ಸಿಂಹದೊಂದಿಗೆ ಮರಿಗಳ ಹೆಜ್ಜೆ

ಪ್ರಾಣಿಗಳ ಮುದ್ದು ಮರಿಗಳನ್ನು ನೋಡುವಾಗ ನಿಸ್ಸಂಶಯವಾಗಿ ಖುಷಿಯಾಗುತ್ತದೆ. ಈ ಪುಟಾಣಿಗಳ ಆಟ, ಕುತೂಹಲ, ತುಂಟಾಟ, ಆನಂದದ ಕ್ಷಣಗಳು ಎಲ್ಲವೂ ಸುಂದರ. ಇಂತಹ ದೃಶ್ಯಗಳನ್ನು ನೋಡುತ್ತಿದ್ದರೆ ನಮ್ಮ ಚಿತ್ತ ಅತ್ತಿಂದಿತ್ತ ಹರಿಯದು, ಮಂದಹಾಸದಿಂದ ಮುಖ ಅರಳದೇ ಇರದು. ಇದೇ ಕಾರಣದಿಂದ ಎಲ್ಲರೂ ಇಂತಹ ಸೊಬಗಿನ ದೃಶ್ಯವನ್ನು ನೋಡಲು ಇಷ್ಟಪಡುತ್ತಾರೆ. ಒಂದು ಕ್ಷಣ ಎಲ್ಲಾ ನೋವು, ಬೇಸರವನ್ನು ದೂರ ಮಾಡುವ ತಾಕತ್ತು ಇಂತಹ ಸೊಬಗಿನ ದೃಶ್ಯಗಳಿಗೆ ಇರುತ್ತದೆ.ಈಗಂತು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಬೇಕಾದಷ್ಟು ದೃಶ್ಯಗಳು ನಮಗೆ ಕಾಣಸಿಗುತ್ತವೆ. ಇದು ಕೂಡಾ ಅಂತಹದ್ದೇ ಒಂದು ಮುದ್ದಾದ ದೃಶ್ಯ. ವನರಾಜನೊಂದಿಗೆ ಪುಟಾಣಿ ಸಿಂಹಗಳು ಸ್ವಚ್ಛಂದವಾಗಿ ವಿಹರಿಸುತ್ತಿರುವ ಮುದ್ದಾದ ದೃಶ್ಯ ಇದು. ಇದೇ ಕಾರಣದಿಂದ ಈ ಅಪರೂಪದ ದೃಶ್ಯವನ್ನು ಎಲ್ಲರೂ ಬಲು ಆನಂದದಿಂದಲೇ ನೋಡುತ್ತಿದ್ದಾರೆ. ಸಿಂಹವೊಂದು ಸಾಗುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ಸಿಂಹದ ಸನಿಹದಲ್ಲಿ ಪುಟಾಣಿಗಳು ಮರಿಗಳನ್ನೂ ನೋಡಬಹುದು. ಈ ಮರಿಗಳು ಈ ಸಿಂಹವನ್ನೇ ಹಿಂಬಾಲಿಸಿಕೊಂಡು ಹೋಗುತ್ತವೆ. ಈ ಸಿಂಹ ಸಾಗಿದಲ್ಲಿಗೆ ಈ ಪುಟಾಣಿಗಳೂ ಸಾಗುತ್ತವೆ. ಈ ದೃಶ್ಯವನ್ನು ಕಂಡಾಗ ತಂದೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಮಕ್ಕಳು ಓಡೋಡಿ ಹೋಗುವಂತೆ ಭಾಸವಾಗುತ್ತದೆ. ಈ ದೃಶ್ಯವನ್ನು ನೋಡುವಾಗಲೇ ಖುಷಿಯಾಗುತ್ತದೆ. `ಮಕ್ಕಳೊಂದಿಗೆ ತಂದೆಯ ವಿಹಾರ’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಐಎಲ್ ವಜಾ ಮಾಡಿದ ಸುಪ್ರೀಂ ಕೋರ್ಟ್.

Mon Jan 9 , 2023
ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಂಬಂಧ ವಿವಿಧ ರಾಜ್ಯಗಳು ಸಮಿತಿಗಳನ್ನು ರಚಿಸಿವೆ. ಇದನ್ನು ವಿರೋಧಿಸಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸುಪ್ರೀಂ ಕೋರ್ಟ್(Supreme Court), ಸೋಮವಾರ ವಜಾ ಮಾಡಿದೆ.ಸಮಿತಿಗಳನ್ನು ರಚಿಸುವ ಅಧಿಕಾರವು ರಾಜ್ಯಗಳಿಗಳಿರುತ್ತದೆ. ರಾಜ್ಯ ಸರ್ಕಾರಗಳ ಈ ಅಧಿಕಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿ ಹಾಕಿದೆ.ಈ ಪಿಐಎಲ್ ಅರ್ಜಿಯನ್ನು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ […]

Advertisement

Wordpress Social Share Plugin powered by Ultimatelysocial