ಹುತ್ತದ ಮಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?????

ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ಮಣ್ಣಿನ ತತ್ವವನ್ನು ಚಿಕಿತ್ಸೆಗೆ ಬಳಸುತ್ತಿದ್ದರು. ಕಪ್ಪು ಮಣ್ಣು ಅಥವಾ ಹುತ್ತದ ಮಣ್ಣನ್ನು ಪ್ರಕತಿ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗೆ ಬಳಸುತ್ತಾರೆ. ಹುತ್ತದ ಮಣ್ಣು ಚರ್ಮದ ವ್ಯಾಧಿಗಳಲ್ಲಿ ವಿಶೇಷ ಪರಿಣಾಮ ಹೊಂದಿದ್ದರೆ ಕಪ್ಪು ಮಣ್ಣು ಸೂರ್ಯ ಕಿರಣಗಳ ಶಕ್ತಿಯನ್ನು ದೇಹಕ್ಕೆ ವರ್ಗಾಯಿಸುವ ಮತ್ತು ದೇಹದಿಂದ ಅಧಿಕ ಉಷ್ಣಾಂಶವನ್ನು ಹೀರುವ ಅಗಾಧಶಕ್ತಿ ಹೊಂದಿದೆ.

ಈ ಚಿಕಿತ್ಸೆಯಿಂದ ಮೊಡವೆಗಳು ಕಡಿಮೆ ಆಗುತ್ತವೆ. ಮೊಡವೆಯಿಂದ ಉಂಟಾದ ಕಲೆಯನ್ನು ಹೋಗಲಾಡಿಸುತ್ತದೆ.ಉರಿಯೂತವನ್ನು ತಡೆಯುತ್ತದೆ. ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ. ಕುಷ್ಠರೋಗ, ಅಲರ್ಜಿ, ಸೋರಿಯಾಸಿಸ್ ಹಾಗೂ ಇತರ ಚರ್ಮರೋಗಗಳಿಗೆ ಮಡ್ ಥೆರಪಿಯಿಂದ ಪರಿಹಾರ ಕಂಡುಕೊಳ್ಳಬಹುದು.

ಮಣ್ಣಿನ ತಯಾರಿಕೆ
ಚಿಕಿತ್ಸೆಗೆ ಬಳಸುವ ಮಣ್ಣನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಬೇಕು. ರಾಸಾಯನಿಕ ಪದಾರ್ಥಗಳಿಂದ ಮುಕ್ತವಾದ ಪ್ರದೇಶದಿಂದ ಮಣ್ಣು ತೆಗೆಯುವುದು ಉತ್ತಮ ಅಥವಾ ಭೂಮಿಯ ಮೇಲ್ಮೈಯಿಂದ 3-4 ಅಡಿ ಆಳದಿಂದ ಮಣ್ಣನ್ನು ತೆಗೆಯುವುದು. ಆ ರೀತಿ ತೆಗೆದ ಮಣ್ಣನ್ನು ಕಲ್ಮಶಗಳಿಂದ ಶುದ್ಧೀಕರಿಸಿ ಎರಡು ದಿನಗಳವರೆಗೆ ಒಣಗಿಸಿ ಮಣ್ಣು ಮೃದುವಾಗುವಂತೆ ಪುಡಿಮಾಡಿ ಶೋಧಿಸಿ ನಂತರ ಒಂದು ಬಕೆಟ್ ನಲ್ಲಿ ನೆನೆ ಹಾಕಬೇಕು.

ಪೂರ್ಣ ಮಣ್ಣಿನ ಸ್ನಾನ
ಹದಮಾಡಿದ ಮಣ್ಣನ್ನು ವ್ಯಕ್ತಿಯ ಪೂರ್ಣ ದೇಹಕ್ಕೆ ಲೇಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಣ್ಣು ಕಿವಿ ಮತ್ತು ಕಣ್ಣುಗಳ ಒಳ ಸೇರದಂತೆ ಎಚ್ಚರ ವಹಿಸಬೇಕು. ಮಣ್ಣನ್ನು ಲೇಪಿಸಿದ ನಂತರ ಸುಮಾರು 45 ನಿಮಿಷಗಳ ವರೆಗೆ ಸೂರ್ಯಕಿರಣಗಳಿಗೆ ಮೈ ಒಡ್ಡಬೇಕು. ನಂತರ ತಣ್ಣೀರಿನ ಸ್ನಾನ ಮಾಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಮಲದ ಬೇರು ಆರೋಗ್ಯಕ್ಕೆ ಎಷ್ಟು ಉಪಕಾರಿ?????

Thu Jan 13 , 2022
ಕಮಲದ  ಬೇರನ್ನು ಹೆಚ್ಚಾಗಿ ಚೀನಾ, ಕೊರಿಯಾ, ಭಾರತ ಮತ್ತು ಜಪಾನ್ ನಲ್ಲಿ ಖಾದ್ಯಗಳಿಗೆ ಬಳಕೆ ಮಾಡಿಕೊಳ್ಳುವರು. ಆದರೆ ಭಾರತೀಯರು ಹಿಂದಿನಿಂದಲೂ ಇದನ್ನು ಆಯುರ್ವೇದದಲ್ಲಿ ಹಲವಾರು ರೀತಿಯ ಕಾಯಿಲೆಗಳ ನಿವಾರಣೆಗೆ ಬಳಕೆ ಮಾಡುತ್ತಲಿದ್ದರು. ಮುಖ್ಯವಾಗಿ ಚರ್ಮ, ಹೊಟ್ಟೆ, ಶ್ವಾಸಕೋಶ ಮತ್ತು ಇತರ ಕಾಯಿಲೆಗಳಿಗೆ ಇದನ್ನು ಬಳಕೆ ಮಾಡಲಾಗುತ್ತಿತ್ತು. ಕಮಲದ ಬೇರಿನಲ್ಲಿರುವ ಪೌಷ್ಠಿಕ ಸತ್ವಗಳು 100 ಗ್ರಾಂ ಹಸಿ ಕಮಲ ಬೇರಿನಲ್ಲಿ 79.10 ಗ್ರಾಂ ನೀರು ಮತ್ತು 74 ಕೆಸಿಎಎಲ್ ಶಕ್ತಿ ಇದೆ. […]

Advertisement

Wordpress Social Share Plugin powered by Ultimatelysocial