ವೆಬ್ ಸರಣಿಯಲ್ಲಿ ಕಾಜಲ್ ಬೋಲ್ಡ್ ಲೂಕ್

ಕಾಜಲ್ ಅಗರ್ವಾಲ್ ಲಾಕ್‌ಡೌನ್ ಶುರುವಿನಿಂದಲು ಹಲವು ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ‘ಆಚಾರ್ಯ’ ಸಿನಿಮಾ ಸೇರಿ ಬೇರೆ ಬೇರೆ ಸಿನಿಮಾ ಸೇರಿದಂತೆ ಹಲವು ವಿಚಾರಗಳಲ್ಲಿ ಚರ್ಚೆಯಲ್ಲಿದ್ದಾರೆ. ಇವೆಲ್ಲದರ ನಡುವೆ ಹೆಚ್ಚು ಚರ್ಚೆಯಲ್ಲಿ ಇರುವುದು ವೆಬ್ ಸಿರೀಸ್ ವಿಚಾರವಾಗಿ. ಈಗಾಗಲೇ ದಕ್ಷಿಣ ಭಾರತದ ಮತ್ತು ಬಾಲಿವುಡನ್ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಕಾಜಲ್, ಚೊಚ್ಚಲ ವೆಬ್ ಸಿರೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಆ ಸಿರೀಸ್ ನೋಡಿ ಇಷ್ಟಪಟ್ಟಿರುವ ಅವರು, ನಟಿಸುವುದಕ್ಕೆ ಸೈ ಎಂದಿದ್ದಾರAತೆ. ಅಚ್ಚರಿ ವಿಚಾರ ಏನೆಂದರೆ, ಅ ವೆಬ್ ಸಿರೀಸ್ ಹಾಲಿವುಡ್‌ನಲ್ಲಿ ಸಿದ್ಧವಾಗಿದ್ದ ‘ಕ್ವಾಂಟಿಕೋ’ದ ರಿಮೇಕ್ ಎನ್ನಲಾಗುತ್ತಿದೆ. ಮೂಲ ವೆಬ್ಸಿರೀಸ್‌ನಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಚೂರು ಹೆಚ್ಚೇ ಬೋಲ್ಡ್ ಅವತಾರದಲ್ಲಿ ಅವರು ಎದುರಾಗಿದ್ದರು. ಇದೀಗ ಕಾಜಲ್ ಸಹ ಬೊಲ್ಡ್ ಲುಕ್‌ನಲ್ಲಿ ಎದುರುಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಪತ್ರಕರ್ತರ ಭವನದಲ್ಲಿ ಸಾಂಸ್ಕೃತಿಕ ಕಲಾವಿದರಿಗೆ ದಿನಸಿಕಿಟ್ ವಿತರಣೆ

Sat Jul 25 , 2020
ಕೋಲಾರದಲ್ಲಿ ಕಲಾವಿದರಿಗೆ ತಮ್ಮ ಕೈಲಾದ ಸಹಾಯ ಹಸ್ತ ಜೊತೆಗೆ ನಗರದಲ್ಲಿ ಕಲಾವಿದ ಸಂಘಕ್ಕೆ ಒಂದು ಕಲಾಭವವನ್ನು ನಿರ್ಮಿಸಿ ಕೊಡಲಾಗುವುದು ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಓಂ ಶಕ್ತಿ ಚಲಪತಿ ಹೇಳಿದರು.  ನಗರದ ಪತ್ರಕರ್ತರ ಭವನದಲ್ಲಿ ಶ್ರೀ ಸಾಯಿ ನಂದಾ ದೀಪ ಚಾರಿಟಬಲ್ ಟ್ರಸ್ಟ್, ಅವಿನಾಶ್ ಇವೆಂಟ್ಸ್ ಸಹಯೋಗದಲ್ಲಿ ಲಘು ಸಂಗೀತ ಹಾಗೂ ಸಾಂಸ್ಕೃತಿಕ ಕಲಾವಿದರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ಕೊರೊನಾ ಕಾಲಿಟ್ಟಾಗಿನಿಂದ […]

Advertisement

Wordpress Social Share Plugin powered by Ultimatelysocial