ಕಲ್ಪನಾ ಚಾವ್ಲಾ

ಬಾಹ್ಯಾಕಾಶ ವಿಜ್ಞಾನ ಲೋಕದ ತಾರೆಯರಲ್ಲಿ ಕಲ್ಲನಾ ಚಾವ್ಲಾ ಹೆಸರು ಸದಾ ಪ್ರಕಾಶಿಸುವಂತದ್ದು.
ಕಲ್ಪನಾ ಚಾವ್ಲಾ ಅವರು ಜನಿಸಿದ ದಿನ 1962 ವರ್ಷದ ಮಾರ್ಚ್ 17. ಹರಿಯಾಣಾದ ಕರ್ನಾಲ್ ಪಟ್ಟಣದಲ್ಲಿ ಜನಿಸಿದ ಕಲ್ಪನಾ ಚಾವ್ಲಾ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಅಮೆರಿಕದಲ್ಲಿ ಎರಡು ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದರು. ಮುಂದೆ ಕಲ್ಪನಾ ಚಾವ್ಲಾ ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಕಾರ್ಯಸಾಧಕಿಯಾದರು. ಅಮೆರಿಕದ ಪ್ರಜೆ ಜಾನ್ ಪಿಯರೆ ಹ್ಯಾರಿಸನ್ ಅವರನ್ನು ವರಿಸಿದರು.
ಮೊದಲು ನಾಸಾದ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಲ್ಪನಾ ಚಾವ್ಲಾ 1995ರಲ್ಲಿ ನಾಸಾದ ಬಾಹ್ಯಾಕಾಶ ಸಂಶೋಧನಾ ಕೆಂದ್ರಕ್ಕೆ ಬಂದು ಬಹುಬೇಗ ತಮ್ಮ ಸಾಮರ್ಥ್ಯಕ್ಕೆ ಹೆಸರಾದರು. 1996ರಲ್ಲಿ ಮೊದಲ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದ ಕಲ್ಪನಾ ಅವರು ಕ್ರಮಿಸಿದ ಯಾನ 10.4 ಮಿಲಿಯನ್ ಕಿಲೋ ಮೀಟರುಗಳಷ್ಟು ವ್ಯಾಪ್ತಿಯದು. ಅವರು ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಬಹಳಷ್ಟು ಯೋಜನೆಗಳ ಪಾತ್ರಧಾರಿಯೂ ಆದರು.
2003ರ ಫೆಬ್ರವರಿ 1ರಂದು ಕೊಲಂಬಿಯಾ ಆಕಾಶನೌಕೆ ತನ್ನ ಗಗನಯಾತ್ರೆ ಮುಗಿಸಿ ಭೂಮಿಗೆ ಮರಳುವಾಗ ತಾಂತ್ರಿಕ ದೋಷದಿಂದಾಗಿ ಅದರಲ್ಲಿದ್ದ ಏಳೂ ಜನ ಗಗನಯಾತ್ರಿಗಳೂ ತಮ್ಮ ಜೀವವನ್ನು ಕಳೆದುಕೊಂಡರು. ಅದರಲ್ಲಿ ಅಪ್ರತಿಮ ಪ್ರತಿಭಾನ್ವಿತೆಯಾದ ನಮ್ಮ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಕೂಡಾ ಒಬ್ಬರಾಗಿದ್ದರು.
ಕಲ್ಪನಾ ಚಾವ್ಲಾ ಅವರ ಗೌರವಾರ್ಥ ಅನೇಕ ಬಾಹ್ಯಾಕಾಶ ಯೋಜನೆ, ಉಪಗ್ರಹ, ರಸ್ತೆ, ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ ಅವರ ಹೆಸರನ್ನು ಅವಿಸ್ಮರಣೀಯವಾಗಿಸುವ ಕೆಲಸವನ್ನು ಭಾರತ ಮತ್ತು ಅಮೆರಿಕೆಗಳೆರಡೂ ಮಾಡಿವೆ. ಒಂದು ವೈಜ್ಞಾನಿಕ ಸಾಧಕ ಜೀವ ಇವೆಲ್ಲಕ್ಕೂ ಮಿಗಿಲಾದುದು. ಅಮೂಲ್ಯವಾದುದು. ಅದು ತನ್ನ ಮಹತ್ವದ ಬೆಳವಣಿಗೆಯ ಪರ್ವ ಕಾಲದಲ್ಲೇ ಮುರುಟಿಹೋಯಿತು ಎಂಬುದು ಮರೆಯಲಾಗದ ಘಟನೆಯಾಗಿ ಇತಿಹಾಸದಲ್ಲಿ ಉಳಿದುಹೋಗಿದೆ.

ಕಲ್ಪನಾ ಚಾವ್ಲಾ ಎಂಬ ಆ ಮಹಾನ್ ಸಾಧಕ ಚೇತನಕ್ಕೆ ನಮ್ಮ ಪ್ರಣಾಮಗಳು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೇಮ್ಸ್ ಚಲನಚಿತ್ರ ವಿಮರ್ಶೆ: ಸ್ನೇಹದ ಸಂದೇಶವನ್ನು ನೀಡುವ ಚಲನಚಿತ್ರದಲ್ಲಿ,ಒನ್ ಮ್ಯಾನ್ ಶೋ ಆಗಿ ಹೊರಹೊಮ್ಮಿದ್ದ ಪುನೀತ್ ರಾಜ್ಕುಮಾರ್ !

Fri Mar 18 , 2022
ಪುನೀತ್ ರಾಜ್ ಕುಮಾರ್ ಅವರ ಅಂತಿಮ ಚಲನಚಿತ್ರ ಇಂದು (ಮಾರ್ಚ್ 17) ಬಿಡುಗಡೆಯಾಗಿದೆ. ಪವರ್ ಸ್ಟಾರ್ ಅವರ ಅಕಾಲಿಕ ನಿಧನದ ನಂತರ ಬೆಳ್ಳಿತೆರೆಯಲ್ಲಿ ಅವರ ದೊಡ್ಡ ಬಿಡುಗಡೆ ಆಗಿರುವುದರಿಂದ ಅಭಿಮಾನಿಗಳು ಭಾವುಕ ಹೃದಯದಿಂದ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಮತ್ತು ಬರಹಗಾರ ಮತ್ತು ನಿರ್ದೇಶಕ ಚೇತನ್ ಕುಮಾರ್ ಅವರು ನಿರಾಸೆಗೊಳಿಸಿಲ್ಲ ಎಂದು ವರದಿ ಮಾಡಲು ನಾವು ಸಂತೋಷಪಡುತ್ತೇವೆ. ತಮ್ಮ ಕಾರ್ಪೊರೇಟ್-ಶೈಲಿಯ ಅಂತರರಾಷ್ಟ್ರೀಯ ಡ್ರಗ್ ಮಾಫಿಯಾದೊಂದಿಗೆ ಭಯೋತ್ಪಾದನೆಯನ್ನು ಹರಡುತ್ತಿರುವ ದರೋಡೆಕೋರರನ್ನು ನಾಶಮಾಡುವ ಕಾರ್ಯಾಚರಣೆಯಲ್ಲಿರುವ […]

Advertisement

Wordpress Social Share Plugin powered by Ultimatelysocial