ಲಕ್ಷ್ಮೇಶ್ವರ ತಾಲೂಕಿನ ಮಹಿಳೆಯರು ಗ್ಯಾಸ್ ಸಿಲಿಂಡರ್ ಹೋರಗೆ ತಂದು ಕಟ್ಟಿಗೆಯಿಂದ ಅಡುಗೆ ಮೂಲಕ ಪ್ರತಿಭಟನೆ ‌!

ಗ್ಯಾಸ್‌ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಆಗಿರುವುದನ್ನು ವಿರೋಧಿಸಿ ಲಕ್ಷ್ಮೇಶ್ವರ ತಾಲೂಕಿನ ಉಳ್ಳಟ್ಟಿ ಗ್ರಾಮದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಗ್ಯಾಸ್ ಸಿಲಿಂಡರ್ ಮನೆಯಿಂದ ಹೋರಗೆ ತಂದು ಕಟ್ಟಿಗೆಯಿಂದ ಅಡುಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ‌ನಡೆಸಿದರು.

ಉದ್ದೇಶಿಸಿ ಮಾತನಾಡಿದ ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಭಾಗ್ಯಶ್ರೀ ಬಾಬಣ್ಣ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‌ನಿಂದಾಗಿ‌ ದೇಶದಲ್ಲಿ ನಾಗರಿಕರು ಆರ್ಥಿಕ ಸಂಕಷ್ಟಕ್ಕೆ ಗುರಿಯಾದ್ದಾರೆ. ಕೂಲಿ ಕಾರ್ಮಿಕರು ಕೆಲಸವಿಲ್ಲದ ಪರಿತಪಿಸುತ್ತಿರುವಾಗ ಕೇಂದ್ರ ಸರ್ಕಾರವು ಪ್ರತಿನಿತ್ಯ ಗ್ಯಾಸ್ ಸಿಲಿಂಡರ್ ಮತ್ತು ದಿನಬಳಕೆಯ ವಸ್ತುಗಳ‌ ಬೆಲೆ ಏರಿಕೆ ಮಾಡಿ‌‌ ಬಡ, ಮಧ್ಯಮ ವರ್ಗ‌ ಹಾಗೂ‌ ಜನಸಾಮಾನ್ಯರನ್ನು ಸಮಸ್ಯೆಗೆ ದೂಡಿದೆ , ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಬಡವರಿಗೆ ಗ್ಯಾಸ್ ಸಿಲಿಂಡರ್ ನೀಡುವ ನೇಪದಲ್ಲಿ ದಿನೆದಿನೆ ದರ ಏರಿಸಿ ಬಡವರ ದುಡ್ಡು ಲೂಟಿ ಮಾಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರಾಷ್ಟ್ರಪತಿ ಮಧ್ಯಪ್ರವೇಶಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಂಡು ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಪುಷ್ಪ 2' ಬಜೆಟ್ ಹೆಚ್ಚುಒಬ್ಬೊಬ್ಬರ ಪಾತ್ರಗಳಿಗೆ ಕತ್ತರಿ ಬೀಳುತ್ತಿದೆ.

Fri Jul 8 , 2022
  ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ ದಕ್ಷಿಣ ಭಾರತದ ಸಿನಿಮಾಗಳಲ್ಲಿ ‘ಪುಷ್ಪ’ ಕೂಡ ಒಂದು. ಅಲ್ಲು ಅರ್ಜುನ್ ಸ್ಟೈಲ್, ಮ್ಯಾನರಿಸಂ, ದೇವಿಶ್ರೀ ಪ್ರಸಾದ್ ಸಾಂಗ್ ಹಾಗೂ ಸುಕುಮಾರ್ ಡೈರೆಕ್ಷನ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಬೇರೆ ಬೇರೆ ಭಾಷೆಯವರೂ ಕೂಡ ‘ಪುಷ್ಪ’ ಸಿನಿಮಾ ನೋಡಿ ಥ್ರಿಲ್ ಆಗಿದ್ದರು. ಬಾಕ್ಸಾಫೀಸ್‌ನಲ್ಲೂ ‘ಪುಷ್ಪ’ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದರಲ್ಲೂ ಬಾಲಿವುಡ್‌ ಮಾರ್ಕೆಟ್‌ನಲ್ಲಿ ‘ಪುಷ್ಪ’ ಮಾಡಿದ ಸದ್ದಿಗೆ ಅಲ್ಲಿನ ಸೂಪರ್‌ಸ್ಟಾರ್‌ಗಳೇ ದಂಗಾಗಿ ಹೋಗಿದ್ದರು. ಈ […]

Advertisement

Wordpress Social Share Plugin powered by Ultimatelysocial