ಚಲನಚಿತ್ರ ವಾಣಿಜ್ಯ ಮಂಡಳಿ ಹೌಸ್​ಫುಲ್​ಗೆ ಅನುಮತಿ ನೀಡುವಂತೆ ಮನವಿ;

ಹೋಟೆಲ್​, ಪಬ್​ಗಳಿಗೆ ನೀಡಿದ್ದ ಶೇ.50ರಷ್ಟು ಭರ್ತಿ ಅವಕಾಶವನ್ನು ಹಿಂಪಡೆಯಲಾಗಿದೆ. ಆದರೆ, ಚಿತ್ರಮಂದಿರಗಳಿಗೆ ವಿಧಿಸಿದ್ದ ರೂಲ್ಸ್​ಗಳನ್ನು ಮುಂದುವರೆಸಿದ್ದಾರೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಗರಂ ಆಗಿದೆ.

ಸಿನಿಮಾ ಥಿಯೇಟರ್ ನಲ್ಲಿ‌ 50-50 ರೂಲ್ಸ್ ಮುಂದುವರಿಕೆ ಹಿನ್ನೆಲೆ, ಸರ್ಕಾರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಅಸಮಾಧಾನ ಹೊರಹಾಕಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ರ್, ಕಾರ್ಯದರ್ಶಿ ಎನ್ ಎಂ ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿ ಸದಸ್ಯರ ನಿಯೋಗ ಸಿಎಂಗೆ ಮನವಿ ನೀಡಿದ್ದಾರೆ.

ಸಿಎಂ ಭೇಟಿ ಬಳಿಕ ಮಂಡಳಿ ಅಧ್ಯಕ್ಷ ಜಯರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ತೊಂದರೆ ಹೇಳಿದ್ದೇವೆ, ಸೋಮವಾರ ಮತ್ತೊಮ್ಮೆ ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇನ್ನೂ ಸೋಮವಾರ ಬಂದು ಸಮಗ್ರ ವಿವರ ಕೊಡುವಂತೆ ಸಿಎಂ ಹೇಳಿದ್ದಾರೆ. ಸೋಮವಾರ ಬಂದು ಮತ್ತೊಮ್ಮೆ ವಿವರ ಕೊಡುತ್ತೇವೆ. ನಾವು ಎಸ್ ಓ ಪಿ ಪಾಲನೆ ಮಾಡುತ್ತಿರುವುದನ್ನು ನಾವು ಅವರ ಗಮನಕ್ಕೆ ತರುತ್ತೇವೆ ಎಂದು ನಿಯೋಗ ಹೇಳಿದೆ. ಬರುವ ಶುಕ್ರವಾರದಿಂದ ಸಿನಿಮಾ ಗೃಹಗಳಿಗೆ ಸಂಪೂರ್ಣ ಅನುಮತಿ ಕೊಡುವ ಭರವಸೆ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

Pixel Notepad ಫೋಲ್ಡಬಲ್ ಸ್ಮಾರ್ಟ್‌ಫೋನ್ Galaxy Z Fold 3 ಗಿಂತ ಕಡಿಮೆ ಬೆಲೆಗೆ

Sat Jan 29 , 2022
ಯುಎಸ್ ಮೂಲದ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಮೊದಲ ಫೋಲ್ಡಬಲ್ ಫೋನ್ ‘ಪಿಕ್ಸೆಲ್ ನೋಟ್‌ಪ್ಯಾಡ್’ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಮತ್ತು ಇದೀಗ ಹೊಸ ವರದಿಯೊಂದು ಇದು ಗ್ಯಾಲಕ್ಸಿ Z ಫೋಲ್ಡ್ 3 ಗಿಂತ ಕಡಿಮೆ ವೆಚ್ಚವಾಗಲಿದೆ ಎಂದು ಹೇಳಿಕೊಂಡಿದೆ. 9to5 Google ನ ವರದಿಯ ಪ್ರಕಾರ, Google ನಿಂದ ಮುಂಬರುವ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನ ಬೆಲೆ ಸುಮಾರು $1,400 ಆಗಿರಬಹುದು, ಇದು $1,800 ಬೆಲೆಯ Samsung Galaxy Z […]

Advertisement

Wordpress Social Share Plugin powered by Ultimatelysocial