‘ಜನಗಣತಿಯ ನಿಯಮ’ಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ: ಈ ಬಾರಿ, ನಿಮ್ಮ ಮಾಹಿತಿಯನ್ನು ನೀವೇ ‘ಆನ್ ಲೈನ್’ನಲ್ಲಿ ಸಲ್ಲಿಸಲು ಅವಕಾಶ

ನವದೆಹಲಿ: ಜನಗಣತಿಯ ( Census ) ಸಂದರ್ಭದಲ್ಲಿ, ಮನೆ ಬಾಗಿಲಿಗೆ ಬಂದು, ಗಣತಿಯನ್ನು ಮಾಡುವ ಕಾರ್ಯ ನಡೆಯುತ್ತಿತ್ತು. ಆದ್ರೇ ಈ ಬಾರಿ ಈ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಮುಂಬರುವ ಜನಗಣತಿಯಲ್ಲಿ ದೇಶದ ಜನರು ತಮ್ಮ ಮಾಹಿತಿಯನ್ನು ತಾವೇ ಆನ್ ಲೈನ್ ನಲ್ಲಿ ಸರ್ಕಾರಕ್ಕೆ ಸಲ್ಲಿಸಲು ಅವಕಾಶ ನೀಡಿದೆ. ಹೌದು.. ಜನಗಣತಿಯ ನಿಯಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಹತ್ತು ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಜನಗಣತಿಯ ನಿಯಮದಲ್ಲಿ ಬದಲಾವಣೆಗೊಳ್ಳಲಿದೆ. ಹೀಗಾಗಿ ಮುಂಬರುವ ಜನಗಣತಿಯಲ್ಲಿ ದೇಶದ ಜನರು, ತಮ್ಮ ಮಾಹಿತಿಯನ್ನು ತಾವೇ ಆನ್ ಲೈನ್ ನಲ್ಲಿ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ.ಇದರ ಜೊತೆಗೆ ಈ ಹಿಂದಿನಂತೆ, ಗಣತಿದಾರರು ಜನರ ಮನೆ ಮನೆಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುವ ಕಾರ್ಯವೂ ನಡೆಯಲಿದೆ. ಈ ಮೂಲಕ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುವುದಲ್ಲದೇ, ನೀವು ಕೂಡ ಆನ್ ಲೈನ್ ನಲ್ಲಿ ನಿಮ್ಮ ಮಾಹಿತಿಯನ್ನು ಸಲ್ಲಿಸಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಲೋವೆರಾ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

Sun Mar 13 , 2022
  ಅಲೋವೆರಾದ ಪ್ರಯೋಜನಗಳ ಬಗ್ಗೆ ನೀವು ಇತರರು ಹೇಳಿರುವುದನ್ನು ಕೇಳಿರಬಹುದು. ಆದರೆ ಇದನ್ನು ಸೇವಿಸುವ ವಿಧಾನದ ಬಗ್ಗೆ ನಿಮಗೆ ಗೊತ್ತೇ.? ಅಲೋವೆರಾದಲ್ಲಿ ಮೂರು ಭಾಗಗಳಿವೆ. ಮೇಲ್ಭಾಗವನ್ನು ಅಲೋವೆರಾ ರಿಂಡ್ ಎನ್ನುತ್ತಾರೆ. ಮಧ್ಯಭಾಗವನ್ನು ಇನ್ನರ್ ಲೀಫ್ ಎಂದು ಕರೆಯುತ್ತಾರೆ. ಈ ಭಾಗದಿಂದ ಜೆಲ್ ತಯಾರಾಗುತ್ತದೆ. ಮೂರನೇ ಭಾಗವನ್ನು ಅಲೋವೆರಾ ಲ್ಯಾಟಿಕ್ಸ್ ಎನ್ನುತ್ತಾರೆ. ಇದು ಅಲೋವೆರಾದ ಕೆಳಭಾಗದಲ್ಲಿರುವ ಅರಿಶಿನ ಬಣ್ಣದ ರಸ. ಇದನ್ನು ಎಲ್ಲೋಯಿಷ್ ಸ್ವೀಟ್ಸ್ ಎಂದು ಕರೆಯುತ್ತಾರೆ. ಈ ರಸವನ್ನು ಸೇವಿಸಬಾರದು. […]

Advertisement

Wordpress Social Share Plugin powered by Ultimatelysocial