ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ.!

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ. ಕರ್ಬೂಜ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಹಣ್ಣಿನಿಂದ ಚರ್ಮದ ರಕ್ಷಣೆ ಮಾಡಿಕೊಳ್ಳಬಹುದು. ಚರ್ಮದ ಹಲವು ಸಮಸ್ಯೆಗಳಿಗೆ ಕರ್ಬೂಜ ಹಣ್ಣಿನಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅಂತ ತಿಳಿಯಿರಿ.

* ಕಾಲು ಕಪ್ ಕರ್ಬೂಜ ಹಣ್ಣಿನ ತಿರುಳು ಹಾಗೂ ಹಾಲಿನ ಕೆನೆಗೆ ಚಿಟಿಕೆ ಅರಿಶಿಣ ಸೇರಿಸಿ ಮುಖಕ್ಕೆ ಲೇಪಿಸಿಕೊಂಡು ಅರ್ಧ ಗಂಟೆ ನಂತರ ತೊಳೆದರೆ ಚರ್ಮ ಕಾಂತಿಯುತವಾಗುತ್ತದೆ.

* ಕರ್ಬೂಜ ಹಣ್ಣಿನ ತಿರುಳಿಗೆ ಎಳನೀರು ಸೇರಿಸಿ ಕುತ್ತಿಗೆ, ಕೈ, ಕಾಲುಗಳಿಗೆ ಮಸಾಜ್ ಮಾಡಿಕೊಂಡು ಅರ್ಧ ಗಂಟೆಯ ನಂತರ ಶುಚಿಗೊಳಿಸಿಕೊಂಡರೆ ಒಣ ಚರ್ಮ ಮೆರಗು ಪಡೆದುಕೊಳ್ಳುತ್ತದೆ.

* ಕರ್ಬೂಜ ಹಣ್ಣಿನ ಬೀಜಗಳನ್ನು ನೀರಿನಲ್ಲಿ ಕುದಿಸಿ, ತಣಿಸಿ, ಶೋಧಿಸಿ ಕುಡಿದರೆ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ತಲಾ ಕಾಲು ಕಪ್ ಕರ್ಬೂಜ ಹಣ್ಣಿನ ತಿರುಳು, ಬಾಳೆಹಣ್ಣು ಹಾಗೂ ಪಪ್ಪಾಯ ಹಣ್ಣಿನ ತಿರುಳುಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ಲೇಪಿಸಿದರೆ ಕಪ್ಪು ಕಲೆಗಳು ದೂರವಾಗುತ್ತವೆ.

* ದಿನಕ್ಕೆರಡು ಬಾರಿ ಕರ್ಬೂಜ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಕಜ್ಜಿ, ಗಜಕರ್ಣ ಮುಂತಾದ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಚ್ಛೇಧನವಾಗಿ ವರ್ಷ ಕಳೆವ ಮುನ್ನವೇ ಮತ್ತೆ ಮದುವೆಯತ್ತ ನಾಗಚೈತನ್ಯ ಚಿತ್ತ!

Mon Apr 18 , 2022
  ನಟಿ ಸಮಂತಾ ಹಾಗೂ ನಾಗ ಚೈತನ್ಯ ನಡುವೆ ವಿಚ್ಛೇಧನ ದೇಶದಾದ್ಯಂತ ದೊಡ್ಡದಾಗಿಯೇ ಸುದ್ದಿಯಾಯಿತು. ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಬೇರಾಯಿತು. 2011 ರಿಂದಲೂ ಪ್ರೀತಿಸುತ್ತಿದ್ದ ಸಮಂತಾ ಹಾಗೂ ನಾಗ ಚೈತನ್ಯ 2017 ರಲ್ಲಿ ವಿವಾಹವಾದರು. ಮದುವೆಯಾದ ಐದು ವರ್ಷಗಳ ಬಳಿಕ 2021 ರ ಅಕ್ಟೋಬರ್ ತಿಂಗಳಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆದು ದೂರಾದರು. ಇವರಿಬ್ಬರ ವಿವಾಹ ಭಾರಿ ಸದ್ದು ಮಾಡಿತು. […]

Advertisement

Wordpress Social Share Plugin powered by Ultimatelysocial