ಪೇಟಿಯಂ ಸಿಇಒ ಶೇಖರ್ ಶರ್ಮ ಅರೆಸ್ಟ್, ಜಾಮೀನಿನ ಮೇಲೆ ಬಿಡುಗಡೆ

 

ನವದೆಹಲಿ,ಮಾ.13-ಪೇಟಿಯಂನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ ವಿಜಯ ಶೇಖರ್ ಶರ್ಮ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ವಿಜಯ ಶರ್ಮ ಅವರು ಕಳೆದ ಫೆ.22ರಂದು ದೆಹಲಿಯ ಅರಬಿಂದೋ ಮಾರ್ಗ್‍ನಲ್ಲಿ ಮದರ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಮುಂಭಾಗ ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ಬೆನಿಟಾ ಮೇರಿ ಜೈಕರ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದರು ಎಂಬ ಆರೋಪವಿದೆ.

ಈ ಹಿನ್ನೆಲೆಯಲ್ಲಿ ದೆಹಲಿಯ ಮಾಳ್ವಿಯ ನಗರ ಪೊಲೀಸ್ ಠಾಣೆಯಲ್ಲಿ ಐಪಿಎಸ್ ಸೆಕ್ಷನ್ 279( ಅತಿವೇಗ ಹಾಗೂ ಅಜಾಗರೂಕ ಚಾಲನೆ )ರಡಿ ಪ್ರಕರಣ ದಾಖಲಿಸಲಾಯಿತು.

ಫೆ.22ರಂದು ತಾವು ಬೆಳಗ್ಗೆ 8 ಗಂಟೆಗೆ ಡಿಸಿಪಿ ಅವರ ಕಾರನ್ನು ಚಾಲನೆ ಮಾಡಿಕೊಂಡು ಪೆಟ್ರೋಲ್ ಬಂಕ್ ಬಳಸಿ ಹೋಗುವಾಗ ಮದರ್ಸ್ ಇಂಟರ್‍ನ್ಯಾಷನಲ್ ಸ್ಕೂಲ್ ಬಳಿ ಸಂಚಾರ ದಟ್ಟಣೆ ಇದ್ದು ತಮ್ಮ ಜೊತೆಗಿದ್ದ ಕಾನ್‍ಸ್ಟೇಬಲ್ ಪ್ರದೀಪ್ ಅವರಿಗೆ ಕಾರಿನಿಂದ ಇಳಿದು ಸಂಚಾರವನ್ನು ನಿರ್ವಹಿಸುವಂತೆ ಸಲಹೆ ನೀಡಿದ್ದು, ಅದರ ಪ್ರಕಾರ ಅವರು ಕೆಳಗೆ ಇಳಿದರು.

ಸಂಚಾರ ಕಡಿಮೆಯಾಗುವ ಹಂತದಲ್ಲಿ ವೇಗವಾಗಿ ಬಂದ ಜಾಗ್ವರ್ ರೇಂಜ್‍ರೋವರ್ ಕಾರು ಡಿಸಿಪಿ ಅವರ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು ಎಂದು ಕಾರಿನ ಚಾಲಕ ದೀಪಕ್‍ಕುಮಾರ್ ತಿಳಿಸಿದ್ದಾರೆ. ಆ ಕಾರಿನ ಸಂಖ್ಯೆಯನ್ನು ನಾವು ಬರೆದುಕೊಂಡು ಮಾಳವೀಯ ನಗರ ಪೊಲೀಸರಿಗೆ ದೂರು ನೀಡಿದ್ದೆವು.

ಕಾರಿನ ಮಾಲೀಕರನ್ನು ಪತ್ತೆಹಚ್ಚಿದಾಗ ಅದು ಹರಿಯಾಣದಲ್ಲಿ ನೊಂದಣಿಯಾಗಿದ್ದು, ಮಾಲೀಕರನ್ನು ವಿಜಯ ಶರ್ಮ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ವಿಜಯ ಶರ್ಮ ಅವರಿಗೆ ಕರೆ ಮಾಡಿ ಕರೆಸಿಕೊಂಡು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಜನಗಣತಿಯ ನಿಯಮ'ಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ: ಈ ಬಾರಿ, ನಿಮ್ಮ ಮಾಹಿತಿಯನ್ನು ನೀವೇ 'ಆನ್ ಲೈನ್'ನಲ್ಲಿ ಸಲ್ಲಿಸಲು ಅವಕಾಶ

Sun Mar 13 , 2022
ನವದೆಹಲಿ: ಜನಗಣತಿಯ ( Census ) ಸಂದರ್ಭದಲ್ಲಿ, ಮನೆ ಬಾಗಿಲಿಗೆ ಬಂದು, ಗಣತಿಯನ್ನು ಮಾಡುವ ಕಾರ್ಯ ನಡೆಯುತ್ತಿತ್ತು. ಆದ್ರೇ ಈ ಬಾರಿ ಈ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಮುಂಬರುವ ಜನಗಣತಿಯಲ್ಲಿ ದೇಶದ ಜನರು ತಮ್ಮ ಮಾಹಿತಿಯನ್ನು ತಾವೇ ಆನ್ ಲೈನ್ ನಲ್ಲಿ ಸರ್ಕಾರಕ್ಕೆ ಸಲ್ಲಿಸಲು ಅವಕಾಶ ನೀಡಿದೆ. ಹೌದು.. ಜನಗಣತಿಯ ನಿಯಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಹತ್ತು ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಜನಗಣತಿಯ ನಿಯಮದಲ್ಲಿ ಬದಲಾವಣೆಗೊಳ್ಳಲಿದೆ. ಹೀಗಾಗಿ […]

Advertisement

Wordpress Social Share Plugin powered by Ultimatelysocial