ಕಳಸಾ ಬಂಡೂರಿ ಯೋಜನೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ಬಿಜೆಪಿಯಿಂದ ಸಿಹಿ ಹಂಚಿ ಸಂಭ್ರಮಾಚರಣೆ.

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಳಸಾ-ಬಂಡೂರಿ ವಿಸ್ತ್ರತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಬಿಜೆಪಿ ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಆಚರಣೆ ಮಾಡಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಷಾ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದರು.ಇದೇ ವೇಳೆ ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತನಾಡಿ, ಕಳೆದ ಐದಾರು ದಶಕಗಳ ಅವಿರತ ಹೋರಾಟದ ತಾತ್ವಿಕ ಅಂತ್ಯದ ಫಲವಾಗಿ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಇದಕ್ಕೆ ಕೇಂದ್ರದ ಜಲ ಸಚಿವರು, ಪ್ರಧಾನಿ ನರೇಂದ್ರ ಮೋದಿ, ಹಾಗೂ ರಾಜ್ಯದ ಮುಖ್ಯಮಂತ್ರಿ, ರಾಜ್ಯ ಜಲ ಸಚಿವರ ವಿಶೇಷ ಕಾಳಜಿಯಿಂದ ಕಳಸಾ-ಬಂಡೂರಿಗೆ ಅನುಮೋದನೆ ಸಿಕ್ಕಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಮೂರು ರಾಜ್ಯಗಳ ಜನರಿಗೆ ಅನ್ಯಾಯ ಆಗದ ಹಾಗೇ ವ್ಯಾಜ್ಯ ಇತ್ಯರ್ಥ ಪಡಿಸಿ ರಾಜ್ಯಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಿದ್ದು ಇದು ಸಂತಸ ತಂದಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿಯ ಕಣ್ಣೀರು ಒರೆಸುವ ಕೆಲಸಕ್ಕೆ ರೈತರು ಬಗ್ಗುವುದಿಲ್ಲ..

Thu Dec 29 , 2022
ಬಿಜೆಪಿಯ ಕಣ್ಣೀರು ಒರೆಸುವ ಕೆಲಸಕ್ಕೆ ರೈತರು ಬಗ್ಗುವುದಿಲ್ಲ.. ಕಾಂಗ್ರೆಸ್ ಹೋರಾಟಕ್ಕೆ ಹೆದರಿ ಬಿಜೆಪಿ ಡಿಪಿಆರ್ ಅನ್ನು ಪರಿಷ್ಕರಿಸಿದೆ… ಕಳಸಾ ಬಂಡೂರಿಯ ಸಂಪೂರ್ಣವಾಗಿ ಟೇಡರ ಮಾಡಿಲ್ಲ … ಕೋರ್ಟ್‌ಗಳ ನ್ಯಾಯ ಕರ್ನಾಟಕಕ್ಕೆ ಇದೆ.೪ ಕಡೆ ಬಿಜೆಪಿ ಪಕ್ಷದ ಇದೆ ತಕ್ಷಣ ಜಾರಿ ಮಾಡಬೇಕಿದೆ… ೨ ನೇ ತಾರೀಖಿನ ಹೋರಾಟ ಯಾವೂದೇ ಕಾರಣಕ್ಕೂ ನಿಲ್ಲಿಸುವ ಮಾತೇ ಇಲ್ಲ…. ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದೇನೆ ಹೋರಾಟ ಖಚಿತ…. ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಅನುಭವಿ ಮಾಜಿ […]

Advertisement

Wordpress Social Share Plugin powered by Ultimatelysocial