ವಿರೋಧ ವ್ಯಕ್ತವಾಗುತ್ತಿದ್ದಂತೆ ಗರ್ಭಿಣಿ ಅಭ್ಯರ್ಥಿ ನೇಮಕಾತಿ ಕುರಿತ ವಿವಾದಾತ್ಮಕ ಆದೇಶ ಹಿಂಪಡೆದ SBI

ವಿವಿಧ ವಲಯಗಳಿಂದ ತೀವ್ರ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತದ ಪ್ರತಿಷ್ಠಿತ ಬ್ಯಾಂಕ್ ಎಸ್​ಬಿಐ ಮಹಿಳಾ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಹೊರಡಿಸಿದ್ದ ವಿವಾದಾತ್ಮಕ ಮಾರ್ಗಸೂಚಿಯನ್ನು ಹಿಂಪಡೆದಿದೆ.

ಬ್ಯಾಂಕ್​ ನೇಮಕಾತಿಗೆ ಸಿಬ್ಬಂದಿಯ ಸಾಮರ್ಥ್ಯದ ವಿಚಾರವಾಗಿ ಕೆಲ ದಿನಗಳ ಹಿಂದಷ್ಟೇ ಮಾರ್ಗಸೂಚಿಯನ್ನು ಹೊರಡಿಸಿತ್ತು.

ಇದರಲ್ಲಿ ಮಹಿಳೆಯರು ಹಾಗೂ ಗರ್ಭಿಣಿಯರು ಸೇವೆಗೆ ಸೇರುವ ಬಗ್ಗೆ ಕೆಲವು ವಿವಾದಾತ್ಮಕ ನಿಬಂಧನೆಗಳನ್ನು ನೀಡಲಾಗಿತ್ತು. ಹೊಸ ನಿಯಮದ ಪ್ರಕಾರ ಮೂರು ತಿಂಗಳು ಮೇಲ್ಪಟ್ಟ ಮಹಿಳಾ ಅಭ್ಯರ್ಥಿಯನ್ನು ಸೇವೆಗೆ ಸೇರ್ಪಡೆ ಮಾಡಲು ಅವರು ತಾತ್ಕಾಲಿಕವಾಗಿ ಅಸಮರ್ಥರು ಹೀಗಾಗಿ ಅವರು ಹೆರಿಗೆಯಾದ ನಾಲ್ಕು ತಿಂಗಳ ಬಳಿಕ ಸೇವೆಗೆ ಹಾಜರಾಗಲು ಅನುಮತಿ ನೀಡಲಾಗಿತ್ತು.

ಆದರೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಈ ನಿಯಮವು ಕಾರ್ಮಿಕ ವಲಯ ಹಾಗೂ ದೆಹಲಿ ಮಹಿಳಾ ಆಯೋಗದಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿದ ಎಸ್​ಬಿಐ ಇದೀಗ ಗರ್ಭಿಣಿ ಅಭ್ಯರ್ಥಿಗಳ ನೇಮಕಾತಿ ಕುರಿತಂತೆ ಹೊರಡಿಸಿದ್ದ ಹೊಸ ಮಾರ್ಗಸೂಚಿಯನ್ನು ಹಿಂಪಡೆದಿದೆ. ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಸೂಚನೆಗಳನ್ನೇ ಮುಂದುವರಿಸುವುದಾಗಿ ಎಸ್​ಬಿಐ ನಿರ್ಧರಿಸಿದೆ ಎಂದು ಬ್ಯಾಂಕ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಂಗಪುರ: ಓಮೈಕ್ರಾನ್‌ ಉಪತಳಿ 'ಬಿಎ.2' ಪ್ರಕರಣಗಳು ಪತ್ತೆ

Sat Jan 29 , 2022
ಸಿಂಗಪುರ: ಸಿಂಗಪುರದಲ್ಲಿ ಈಚೆಗೆ ವರದಿಯಾಗಿರುವ 198 ಕೋವಿಡ್‌ ಪ್ರಕರಣಗಳಲ್ಲಿ ರೂಪಾಂತರೆ ತಳಿ ಓಮೈಕ್ರಾನ್‌ ಉಪತಳಿ ‘ಬಿಎ.2’ ಸೋಂಕಿನ ಪ್ರಕರಣಗಳೂ ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ. ‘ಬಿಎ.1’ಗೆ ಹೋಲಿಸಿದರೆ, ‘ಬಿಎ.2’ ಉಪತಳಿ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿರುವುದು ಕಂಡುಬಂದಿದೆ. ನಿತ್ಯ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ ಎಂದು ಮೂಲಗಳು ಹೇಳಿವೆ. ವರದಿಯಾದ 198 ಪ್ರಕರಣಗಳಲ್ಲಿ 150 ಪ್ರಕರಣಗಳು ‘ಬಿಎ.2’ ಸೋಂಕಿನವು. ವಿದೇಶಗಳಿಂದ ಬಂದವರಿಂದ ಈ ಸೋಂಕು ಕಾಣಿಸಿಕೊಂಡಿದೆ. ಉಳಿದ 48 ಪ್ರಕರಣಗಳು ಜನವರಿ 25 […]

Advertisement

Wordpress Social Share Plugin powered by Ultimatelysocial