ಪಿಐಎಲ್ ವಜಾ ಮಾಡಿದ ಸುಪ್ರೀಂ ಕೋರ್ಟ್.

ವದೆಹಲಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಂಬಂಧ ವಿವಿಧ ರಾಜ್ಯಗಳು ಸಮಿತಿಗಳನ್ನು ರಚಿಸಿವೆ. ಇದನ್ನು ವಿರೋಧಿಸಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸುಪ್ರೀಂ ಕೋರ್ಟ್(Supreme Court), ಸೋಮವಾರ ವಜಾ ಮಾಡಿದೆ.ಸಮಿತಿಗಳನ್ನು ರಚಿಸುವ ಅಧಿಕಾರವು ರಾಜ್ಯಗಳಿಗಳಿರುತ್ತದೆ. ರಾಜ್ಯ ಸರ್ಕಾರಗಳ ಈ ಅಧಿಕಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿ ಹಾಕಿದೆ.ಈ ಪಿಐಎಲ್ ಅರ್ಜಿಯನ್ನು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾ ಮಾಡಿದೆ. ಸಂವಿಧಾನ ಆರ್ಟಿಕಲ್ 162ರ ಅಡಿಯಲ್ಲಿ ಸರ್ಕಾರಗಳು ಸಮಿತಿ ರಚನೆ ಮಾಡಿವೆ. ಅದರಲ್ಲಿ ತಪ್ಪೇನಿದೆ ಎಂದ ನ್ಯಾಯಪೀಠ ಪ್ರಶ್ನಿಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಂಬಂಧ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳು ಸೇರಿ ಅನೇಕ ರಾಜ್ಯಗಳು ಸಮಿತಿ ರಚಿಸಿವೆ.|Supreme Court | ಸಿನಿಮಾ ಥಿಯೇಟರ್ ಜಿಮ್ ಅಲ್ಲ! ಆಹಾರ ನಿರ್ಬಂಧಿಸುವುದು ಮಾಲೀಕರ ಹಕ್ಕು ಎಂದ ಸುಪ್ರೀಂ ಕೋರ್ಟ್ನವದೆಹಲಿ:ಸರ್ಕಾರಗಳು ಪ್ರಚಾರಕ್ಕಾಗಿ, ಜಾಹೀರಾತುಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ಹಲವಾರು ಸುದ್ದಿಗಳನ್ನು ನಾವು ನೋಡಿದ್ದೇವೆ. ಆದರೆ ನವದೆಹಲಿಯ ಅರವಿಂದ್‌ ಕೇಜ್ರಿವಾಲ್‌ ಅವರ ಸರ್ಕಾರ (Kejriwal Government) ತಮ್ಮ ವಿವಾದಿತ ಅಬಕಾರಿ ನೀತಿಯ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡುವುದಕ್ಕೆ ವಕೀಲರಿಗೇ 25 ಕೋಟಿಗೂ ಹೆಚ್ಚು ರೂಪಾಯಿ ಖರ್ಚು ಮಾಡಿದೆ.Vipassana Meditation | ವಿಪಶ್ಯನ ಧ್ಯಾನದ ಮೊರೆಹೋದ ಕೇಜ್ರಿವಾಲ್‌, ಇನ್ನು ಅವರು ಮಾತಾಡೋದು ಮುಂದಿನ ವರ್ಷವೇ!ಆಮ್‌ ಆದ್ಮಿ ಪಕ್ಷದ ಸರ್ಕಾರ ಕಳೆದ 18 ತಿಂಗಳುಗಳಲ್ಲಿ ಒಟ್ಟು 28.10 ಕೋಟಿ ರೂಪಾಯಿಯನ್ನು ವಕೀಲರಿಗೆಂದು ಖರ್ಚು ಮಾಡಿದೆ. ಅದರಲ್ಲಿ ಅಬಕಾರಿ ನೀತಿ ಪ್ರಕರಣದ ವಕೀಲರಿಗೇ 25.25 ಕೋಟಿ ರೂ. ಕೊಡಲಾಗಿದೆ. ಅದರಲ್ಲಿ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರಿಗೆ 18.97 ಕೋಟಿ ರೂ. ಹಾಗೂ ರಾಹುಲ್‌ ಮೆಹ್ರಾ ಅವರಿಗೆ 5.30 ಕೋಟಿ ರೂ. ಕೊಡಲಾಗಿದೆ. ಸಿಂಘ್ವಿ ಅವರು 2021-22ನೇ ಸಾಲಿನಲ್ಲಿ 14.85 ಕೋಟಿ ರೂ. ಹಾಗೂ 2022-23ರಲ್ಲಿ 4.1 ಕೋಟಿ ರೂ. ಪಡೆದಿದ್ದಾರೆ. ಜೈಲು ಸೇರಿದ್ದ ಸಚಿವ ಸತ್ಯೇಂದ್ರ ಜೈನ್‌ ಅವರ ಪ್ರಕರಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ವಕೀಲ ರಾಹುಲ್‌ ಅವರು 2021-22ರಲ್ಲಿ 3.9 ಕೋಟಿ ರೂ. ಹಾಗೂ 2022-23ರಲ್ಲಿ 1.3 ಕೋಟಿ ರೂ. ಸ್ವೀಕರಿಸಿದ್ದಾರೆ ಎಂದು ರಾಜ್ಯ ಭವನದ ವರದಿಯಲ್ಲಿ ತಿಳಿಸಲಾಗಿದೆ.