ನೆಟ್‌ಫ್ಲಿಕ್ಸ್‌ನೊಂದಿಗೆ ಟಾಟಾ ಪ್ಲೇ ಬಿಂಜ್ ಕಾಂಬೊ ಯೋಜನೆ;

ಟಾಟಾ ಸ್ಕೈ ಇದೀಗ ಟಾಟಾ ಪ್ಲೇ ಹೆಸರಲ್ಲಿ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿರುವುದು ತಿಳಿದಿರುವ ಸಂಗತಿ. ಇತ್ತೀಚೆಗೆ ಟಾಟಾ ಪ್ಲೇ ಬಿಂಜ್ ಕಾಂಬೊ ಯೋಜನೆಗಳನ್ನು ಪರಿಚಯಿಸಿದ್ದು, ಈಗ ನೆಟ್‌ಫ್ಲಿಕ್ಸ್ ಅನ್ನು ಸಹ ನೀಡುತ್ತದೆ. ಟಿವಿ ಚಾನೆಲ್‌ಗಳು ಒಟಿಟಿ ಅಪ್ಲಿಕೇಶನ್‌ಗಳಾದ ಡಿಸ್ನಿ + ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ, ಸೋನಿ ಲೈವ್, ಝೀ5, ವೂಟ್ ಸೇಸೇರಿದಂತೆ ಇತರೆ ಪ್ಲಾಟ್‌ಫಾರ್ಮ್ ಗಳನ್ನು ಒಳಗೊಂಡಿವೆ.

ನೆಟ್‌ಫ್ಲಿಕ್ಸ್‌ನೊಂದಿಗೆ ಟಾಟಾ ಪ್ಲೇ ಬಿಂಜ್ ಕಾಂಬೊ ಯೋಜನೆಗಳು ಈಗ ಲಭ್ಯ
ಟಾಟಾ ಪ್ಲೇ ಬಿಂಜ್ ಕಾಂಬೋ (Tata Play Binge Combo) ಯೋಜನೆಗಳು ಟಾಟಾ ಜಿಂಜ್ ಮೊಬೈಲ್ ಅಪ್ಲಿಕೇಶನ್ (iOS ಮತ್ತು Android ಎರಡರಲ್ಲೂ ಲಭ್ಯವಿದೆ) ಅಥವಾ ಟಾಟಾ ಪ್ಲೇ ಬಿಂಜ್ ಪ್ಲಸ್‌ ಸೆಟ್ ಟಾಪ್ ಬಾಕ್ಸ್ ಮೂಲಕ ಬಳಕೆದಾರರಿಗೆ ಒಂದೇ ಚಂದಾದಾರಿಕೆಯಲ್ಲಿ ಹಲವು ಓಟಿಟಿ (OTT) ಅಪ್ಲಿಕೇಶನ್‌ಗಳಿಂದ ಕಂಟೆಂಟ್‌ ಲಭ್ಯ ಮಾಡುತ್ತದೆ. ಹಾಗೆಯೇ ಈ ಸೇವೆ ಅಮೆಜಾನ್ ಫೈರ್ ಟಿವಿ ಸ್ಟಿಕ್ ಟಾಟಾ ಪ್ಲೇ ಆವೃತ್ತಿಯನ್ನು ಸಹ ಬೆಂಬಲಿಸುತ್ತದೆ.

ಟಾಟಾ ಪ್ಲೇ ಬಿಂಜ್ ಕಾಂಬೊ ಯೋಜನೆ ಯಾವೆಲ್ಲಾ ಓಟಿಟಿ ಹೊಂದಿದೆ?

ಟಾಟಾ ಪ್ಲೇ ಬಿಂಜ್ ಕಾಂಬೊ ಯೋಜನೆಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜೀ5, ಸೋನಿ ಲೈವ್, ವೂಟ್‌ ಸೆಲೆಕ್ಟ್‌, ವೂಟ್‌ ಕಿಡ್ಸ್‌, ಎರೋಸ್ ನವ್, ಹಂಗಾಮಾ ಪ್ಲೇ, ಶಮಾರೋ, ಸನ್ ನೆಕ್ಸ್ಟ್‌, ಎಪಿಕ್ ಆನ್, ಅಮೆಜಾನ್ ಪ್ರೈಮ್ ವಿಡಿಯೋ ಮ್ತು ನೆಟ್‌ಫ್ಲಿಕ್ಸ್‌ ಅನ್ನು ಒಳಗೊಂಡಿವೆ.

