ಆಂಧ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್!

 

ಅಮರಾವತಿಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ವರ್ಷಕ್ಕೆ ಏರಿಸುವ ಸುಗ್ರೀವಾಜ್ಞೆಯನ್ನು ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಸರ್ಕಾರ ಇಂದು ಹೊರಡಿಸಿದೆ.
ಈ ನಿಯಮ ಜನವರಿ 1, 2022ರಿಂದಲೇ ಜಾರಿಗೆ ಬರುವಂತೆ ಕ್ರಮವಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರ ನಿರ್ಧಾರವು ನೌಕರರಲ್ಲೂ ಅಚ್ಚರಿ ಮೂಡಿಸಿದೆ.
ನಿವೃತ್ತಿ ವಯಸ್ಸನ್ನು ಹೆಚ್ಚಿಸಿ ಎಂದು ಸರ್ಕಾರಿ ನೌಕರರು ಯಾರೂ ಪ್ರತಿಭಟನೆ ಮಾಡಿಲ್ಲ. ಆದರೂ ಸರ್ಕಾರ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದೆ. ಈ ಹಿಂದೆ ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲೂ ನೌಕರರ ನಿವೃತ್ತಿ ವಯಸ್ಸನ್ನು ಏರಿಸಿವೆ.
ತೆಲಂಗಾಣದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 61ಕ್ಕೆ ಹೆಚ್ಚಿಸಲಾಗಿದೆ. ಮಧ್ಯಪ್ರದೇಶದಲ್ಲಿ ನಿವೃತ್ತಿ ವಯಸ್ಸು 62. ಕೇಂದ್ರ ಸರ್ಕಾರದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ಆಗಿದೆ. ಆದರೆ ಇದೀಗ ಆಂಧ್ರಪ್ರದೇಶ ಸರ್ಕಾರ ನಿವೃತ್ತಿ ವಯಸ್ಸನ್ನು 2 ವರ್ಷ ಮುಂದೆ ಹಾಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

COVID ಶೀಘ್ರದಲ್ಲೇ ಸ್ಥಳೀಯವಾಗಿರುತ್ತದೆ;

Tue Feb 1 , 2022
ಆದರೆ ಎಂಡ್‌ಗೇಮ್‌ನ ವಿಷಯದಲ್ಲಿ, ಅನೇಕ ತಜ್ಞರು COVID ಅಂತಿಮವಾಗಿ ಸ್ಥಳೀಯ ರೋಗವಾಗಿ ಪರಿಣಮಿಸುತ್ತದೆ ಎಂದು ನಂಬುತ್ತಾರೆ. ಆದಾಗ್ಯೂ, ಇದರ ಅರ್ಥವು ಸಾಕಷ್ಟು ಗೊಂದಲದ ಮೂಲವಾಗಿದೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಸ್ಥಳೀಯತೆಯ ತಪ್ಪು ತಿಳುವಳಿಕೆ, ಮತ್ತು ಕೋವಿಡ್ ಸ್ಥಳೀಯ ರೋಗವಾಗಿದ್ದು ನೈಜ ಜಗತ್ತಿನಲ್ಲಿ ನಿಜವಾಗಿ ಹೇಗಿರುತ್ತದೆ. ಅದನ್ನು ಒಡೆಯೋಣ. ರೋಗವು ಸಾಂಕ್ರಾಮಿಕವಾಗಿರುವುದರಿಂದ ರೋಗ ಹರಡುವಿಕೆಯ ಈ ಚಾಲಕರು ಮತ್ತು ಸಮುದಾಯದಲ್ಲಿ ಹರಡುವಿಕೆಯನ್ನು ಸೀಮಿತಗೊಳಿಸುವ ಅಂಶಗಳ ನಡುವೆ ಅಸಮತೋಲನವಿದೆ ಎಂದು ಸೂಚಿಸುತ್ತದೆ. […]

Advertisement

Wordpress Social Share Plugin powered by Ultimatelysocial