‌’ನಾವು ಎತ್ತಿನ ಹಾಲು ಹಿಂಡಿದ್ದೇವೆ’-ಗುಜರಾತ್​​ನಲ್ಲಿ ಆಪ್​ 5 ಸೀಟ್​ ಗೆದ್ದಿದ್ದನ್ನು ಹೀಗೆ ವಿಶ್ಲೇಷಿಸಿದ ಅರವಿಂದ್ ಕೇಜ್ರಿವಾಲ್​2021-22ರಲ್ಲಿ ಈ ಅಬಕಾರಿ ನೀತಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ಮೊದಲು ಕೇಜ್ರಿವಾಲ್‌ ಅವರ ಸರ್ಕಾರ 6.7 ಕೋಟಿ ರೂ. ಖರ್ಚು ಮಾಡಿತ್ತು. ಆದರೆ ಅದಾದ ನಂತರ ಸರ್ಕಾರದ ಖರ್ಚು ಗಣನೀಯವಾಗಿ ಏರಿಕೆ ಕಂಡಿತು ಎಂದು ವರದಿ ಹೇಳಿದೆ.ನವದೆಹಲಿ: 3000 ಕೋಟಿ ರೂ. ಮೊತ್ತದ ಸಾಲ ಅಕ್ರಮ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೋಚರ್ (Chanda Kochhar) ಹಾಗೂ ಅವರ ಪತ್ನಿ ದೀಪಕ್ ಕೋಚರ್ ಅವರ ಬಂಧನವನ್ನು ಕಾನೂನುಬಾಹಿರ ಎಂದು ಹೇಳಿರುವ ಬಾಂಬೆ ಹೈಕೋರ್ಟ್(Bombay High court), ಅವರ ಬಿಡುಗಡೆಗೆ ಸೂಚಿಸಿದೆ. ಜನವರಿ 15ರಂದು ಚಂದಾ ಅವರ ಪುತ್ರನ ಮದುವೆ ನಿಗದಿಯಾಗಿದೆ. ಕಳೆದ ತಿಂಗಳು ಸಿಬಿಐ ಚಂದಾ ಕೋಚರ್ ಹಾಗೂ ಪತಿ ದೀಪಕ್ ಅವರನ್ನು ಬಂಧಿಸಿ, ಜೈಲಿಗೆ ಅಟ್ಟಿತ್ತು.ಸಿಬಿಐ ಬಂಧನವನ್ನು ಪ್ರಶ್ನಿಸಿ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ, ಮಗನ ಮದುವೆಯ ಸಂದರ್ಭದಲ್ಲೇ ತಮ್ಮನ್ನು ಬಂಧಿಸಿರವುದನ್ನು ಅವರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಐಸಿಐಸಿಐ ಸಾಲ ಅಕ್ರಮಕ್ಕೆ ಸಂಬಂಧಿಸಿದಂತೆ ವಿಡಿಯೋಕಾನ್ ಗ್ರೂಪ್ ಚೇರ್ಮನ್ ವೇಣುಗೋಪಾಲ್ ಅವರನ್ನೂ ಸಿಬಿಐ ಅರೆಸ್ಟ್ ಮಾಡಿತ್ತು.ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡದಿರುವುದು ಸೇರಿದಂತೆ ತನಿಖಾ ಸಂಸ್ಥೆಯು ವಿಧಿಸಿರುವ ಎಲ್ಲ ಷರತ್ತುಗಳನ್ನು ಪಾಲನೆ ಮಾಡುತ್ತಿದ್ದರೂ ತಮ್ಮನ್ನು ಬಂಧಿಸಲಾಗಿದೆ ಎಂದು ಚಂದಾ ಕೋಚರ್ ಅವರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಕೋಚರ್ ಅವರ ಅರ್ಜಿ ವಿಚಾರಣೆಗೆ ಸಮ್ಮತಿಸಿದ ಹೈಕೋರ್ಟ್, ಮಗನ ಮದುವೆ ಕಾರಣಕ್ಕೆ ಚಂದಾ ಕೋಚರ್ ಅವರ ಅರ್ಜಿ ವಿಚಾರಣೆ ನಡೆಸುತ್ತಿಲ್ಲ. ಬದಲಾಗಿ ಅವರ ಬಂಧನದಲ್ಲಿ ಕಾನೂನಿನ ನಿಯಮಗಳನ್ನು ಪಾಲಿಸಿಲ್ಲ. ಈ ಕುರಿತು ವಿಚಾರಣೆ ನಡೆಸಲು ಒಪ್ಪಿಕೊಳ್ಳಲಾಗಿದೆ ಎಂದು ಕಳೆದ ವಾರ ಹೈಕೋರ್ಟ್ ಸ್ಪಷ್ಟಪಡಿಸಿತ್ತು.|Rane Bungalow | ಕೇಂದ್ರ ಸಚಿವ ರಾಣೆಗೆ ಸೇರಿದ ಬಂಗ್ಲೆ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಪ್ರಯಾಣಿಕರಿಬ್ಬರು ವಿಮಾನದಲ್ಲಿ ಕುಡಿದು, ಅಮಲಿನಲ್ಲಿ ಪರಸ್ಪರ ಜಗಳವಾಡಿದ ಘಟನೆ ಇಂಡಿಗೋ (IndiGo Flight) ಪ್ಲೈಟ್‌ನಲ್ಲಿ ನಡೆದಿದೆಹಲಿ – ಪಾಟ್ನಾ ಇಂಡಿಗೋ 6ಇ-6393 ವಿಮಾನದಲ್ಲಿಈ ಘಟನೆ ನಡೆದಿದೆ. ದೆಹಲಿಯಿಂದ ಪಾಟ್ನಾಗೆ ತೆರಳುವ ವೇಳೆ ವಿಮಾನದಲ್ಲೇ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ. ಗಲಾಟೆ ಮಾಡಿದ ಪ್ರಯಾಣಿಕರಿಬ್ಬರನ್ನು ಪಾಟ್ನಾ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ವಿಮಾನದಲ್ಲಿ ನಡೆದ ಈ ಅಹಿತಕರ ಘಟನೆ ಕುರಿತು ಇಂಡಿಗೋ ಸಂಸ್ಥೆ ಪಾಟ್ನಾ ಪೊಲೀಸರಿಗೆ ದೂರು ನೀಡಿತ್ತುಗಲಾಟೆ ಮಾಡಿಕೊಂಡ ಪ್ರಾಯಣಿಕರಿಬ್ಬರು ವಿಮಾನದೊಳಗೆ ಪ್ರವೇಶಿಸುವಾಗಲೇ ಕುಡಿದುಕೊಂಡೇ ಬಂದಿದ್ದರು. 80 ನಿಮಿಷದ ಪ್ರಯಾಣದ ಅವಧಿಯಲ್ಲಿ ಅವರು ನಿರಂತರವಾಗಿ ಕುಡಿಯತ್ತಲೇ ಇದ್ದರು. ಈ ಇಬ್ಬರನ್ನು ಪಾಟ್ನಾ ಏರ್ಪೋರ್ಟ್‌ನಲ್ಲಿ ಮೊದಲಿಗೆ ಸಿಐಎಸ್‌ಎಫ್ ತಮ್ಮ ವಶಕ್ಕೆ ತೆಗೆದುಕೊಂಡು, ಬಳಿಕ ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಯಿತು. ಇಷ್ಟಾಗಿಯೂ ಇಂಡಿಗೋ ಈ ಘಟನೆ ಬಗ್ಗೆ ಟ್ವೀಟ್ ಮಾಡಿ, ವಿಮಾನದಲ್ಲಿ ಯಾವುದೇ ವಾಗ್ವಾದ ನಡೆದಿಲ್ಲ ಎಂದು ಇಹೇಳಿಕೊಂಡಿದೆ.Air India Pee Case | ಏರ್​ ಇಂಡಿಯಾ ವಿಮಾನದ ಪೈಲೆಟ್​, ನಾಲ್ವರು ಸಿಬ್ಬಂದಿ ಅಮಾನತು; ಕ್ಷಮೆ ಯಾಚಿಸಿದ ಸಿಇಒಚೆನ್ನೈ: ಹಿಂದಿಯನ್ನು ವಿರೋಧಿಸುವುದು ಒಂದು ಗಿಮಿಕ್ ಆಗಿದೆ. ಸರ್ಕಾರದ ಯಾವುದೇ ನೀತಿ ಯಾವುದೇ ಭಾಷೆಯನ್ನು ಹೇರಿಕೆ (Hindi Imposition) ಮಾಡುವುದಿಲ್ಲ ಎಂದು ಅಣ್ಣಾಮಲೈ ವಿವಿಯ ಮಾಜಿ ಕುಲಪತಿ ಹಾಗೂ ಖ್ಯಾತ ಶಿಕ್ಷಣ ತಜ್ಞ ಇ ಬಾಲಗುರುಸ್ವಾಮಿ ಅವರು ಹೇಳಿದ್ದಾರೆ. ಮಕ್ಕಳಿಗೆ ತ್ರಿ ಭಾಷಾ ಸೂತ್ರ ಅಡಿಯಲ್ಲಿ ಶಿಕ್ಷಣ ನೀಡುವುದನ್ನು ಪ್ರೇರೇಪಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ನಾವು ತ್ರಿ ಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಬೇಕಿದೆ. ಸರ್ಕಾರಿ ಶಾಲಾ ಮಕ್ಕಳು ಇಂಗ್ಲಿಷ್ ಹಾಗೂ ಮಾತೃಭಾಷೆ ಜತೆಗೆ ಮತ್ತೊಂದು ಸ್ವದೇಶಿ ಭಾಷೆ ಕಲಿಕೆಯ ಅವಕಾಶವನ್ನು ಪಡೆಯಲಿದ್ದಾರೆ. ಇದರಿಂದಾಗಿ ಅವರು ಬೇರೆ ಬೇರೆ ರಾಜ್ಯಗಳಲ್ಲಿ ಉದ್ಯೋಗ ಮತ್ತು ವ್ಯಾಪಾರದ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಿಂದೆ ಹೇರಿಕೆಯ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಇದೊಂದು ಕೇವಲ ರಾಜಕೀಯ ಅಭಿಪ್ರಾಯವಷ್ಟೇ. ಯಾವುದೇ ರಾಜ್ಯ, ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿಯು ಹಿಂದಿಯನ್ನು ಹೇರಿಕ ಮಾಡುತ್ತಿಲ್ಲ. ಇದೊಂದು ತಪ್ಪು ಅಭಿಪ್ರಾಯವಾಗಿದೆ. ಎಂಟನೇ ತರಗತಿಯವರೆಗೆ ಮಾತೃಭಾಷೆಯು ಬೋಧನಾ ಮಾಧ್ಯಮವಾಗಿದೆ. ಇದು ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ. ವಿದ್ಯಾರ್ಥಿಯು ಇದೇ ಮಾಧ್ಯಮದಲ್ಲಿ ಮುಂದುವರಿಯಲು ಬಯಸಿದರೆ, ಅವನು ಅಥವಾ ಅವಳು ಅದನ್ನು ಉನ್ನತ ಮಾಧ್ಯಮಿಕ ಹಂತಗಳಿಗೆ ಕೊಂಡೊಯ್ಯಬಹುದು ಎಂದು ಮಾತ್ರ ಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

