ತಂದೆಯೊಂದಿಗೆ ಆಟ ನೋಡುವ ಪುಟಾಣಿ

ಇದು ನಿಮ್ಮ ಈ ದಿನದ ಖುಷಿಗೆ ಜತೆಯಾಗುವಂತಹ ದೃಶ್ಯ. ಕಂದನ ಈ ಪ್ರತಿಕ್ರಿಯೆ ಕಂಡು ನೀವು ನಗದೇ ಇರಲು ಸಾಧ್ಯವೇ ಇಲ್ಲ. ಮತ್ತೆ ಮತ್ತೆ ನೋಡಬೇಕೆನಿಸುವ ಸುಂದರ ನೋಟವಿದು.ಮುದ್ದು ಪುಟಾಣಿಗಳ ಕ್ಯೂಟ್ ಪ್ರತಿಕ್ರಿಯೆಗಳನ್ನು ನೋಡುವುದೇ ಚೆಂದ. ಕಂದಮ್ಮಗಳೊಂದಿಗೆ ಇದ್ದಾಗ ಹೊತ್ತು ಕಳೆದದ್ದೇ ಗೊತ್ತಾಗದು. ಪುಟಾಣಿಗಳ ಆಟ ಎಲ್ಲಾ ನೋವನ್ನು ಮರೆಸಿ ಬಿಡುತ್ತದೆ. ಅಷ್ಟು ಅದ್ಭುತ ಶಕ್ತಿ ದೇವರ ಮನಸ್ಸಿನ ಕಂದಮ್ಮಗಳಿಗೆ ಇರುತ್ತದೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಒಂದೊಮ್ಮೆ ಮನಸ್ಸಿಗೆ ಆನಂದ ನೀಡುವಂತಹ ದೃಶ್ಯವನ್ನೇನಾದರೂ ನೀವು ಹುಡುಕುತ್ತಿದ್ದರೆ ಸದ್ಯ ಅಂತಹದ್ದೊಂದು ಮುದ್ದಾದ ದೃಶ್ಯ ಎಲ್ಲರ ಗಮನ ಸೆಳೆದಿದೆ. ಇದು ಟಿವಿ ನೋಡುತ್ತಿದ್ದ ಕಂದನ ಮುದ್ದಾದ ಪ್ರತಿಕ್ರಿಯೆಯ ಕ್ಯೂಟ್ ದೃಶ್ಯ.ಅಪ್ಪ ಮತ್ತು ಕಂದ ಟಿವಿಯಲ್ಲಿ ಯಾವುದೋ ಸ್ಫೋರ್ಟ್ಸ್‌ ನೋಡುವಂತಹ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ, ಇವರ ಇಷ್ಟದ ತಂಡ ಹಿನ್ನೆಡೆ ಅನುಭವಿಸಿತ್ತು ಎಂದೆನಿಸುತ್ತದೆ. ಈ ವೇಳೆ, ತಂದೆ ಬೇಸರದಿಂದ ತಲೆ ಮೇಲೆ ಕೈ ಇಟ್ಟರೆ, ಅಪ್ಪನನ್ನು ಕಂಡ ಪುಟಾಣಿ ತಾನೂ ಕೂಡಾ ತನ್ನ ಎಕ್ಸ್‌ಪ್ರೆಶನ್ ಬದಲಾಯಿಸಿ ತಂದೆಯನ್ನೇ ಅನುಕರಣೆ ಮಾಡುವುದನ್ನು ಇಲ್ಲಿ ನೋಡಬಹುದಾಗಿದೆ. ಹೀಗೆ ಅನುಕರಣೆ ಮಾಡುವ ಕಂದ ತನ್ನ `ಬೇಸರ’ವನ್ನು ವ್ಯಕ್ತಪಡಿಸುವ ಪರಿ ಮನಸ್ಸಿನಲ್ಲೊಂದು ಆನಂದದ ಬುಗ್ಗೆ ಏಳಿಸುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೀಳುತ್ತಿದ್ದ ಅಮ್ಮನನ್ನು ರಕ್ಷಿಸಿದ ಮುದ್ದು ಕಂದ

Mon Jan 9 , 2023
ಮುದ್ದು ಮಕ್ಕಳು ಕೆಲವೊಮ್ಮೆ ತ್ವರಿತವಾಗಿ ಯೋಚಿಸುವ ರೀತಿ, ಸ್ಪಂದಿಸುವ ಪರಿ ಎಲ್ಲರ ಹೃದಯ ಗೆಲ್ಲುತ್ತದೆ. ಇಂತಹ ಅದ್ಭುತ ದೃಶ್ಯಗಳನ್ನು ಕಂಡಾಗ ಹೃದಯ ತುಂಬಿ ಬರುತ್ತದೆ. ಈ ರೀತಿಯ ಸಾಕಷ್ಟು ಅದ್ಭುತ ದೃಶ್ಯಗಳು ಸದಾ ಇಂಟರ್‌ನೆಟ್‌ನಲ್ಲಿ ಕಾಣಸಿಗುತ್ತವೆ. ಇದೀಗ, ಅಂತಹದ್ದೇ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಇದು ಮುದ್ದು ಮಗುವೊಂದು ತನ್ನ ತಾಯಿಯನ್ನು ಸಂಕಷ್ಟದಿಂದ ಪಾರು ಮಾಡುವ ಸುಂದರ ದೃಶ್ಯ. ಈ ದೃಶ್ಯ ಈಗ ಹೃದಯ ಗೆದ್ದಿದೆ.ಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ […]

Advertisement

Wordpress Social Share Plugin powered by Ultimatelysocial