ಬೀಳುತ್ತಿದ್ದ ಅಮ್ಮನನ್ನು ರಕ್ಷಿಸಿದ ಮುದ್ದು ಕಂದ

ಮುದ್ದು ಮಕ್ಕಳು ಕೆಲವೊಮ್ಮೆ ತ್ವರಿತವಾಗಿ ಯೋಚಿಸುವ ರೀತಿ, ಸ್ಪಂದಿಸುವ ಪರಿ ಎಲ್ಲರ ಹೃದಯ ಗೆಲ್ಲುತ್ತದೆ. ಇಂತಹ ಅದ್ಭುತ ದೃಶ್ಯಗಳನ್ನು ಕಂಡಾಗ ಹೃದಯ ತುಂಬಿ ಬರುತ್ತದೆ. ಈ ರೀತಿಯ ಸಾಕಷ್ಟು ಅದ್ಭುತ ದೃಶ್ಯಗಳು ಸದಾ ಇಂಟರ್‌ನೆಟ್‌ನಲ್ಲಿ ಕಾಣಸಿಗುತ್ತವೆ. ಇದೀಗ, ಅಂತಹದ್ದೇ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಇದು ಮುದ್ದು ಮಗುವೊಂದು ತನ್ನ ತಾಯಿಯನ್ನು ಸಂಕಷ್ಟದಿಂದ ಪಾರು ಮಾಡುವ ಸುಂದರ ದೃಶ್ಯ. ಈ ದೃಶ್ಯ ಈಗ ಹೃದಯ ಗೆದ್ದಿದೆ.ಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯೊಬ್ಬರು ಏಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ, ಆಕಸ್ಮಿಕವಾಗಿ ಏಣಿ ಬೀಳುತ್ತದೆ. ಈ ಸಂದರ್ಭದಲ್ಲಿ ಮಹಿಳೆ ನೇತಾಡುತ್ತಾರೆ. ಇದನ್ನು ಅಲ್ಲೇ ಇದ್ದ ಇವರ ಮಗು ನೋಡುತ್ತಾನೆ. ಭಯದಿಂದ ಕಿರುಚಾಡುತ್ತಿದ್ದ ಅಮ್ಮನನ್ನು ಕಂಡ ಪುಟಾಣಿ ಓಡಿ ಹೋಗಿ ಏಣಿಯನ್ನು ಎತ್ತಿ ನಿಲ್ಲಿಸುತ್ತಾನೆ. ಬರೀ ಅಷ್ಟೇ ಅಲ್ಲ, ಓಡಿ ಬಂದು ಏಣಿಯನ್ನೂ ಹಿಡಿದುಕೊಳ್ಳುತ್ತಾನೆ. ಈ ಮುಗ್ಧತೆಯನ್ನು ಕಂಡಾಗ ಹೃದಯ ತುಂಬಿ ಬರದೇ ಇರದು. `ಈ ಪುಟ್ಟ ಮಗುವಿನ ಬುದ್ಧಿವಂತಿಕೆ ಮತ್ತು ಧೈರ್ಯವನ್ನು ಎಷ್ಟು ಪ್ರಶಂಸಿದರೂ ಕಡಿಮೆಯೇ’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಂಹದೊಂದಿಗೆ ಮರಿಗಳ ಹೆಜ್ಜೆ

Mon Jan 9 , 2023
ಪ್ರಾಣಿಗಳ ಮುದ್ದು ಮರಿಗಳನ್ನು ನೋಡುವಾಗ ನಿಸ್ಸಂಶಯವಾಗಿ ಖುಷಿಯಾಗುತ್ತದೆ. ಈ ಪುಟಾಣಿಗಳ ಆಟ, ಕುತೂಹಲ, ತುಂಟಾಟ, ಆನಂದದ ಕ್ಷಣಗಳು ಎಲ್ಲವೂ ಸುಂದರ. ಇಂತಹ ದೃಶ್ಯಗಳನ್ನು ನೋಡುತ್ತಿದ್ದರೆ ನಮ್ಮ ಚಿತ್ತ ಅತ್ತಿಂದಿತ್ತ ಹರಿಯದು, ಮಂದಹಾಸದಿಂದ ಮುಖ ಅರಳದೇ ಇರದು. ಇದೇ ಕಾರಣದಿಂದ ಎಲ್ಲರೂ ಇಂತಹ ಸೊಬಗಿನ ದೃಶ್ಯವನ್ನು ನೋಡಲು ಇಷ್ಟಪಡುತ್ತಾರೆ. ಒಂದು ಕ್ಷಣ ಎಲ್ಲಾ ನೋವು, ಬೇಸರವನ್ನು ದೂರ ಮಾಡುವ ತಾಕತ್ತು ಇಂತಹ ಸೊಬಗಿನ ದೃಶ್ಯಗಳಿಗೆ ಇರುತ್ತದೆ.ಈಗಂತು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಬೇಕಾದಷ್ಟು […]

Advertisement

Wordpress Social Share Plugin powered by Ultimatelysocial