ಸರ್ವವ್ಯಾಪಿ ಭಗವಂತನಿಗೆ ನಿರ್ದಿಷ್ಟ ಸ್ಥಳದ ಅಗತ್ಯವಿಲ್ಲ : ಮದ್ರಾಸ್ ಹೈಕೋರ್ಟ್

ಚೆನ್ನೈ,ಜ.29- ದೇವರು ಸರ್ವಂತ್ರಯಾಮಿ. ಅವನಿಗೆ ರ್ನಿಧಿಷ್ಟ ಸ್ಥಳದ ಅಗತ್ಯವಿಲ್ಲ. ಮತಾಂಧರು ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ಸಮಸ್ಯೆಗಳನ್ನು ಉಂಟು ಮಾಡುತ್ತಾರೆ ಎಂದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಸಾರ್ವಜನಿಕ ಭೂಮಿಯಲ್ಲಿರುವ ದೇವಸ್ಥಾನ ತೆರುವುಗೊಳಿಸುವುದನ್ನು ತಡೆಯಬೇಕೆಂದು ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವೈದ್ಯನಾಥನ್ ಮತ್ತು ಡಿ.ಭರತ ಚಕ್ರವರ್ತಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ

ದೇವಸ್ಥಾನವನ್ನು ಸ್ಥಾಪಿಸುವ ನೆಪದಲ್ಲಿ, ಧರ್ಮ, ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಸಾರ್ವಜನಿಕ ಬಳಕೆಗಾಗಿ ಉದ್ದೇಶಿಸಲಾದ ಹೆದ್ದಾರಿ ಆಸ್ತಿಯನ್ನು ಕಬಳಿಸಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ಪೆರಂಬಲೂರು ಜಿಲ್ಲೆಯ ವೆಪ್ಪಂತಟ್ಟೈನಲ್ಲಿ ದೇವಸ್ಥಾನವನ್ನು ತೆರವುಗೊಳಿಸಲು ರಾಜ್ಯ ಹೆದ್ದಾರಿ ಇಲಾಖೆ ಹೊರಡಿಸಿದ್ದ ನೋಟಿಸ್ ರದ್ದುಗೊಳಿಸುವಂತೆ ಕೋರಿ ಎಸ್ ಪೆರಿಯಸಾಮಿ ಎಂಬುವರು ಸಲ್ಲಿಸಿದ ಮನವಿಯ ಮೇಲೆ ನ್ಯಾಯಾಲಯ ಈ ಆದೇಶ ನೀಡಿದೆ.

ದೇವಸ್ಥಾನದ ಟ್ರಸ್ಟಿ, ಮಂದಿರವು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಅಸ್ತಿತ್ವದಲ್ಲಿದೆ ಮತ್ತು ಸಾರ್ವಜನಿಕರ ಮುಕ್ತ ಸಂಚಾರ ಮತ್ತು ಸಾರಿಗೆಗೆ ಯಾವುದೇ ಅಡಚಣೆಯಾಗದಂತೆ ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಕೋರ್ಟ್‍ಗೆ ಹೇಳಿದ್ದಾರೆ. ಇದನ್ನು ನಿರಾಕರಿಸಿರುವ ನ್ಯಾಯಾಲಯ, ದೇವಾಲಯವನ್ನು ಮೂರು ದಶಕಗಳ ಹಿಂದೆ ನಿರ್ಮಿಸಲಾಗಿದೆ ಮತ್ತು ಭೂಮಿ ದೇವಸ್ಥಾನಕ್ಕೆ ಸೇರಿದೆ ಎಂದು ಹೇಳಿದ್ದರೂ, ಅವರ ವಾದವನ್ನು ಸ್ಥಾಪಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಏನು ಅಡ್ಡಿಯಾಯಿತು? ಎಂದು ಪ್ರಶ್ನಿಸಿದೆ.

ದೇವಸ್ಥಾನವು ಸಾರ್ವಜನಿಕರಿಗೆ ಯಾವುದೇ ಅಡೆತಡೆ ಅಥವಾ ಸಂಚಾರ ಮುಕ್ತ ಸಂಚಾರಕ್ಕೆ ಯಾವುದೇ ಅಡಚಣೆಯನ್ನು ಉಂಟುಮಾಡಿಲ್ಲ ಮತ್ತು ಸಂಪೂರ್ಣವಾಗಿ ಪೂಜೆಯ ಉದ್ದೇಶಕ್ಕಾಗಿ ಬಳಸಲಾಗಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಅರ್ಜಿದಾರರು ಇದನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಪೀಠ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿರೋಧ ವ್ಯಕ್ತವಾಗುತ್ತಿದ್ದಂತೆ ಗರ್ಭಿಣಿ ಅಭ್ಯರ್ಥಿ ನೇಮಕಾತಿ ಕುರಿತ ವಿವಾದಾತ್ಮಕ ಆದೇಶ ಹಿಂಪಡೆದ SBI

Sat Jan 29 , 2022
ವಿವಿಧ ವಲಯಗಳಿಂದ ತೀವ್ರ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತದ ಪ್ರತಿಷ್ಠಿತ ಬ್ಯಾಂಕ್ ಎಸ್​ಬಿಐ ಮಹಿಳಾ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಹೊರಡಿಸಿದ್ದ ವಿವಾದಾತ್ಮಕ ಮಾರ್ಗಸೂಚಿಯನ್ನು ಹಿಂಪಡೆದಿದೆ. ಬ್ಯಾಂಕ್​ ನೇಮಕಾತಿಗೆ ಸಿಬ್ಬಂದಿಯ ಸಾಮರ್ಥ್ಯದ ವಿಚಾರವಾಗಿ ಕೆಲ ದಿನಗಳ ಹಿಂದಷ್ಟೇ ಮಾರ್ಗಸೂಚಿಯನ್ನು ಹೊರಡಿಸಿತ್ತು. ಇದರಲ್ಲಿ ಮಹಿಳೆಯರು ಹಾಗೂ ಗರ್ಭಿಣಿಯರು ಸೇವೆಗೆ ಸೇರುವ ಬಗ್ಗೆ ಕೆಲವು ವಿವಾದಾತ್ಮಕ ನಿಬಂಧನೆಗಳನ್ನು ನೀಡಲಾಗಿತ್ತು. ಹೊಸ ನಿಯಮದ ಪ್ರಕಾರ ಮೂರು ತಿಂಗಳು ಮೇಲ್ಪಟ್ಟ ಮಹಿಳಾ ಅಭ್ಯರ್ಥಿಯನ್ನು ಸೇವೆಗೆ ಸೇರ್ಪಡೆ […]

Advertisement

Wordpress Social Share Plugin powered by Ultimatelysocial