ತೇರದಾಳ ಮತಕ್ಷೇತ್ರದಿಂದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ನಾನು ಸಹ ರಾಜೇಂದ್ರ ಅಂಬಲಿ.

ಬಿಜೆಪಿ ಪಕ್ಷದಲ್ಲಿ ನಾನು ಸುಮಾರು ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ ಹಾಗೂ ಬಿಜೆಪಿ ನಗರ ಮಂಡಲ ಅಧ್ಯಕ್ಷ ನಗರ ಘಟಕ ಅಧ್ಯಕ್ಷ ಮತ್ತು ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷನಾಗಿ ಸಹ ಸಾಕಷ್ಟು ವರ್ಷಗಳಿಂದ ಬಡವರ ನೇಕಾರರ ರೈತರ ದೀನ ದಲಿತರ ಸಾಕಷ್ಟು ಕಷ್ಟಗಳ ಸ್ಪಂದಿಸುವ ಕೆಲಸ ನಾನು ಮಾಡಿದ್ದೇನೆ. ಎಲ್ಲಾ ಮತಕ್ಷೇತ್ರದಲ್ಲಿ ಈ ಬಾರಿಗೆ ನೇಕಾರರ ಕುಟುಂಬದವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಬನಹಟ್ಟಿ ನಗರದಲ್ಲಿ ರಾಜೇಂದ್ರ ಅಂಬಲಿ ಅವರ ಸ್ವಗ್ರಹದಲ್ಲಿ ಮತಕ್ಷೇತ್ರದ ಎಲ್ಲ ಸಮಾಜದ ಹಿರಿಯರು ಸೇರಿ ಸುದ್ದಿಗೋಷ್ಠಿ ನಡೆಸಿದರು. ಬಿಜೆಪಿ ಪಕ್ಷದಲ್ಲಿ ಮಲತಾಯಿ ಧೋರಣೆ ನನಗೆ ಮಾಡುತ್ತಿದ್ದು ನನಗೆ ಮತ್ತು ಶಾಸಕ ಸಿದ್ದು ಸವದಿ ಅವರ ಸಂಬಂಧ ಅಪ್ಪ ಮಗನ ಸಂಬಂಧ ಇದ್ದು ಅವರ ಜೊತೆಗಿರುವ ಪಕ್ಷದ ಕೆಲವು ಮುಖಂಡರು ಅವರ ಮತ್ತು ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನೇಕಾರರು ಸುಮಾರು 60 ಲಕ್ಷ ಜನ ಮತದಾರ ಇದ್ದೇವೆ ಆದರೆ ಕೆಲವೇ ಎಂಎಲ್ಸಿ ಹಾಗೂ ಎಂಪಿ ಟಿಕೆಟ್ ನೀಡುವ ಮುಖಾಂತರ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಆದ್ದರಿಂದ ಈ ಬಾರಿ ನಮ್ಮ ಸಮಾಜದಿಂದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ನಾನು ಆಗಿದ್ದು ಆದ್ದರಿಂದ ಹಿರಿಯರು ಮಾರ್ಗದರ್ಶಕರದ ಜನಪ್ರಿಯ ಶಾಸಕರಾದ ಸಿದ್ದು ಸವದಿಯವರು 2013ರಲ್ಲಿ ಪಾರ್ಟಿ ಕಚೇರಿ ಒಳಗೆ ಇದೊಂದು ಸಲಹಾ ನಮಗೆ ಅವಕಾಶ ನೀಡಿ ಮುಂದಿನ ಸಲಹಾ ನಾನೇ ಮುಂದೆ ನಿಂತು ನಿಮಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು. ಕೊಟ್ಟ ಮಾತಿನಂತೆ ತಾವು ಸಹ ಈ ಬಾರಿ ನಡೆಯಿರಿ ನಾನು ನೇಕಾರ ಮತ್ತು ರೈತ ಕುಟುಂಬದಿಂದ ಬಂದವನು ಸಾಕಷ್ಟು ಬಿಜೆಪಿ ಪಕ್ಷದ ಸೇವೆ ಅನುಭವ ಸಹ ನಮಗೆ ಇದ್ದು ಸಮಾಜದ ಪರವಾಗಿ ನನಗೆ ಟಿಕೆಟ್ ನೀಡಿ ಎಂದು ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದು ಅಷ್ಟೇ ಅಲ್ಲದೆ ಬಿಜೆಪಿ ಪಕ್ಷದಲ್ಲಿ ಹೊರಹಾಕುವ ಹುನ್ನಾರು ನಡೆಸುತ್ತಿದ್ದಾರೆ ಆದರೆ ನಾವು ಜಗ್ಗಲ್ಲ ಬಗ್ಗಲ್ಲ ನಿಮ್ಮ ಸಂಚಿಗೆ ನಾನು ಮತ್ತೆ ಪುಟ್ಟಿದೇಳುತ್ತೇನೆ ಹೊರತು ನಾನು ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗೋದಿಲ್ಲ.ಮೊದಲಿನಿಂದಲೂ ಬಿಜೆಪಿ ಕುಟುಂಬದಲ್ಲಿ ಬೆಳೆದು ದೊಡ್ಡವರಾಗಿದ್ದವೇ ಮುಂದೆನೂ ಸಹ ಟಿಕೆಟ್ ಯಾರಿಗೆ ಸಿಗಲಿ ನಾವು ಬಿಜೆಪಿ ಕುಟುಂಬ ಬಿಟ್ಟು ಹೊರಗೆ ಹೋಗೋದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.ಈ ಸಂದರ್ಭದಲ್ಲಿ ನಗರದ ಹಿರಿಯರಾದ ಕಲ್ಲಪ್ಪ ಕುಳ್ಳಿ. ಕಾಡಪ್ಪ ಬಾಬಾನಗರ. ರಾಜು ಬಾಣಕಾರ.ಕುಮಾರ್ ಕದಂ. ಚಂದ್ರು ಕಾಸರ್. ಶಿವಪ್ಪ ದೊಡ್ಡಮನಿ. ನಾಗಪ್ಪ ಮಂಡಿ. ಸೋಮು ಜಾಡಗೌಡ. ಶ್ರೀಶೈಲ್ ದಡೊತಿ. ಪ್ರವೀಣ್ ಕೋಲಾರ್. ಇನ್ನು ಅನೇಕ ಹಿರಿಯರು ಯುವಕರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ಲಕ್ಷ ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿ ಸಾಂತ್ವಾನ ಹೇಳಿದ್ದಾರೆ.

Fri Feb 24 , 2023
  ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸುಂಕೇಶ್ವರ ಗ್ರಾಮದ ಹುತಾತ್ಮ ಯೋಧ ರಾಮು ನಾಯಕ ಅವರ ಕುಟುಂಬಕ್ಕೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ವೈಯಕ್ತಿಕ ಪರಿಹಾರ ಧನ ನೀಡುವ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಮೃತ ಯೋಧ ಪತ್ನಿ ಗೀತಾ ರಾಮಲಿಂಗ ನಾಯಕ ಮತ್ತು ಮಗ ಧನುಷ್ ಅವರಿಗೆ ಸಾಂತ್ವನ ತಿಳಿಸಿ ದುಃಖವನ್ನು ಭರಿಸುವ ಶಕ್ತಿ ಆದೇವರು ನಿಮ್ಮ ಕುಟುಂಬಕ್ಕೆ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಸರ್ಕಾರದ […]

Advertisement

Wordpress Social Share Plugin powered by Ultimatelysocial