|

Please follow and like us:

Leave a Reply

Your email address will not be published. Required fields are marked *

Next Post

ಬಾಲಕನೊಂದಿಗೆ ಫುಟ್ಬಾಲ್ ಆಡುವ ಶ್ವಾನ

Mon Jan 9 , 2023
ಶ್ವಾನಗಳು ಎಲ್ಲರ ಪ್ರೀತಿಯ ಗೆಳೆಯರು. ಇದಕ್ಕೆ ಸಾಕ್ಷಿಯಾದ ಸಾಕಷ್ಟು ದೃಶ್ಯಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಇಂತಹ ದೃಶ್ಯಗಳನ್ನು ನೋಡಿದಷ್ಟು ಮನಸ್ಸು ಖುಷಿಯಿಂದ ಅರಳುತ್ತದೆ. ಶ್ವಾನಗಳೂ ಮನುಷ್ಯರೊಂದಿಗಿನ ಸ್ನೇಹವನ್ನು ಸಖತ್ ಎಂಜಾಯ್ ಮಾಡುತ್ತವೆ. ಅದರಲ್ಲೂ ಮಕ್ಕಳೊಂದಿಗೆ ಆಡುವುದೆಂದರೆ ಶ್ವಾನಗಳಿಗೆ ಬಲು ಇಷ್ಟ.ಮಕ್ಕಳು ಮತ್ತು ಶ್ವಾನಗಳ ಸ್ನೇಹದ ಸುಂದರ ವಿಡಿಯೋಗಳು ಆಗಾಗ ನಮಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇದೀಗ, ಇದೇ ಸುಂದರ ದೃಶ್ಯಗಳ ಸಾಲಿಗೆ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದೆ. ಇಲ್ಲೊಂದು ಶ್ವಾನ […]

Advertisement

Wordpress Social Share Plugin powered by Ultimatelysocial