ವೈದ್ಯರನ್ನು ಕೊಂಡಾಡಿದ ಶ್ರೀರಾಮುಲು

ಪ್ರಾಣ ಲೆಕ್ಕಿಸದೇ ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಮೂಹಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಶುಭ ಕೋರಿದ್ದಾರೆ. ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಸಮಸ್ತ ವೈದ್ಯ ಸಮೂಹಕ್ಕೆ ಹಾಗೂ ಅವರಿಗೆ ಬೆಂಬಲ ನೀಡುತ್ತಿರುವ ಕುಟುಂಬ ಸದಸ್ಯರಿಗೆ ಶುಭಾಶಯಗಳು. ದೇಶವನ್ನು ಸೈನಿಕರು ಕಾಯುವಂತೆ ಜನರ ಆರೋಗ್ಯ ಕಾಪಾಡುವ, ಇನ್ನೊಬ್ಬರ ಪ್ರಾಣ ಉಳಿಸುವ ಮಹಾತ್ಕಾರ್ಯದಲ್ಲಿ ತೊಡಗಿರುವ ವೈದ್ಯರ ಶ್ರಮ ಅಮೂಲ್ಯವಾದದ್ದು. ಕರ್ನಾಟಕದ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಅವಿರತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಮಸ್ತ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳು. ಹಾಗೆಯೇ ಎಲ್ಲರೂ ಜೊತೆಯಾಗಿ ಹೋರಾಡೋಣ, ನಾಡಿನಿಂದ ಕೊರೋನ ತೊಲಗಿಸೋಣ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಇಹಲೋಕ ತ್ಯಜಿಸಿದ ಗೋಲ್ಡನ್ ಬಾಬಾ

Wed Jul 1 , 2020
ಪೂರ್ವ ದೆಹಲಿಯ ಗಾಂಧಿನಗರದ ವಾಸಿ ಸುಧೀರ್ ಕುಮಾರ್ ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾ ಇಂದು ನಿಧನರಾಗಿದ್ದಾರೆ. ಬಾಬಾ ಅವರು ಮೂಲತಃ ಉತ್ತರ ಪ್ರದೇಶದ ಘಾಜಿಯಾಬಾದ್ ನವರಾಗಿದ್ದು, ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೋಲ್ಡನ್ ಬಾಬಾ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗೋಲ್ಡನ್ ಬಾಬಾ ಹರಿದ್ವಾರಕ್ಕೆ ಸೇರಿದ ಹಲವು ಅಖಾಡಗಳೊಂದಿಗೆ ಸಂಬಂಧ ಹೊಂದಿದ್ದರು. ಹಾಗೂ ಗೋಲ್ಡನ್ ಬಾಬಾ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರು. […]

Advertisement

Wordpress Social Share Plugin powered by Ultimatelysocial