ಟಾಟಾ ಪ್ಲೇ ನೆಟ್‌ಫ್ಲಿಕ್ಸ್‌ ಕಾಂಬೊ ಯೋಜನೆಗಳ ಮಾಹಿತಿ

* ತಿಂಗಳ ಶುಲ್ಕ 809ರೂ: ಒಂದು ಡಿವೈಸ್ 28 ಚಾನೆಲ್‌ಗಳು- ಹಿಂದಿ ಟಿವಿ ಹೆಚ್‌ಡಿ ನೆಟ್‌ಫ್ಲಿಕ್ಸ್‌ ಬೇಸಿಕ್ ಕಾಂಬೊ
* ತಿಂಗಳ ಶುಲ್ಕ 849ರೂ: ಒಂದು ಡಿವೈಸ್ 31 ಹೆಚ್‌ಡಿ ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಬೇಸಿಕ್ ಕಾಂಬೊ
* ತಿಂಗಳ ಶುಲ್ಕ 999ರೂ: ಒಂದು ಡಿವೈಸ್ 55 ಹೆಚ್‌ಡಿ ಚಾನೆಲ್‌ಗಳು- ಪ್ರಿಮಿಯಂ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಬೇಸಿಕ್ ಕಾಂಬೊ
* ತಿಂಗಳ ಶುಲ್ಕ 1109ರೂ: 2 ಡಿವೈಸ್ ಸಪೋರ್ಟ್‌, 31 HD (1080p) ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಸ್ಟ್ಯಾಂಡರ್ಡ್‌ ಕಾಂಬೊ
* ತಿಂಗಳ ಶುಲ್ಕ 1249ರೂ: 4 ಡಿವೈಸ್ ಸಪೋರ್ಟ್‌, 31 HD (4K) ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಪ್ರಿಮಿಯಂ ಕಾಂಬೊ
* ತಿಂಗಳ ಶುಲ್ಕ 1269ರೂ: 2 ಡಿವೈಸ್ ಸಪೋರ್ಟ್‌, 55 HD (1080p) ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಸ್ಟ್ಯಾಂಡರ್ಡ್‌ ಕಾಂಬೊ
* ತಿಂಗಳ ಶುಲ್ಕ 1399ರೂ: 4 ಡಿವೈಸ್ ಸಪೋರ್ಟ್‌, 55 HD (4K) ಚಾನೆಲ್‌ಗಳು- ಹಿಂದಿ ಫ್ಯಾಮಿಲಿ ಟಿವಿ ಹೆಚ್‌ಡಿ ಬಿಂಜ್ ನೆಟ್‌ಫ್ಲಿಕ್ಸ್‌ ಪ್ರಿಮಿಯಂ ಕಾಂಬೊ

ಟಾಟಾ ಪ್ಲೇ ಬಿಂಜ್ ಕಾಂಬೊ ಯೋಜನೆಗಳಿಗೆ ಸಬ್‌ಸ್ಕ್ರಿಪ್ಟ್ ಮಾಡಲು ಹೀಗೆ ಮಾಡಿರಿ:

* ಟಾಟಾ ಪ್ಲೇ ಮೊಬೈಲ್ ಅಪ್ಲಿಕೇಶನ್‌ಗೆ ಭೇಟಿ ನೀಡಿ
* https://www.tataplay.com ಗೆ ಲಾಗಿನ್ ಆಗಿ
* ಟಾಟಾ ಪ್ಲೇ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿರಿ
* ಟಾಟಾ ಪ್ಲೇ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ, ಟಾಟಾ ಪ್ಲೇ ಬಿಂಜ್ ಕಾಂಬೋಸ್ ಅನ್ನು ‘ಬಿಂಜ್ ಕಾಂಬೋಸ್’ ಟ್ಯಾಬ್ ಅಡಿಯಲ್ಲಿ ಮ್ಯಾನೇಜ್ ಪ್ಯಾಕ್‌ಗಳಲ್ಲಿ ಕಾಣಬಹುದು -> ಪ್ರಸ್ತುತ ಪ್ಯಾಕ್ ಅನ್ನು ಮಾರ್ಪಡಿಸಿ’

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರೋನಾ ಪಾಸಿಟಿವ್ ರೋಗಿಗಳ ಹತ್ತಿರವೇ ಇದ್ದು, ನಿಮಗೂ ಕೊರೋನಾ ಲಕ್ಷಣಗಳಿದ್ದರೂ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ?

Tue Feb 1 , 2022
ಬೆಂಗಳೂರು: ಕೆಲವೊಮ್ಮೆ ಹೀಗೂ ಆಗುತ್ತದೆ.ಕೊರೋನಾ ಪಾಸಿಟಿವ್ ರೋಗಿಗಳ ಹತ್ತಿರವೇ ಇದ್ದು, ನಿಮಗೂ ಕೊರೋನಾ ಲಕ್ಷಣಗಳಿದ್ದರೂ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ?ಕೆಲವೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡುವಾಗ ಸರಿಯಾಗಿ ಗಂಟಲು ದ್ರವ ಮಾದರಿ ತೆಗೆದುಕೊಳ್ಳದೇ ಇದ್ದರೆ ಈ ರೀತಿಯ ಪ್ರಮಾದಗಳಾಗುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಕೆಲವೊಮ್ಮೆ ಪರೀಕ್ಷೆಗೊಳಪಟ್ಟ ಮೇಲೆ ರೋಗಗ್ರಸ್ತ ವೈರಾಣುಗಳು ಪತ್ತೆಯಾಗಬಹುದು.ಇನ್ನು ಒಮಿಕ್ರಾನ್ ಪ್ರಕರಣಗಳಲ್ಲಿ ಆರು ದಿನಗಳೊಳಗಾಗಿ ಮಾದರಿ ಸಂಗ್ರಹಿಸಿದರೆ ಕೆಲವೊಮ್ಮೆ ಸಂಪರ್ಕಿತರಲ್ಲಿ ಲಕ್ಷಣಗಳು ಕಾಣದೇ […]

Advertisement

Wordpress Social Share Plugin powered by Ultimatelysocial