ಶಿಕ್ಷಣ ಮತ್ತು ವ್ಯವಸ್ಥೆ ಬಗ್ಗೆ ಸ್ವಾಮಿ ವಿವೇಕಾನಂದರ ಮಾತು ̤Swami Vivekananda

ಸ್ವಾಮಿ ವಿವೇಕಾನಂದರೇ ಹೇಳುವಂತೆ ಶಿಕ್ಷಣವೆಂದರೆ ‘ಮಾನವೀಯತೆಯ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ. ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ ಎಂದು ಹೇಳುತ್ತಿದ್ದ ವಿವೇಕಾನಂದರು ‘ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ’ ಎಂದು ನಂಬಿದ್ದರು.

ಸ್ವಾಮಿ ವಿವೇಕಾನಂದರ ಮಾತು ಮಾನವ ಸಮಾಜದಲ್ಲಿ ಮನೆಮಾಡಿರುವ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎಂಬುದು ವಿವೇಕಾನಂದರ ಅಭಿಮತ. ‘ಶಿಕ್ಷಣವು ಮಾನವನನ್ನು ಸೀಮಿತ ಸ್ತರದಿಂದ ಅಸೀಮ ಹಂತಕ್ಕೆ ಒಯ್ಯುವಂಥದ್ದು’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ‘ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ಚಾರಿತ್ರ್ಯ ನಿರ್ಮಾಣ; ಚಾರಿತ್ರ್ಯ ನಿರ್ಮಾಣದಿಂದ ಮಾತ್ರವೇ ರಾಷ್ಟ್ರನಿರ್ಮಾಣ’ ಎಂಬ ಸ್ವಾಮಿ ವಿವೇಕಾನಂದರ ಅಭಿಪ್ರಾಯವು ಶಿಕ್ಷಣವು ಪ್ರಥಮತಃ ವ್ವಕ್ತಿಯ ಅಭ್ಯುದಯ ತದನಂತರ ಸಮಾಜ, ರಾಷ್ಟ್ರ ಹಾಗೂ ಅಂತಿಮವಾಗಿ ವಿಶ್ವದ ಶ್ರೇಯಸ್ಸಿಗೆ ಪ್ರೇರಕವಾಗುತ್ತದೆ ಎಂಬ ಸತ್ಯವನ್ನು ಸೂಚಿಸುತ್ತದೆ. ಹೊಸಹೊಸ ಭಾವನೆಗಳನ್ನು ಸ್ವಭಾವ ಸಹಜವಾಗಿಸಿಕೊಳ್ಳುವುದನ್ನು ಶಿಕ್ಷಣ ಎಂದು ಮನಗಂಡಿದ್ದ ಅವರು ಪ್ರತಿಯೊಬ್ಬ ವ್ಯಕ್ತಿಯೂ ಚಾರಿತ್ರ್ಯ್ಷಮತೆಯನ್ನು ನೀಡುವ ಶಿಕ್ಷಣ ಮತ್ತು ಧರ್ಮಕ್ಕೆ ಮೊರೆಹೋಗಬೇಕೆಂಬ ಅಭಿಪ್ರಾಯ ನೀಡುತ್ತಾರೆ. ‘ಉನ್ನತ ವಿಚಾರಗಳನ್ನು ವ್ಯಕ್ತಿಯೊಬ್ಬನಿಗೆ ನೀಡಿ ಆತನನ್ನು ಹುಲಿಯಾಗಿಸದಿದ್ದರೆ ಅವನು ಖಂಡಿತ ನರಿಯಾಗುತ್ತಾನೆ’ ಎಂದು ಸ್ವಾಮೀಜಿ ಎಚ್ಚರಿಸುತ್ತಾರೆ. ಧರ್ಮ-ಸಂಸ್ಕೃತಿಗಳ ಅಧ್ಯಯನದ ಜೊತೆಗೆ ಪಾಶ್ಚಾತ್ಯ ವಿಜ್ಞಾನದ ಅಧ್ಯಯನಕ್ಕೆ ಸ್ವಾಮೀಜಿಯವರು ಒತ್ತು ನೀಡಲು ಕಾರಣ, ವಿಜ್ಞಾನ ವನ್ನು ಅಧ್ಯಯನಗೈಯ್ದು ಅಳವಡಿಸಿಕೊಳ್ಳುವುದರಿಂದ ಲೌಕಿಕ ಸಂಪತ್ತು ವೃದ್ಧಿಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೋಗ ನಿರೋಧಕವಾಗಿ ಪೂಜನೀಯ ತುಳಸಿ ಬಳಸಿ .

Mon Jan 17 , 2022
    ತುಳಸಿ ಆರಾಧನೀಯವಾಗಿ ಮಾತ್ರವಲ್ಲ, ಆರೋಗ್ಯಕ್ಕೂ ಬಹೂಪಕಾರಿ. ತುಳಸಿ ನೀರನ್ನು ಸೇವಿಸುವ ಮೂಲಕ ನಾವು ಹಲವಾರು ರೋಗಗಳಿಂದ ದೂರವಿರಬಹುದು. ಬೆಳಿಗ್ಗೆ ಎದ್ದಾಕ್ಷಣ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ಗಂಧ ಇಲ್ಲವಾಗುತ್ತದೆ. ತುಳಸಿ ನೀರು ಸೇವನೆಯಿಂದ ಶೀತ, ಕೆಮ್ಮು, ಕಫಗಳಿಂದ ದೂರವಿರಬಹುದು. ಗಂಟಲು ನೋವನ್ನು ಇದು ಕಡಿಮೆ ಮಾಡುತ್ತದೆ. ಜ್ವರ ಬಂದಾಗ ತುಳಸಿ ಜೊತೆ ಪುದೀನ ರಸ ಸೇರಿಸಿ ಕುಡಿಯುವುದು ಉತ್ತಮ. ದೇಹದ ಕಲ್ಮಶಗಳನ್ನು ಶುದ್ಧೀಕರಿಸಲು ತುಳಸಿ ನೀರು […]

Advertisement

Wordpress Social Share Plugin powered by Ultimatelysocial