ಲದೇ ಉತ್ತಮ ಸಂವಹನ ಭಾಷೆಯಿಂದ ಜಗತ್ತಿನ ಯಾವುದೇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಟ್ಯೂಷನ್‌ ಮಾಡಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಸಿಎಂ ಸಿದ್ದು ಕ್ಷೇತ್ರ ಗೊಂದಲಕ್ಕೆ ತೆರೆ ಎಳೆದ ಮನೆ ದೇವರು.

Fri Jan 13 , 2023
ಮಂಡ್ಯ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಕಳೆದ ಚುನಾವಣೆಯಲ್ಲಿ ಸ್ವ ಜಿಲ್ಲೆಯಲ್ಲೇ ಸಿದ್ದುಗೆ ಹೀನಾಯ ಸೋಲಾಗಿತ್ತು. ಆ ಸೋಲಿಂದ ಕಂಗೆಟ್ಟ ಸಿದ್ದರಾಮಯ್ಯ, ಈ ಬಾರಿಯೂ ಎರಡು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳೀತಾರಾ? ಅಥವಾ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸ್ತಾರಾ? ಸಿದ್ದುಗೆ ಸೇಫ್​ ಝೋನ್​ ಯಾವುದು? ಎಂಬಿತ್ಯಾದಿ ಪ್ರಶ್ನೆಗೆ ಪಕ್ಷದ ಕಾರ್ಯಕರ್ತರು ಮಾತ್ರವಲ್ಲ, ಕುಟುಂಬಸ್ಥರಲ್ಲೂ ಎದ್ದಿದೆ. ಈ ಕುರಿತು ಸಿದ್ದರಾಮಯ್ಯರ ಕುಟುಂಬದ […]

Advertisement

Wordpress Social Share Plugin powered by Ultimatelysocial