ಶೀಘ್ರದಲ್ಲೇ “ಲಾ” ಟ್ರೈಲರ್ ಪವರ್ ಸ್ಟಾರ್ ಪುನೀತ್​​ ರಾಜ್​​ಕುಮಾರ್ ಹೇಳಿಕೆ

ಪವರ್​ ಸ್ಟಾರ್​ ಪುನೀತ್​​ ರಾಜ್​​ಕುಮಾರ್​​ ಅವರ ಪಿಆರ್​ಕೆ ಬ್ಯಾನರ್​ನಡಿ ನಿರ್ಮಾಣವಾಗಿರುವ “ಲಾ” ಚಿತ್ರವು ಇದೇ ಜುಲೈ ೧೭ ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಪ್ರಜ್ವಲ್​ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಮೊದಲ ಬಾರಿಗೆ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಲಾಕ್‌ಡೌನ್ ಕಾರಣದಿಂದ ಚಿತ್ರವು ಚಿತ್ರಮಂದಿರದಲ್ಲಿ ಪ್ರದರ್ಶನವಾಗದೇ, ಒಟಿಟಿ ಫ್ಲಾರ್ಟ್​ಫಾರ್ಮ್​ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಚಿತ್ರವು ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ಚಿತ್ರದ ಬಗ್ಗೆ ಪುನೀತ್​ ರಾಜ್​ಕುಮಾರ್​ ಮಾಹಿತಿಯೊಂದನ್ನು ನೀಡಿದ್ದು, ಚಿತ್ರದ ಟ್ರೇಲರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ತಮ್ಮ ಸಾಮಾಜಿಕ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊAಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಮೇಶ್

Wed Jul 8 , 2020
ರಮೇಶ್ ಅರವಿಂದ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ ಇದೆಲ್ಲದರ ಹೊರತಾಗಿ ಅವರೊಬ್ಬ ಒಳ್ಳೆಯ ಬರಹಗಾರ ಮತ್ತು ಮಾತುಗಾರ ಕೂಡ. ೨೫ ವರ್ಷಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾ ರಂಗದಲ್ಲಿರುವ ರಮೇಶ್ ಅರವಿಂದ್ ತಮ್ಮ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ರಮೇಶ್ ಅರವಿಂದ್ ತಮ್ಮ ಪತ್ನಿ ಅರ್ಚನಾರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ೨೯ ವರ್ಷ ಕಳೆದಿದೆ. ಅಲ್ಲದೇ, ರಮೇಶ್ ಅರವಿಂದ್ ನಟನಾಗುವುದಿಕ್ಕಿಂತ ಮುಂಚೆಯೇ ಮೊದಲೇ ಅರ್ಚನಾರ ಪರಿಚಯ ಇತ್ತು. ಹೀಗಾಗಿ […]

Advertisement

Wordpress Social Share Plugin powered by Ultimatelysocial