ಸಿಂಗಪುರ: ಓಮೈಕ್ರಾನ್‌ ಉಪತಳಿ ‘ಬಿಎ.2’ ಪ್ರಕರಣಗಳು ಪತ್ತೆ

ಸಿಂಗಪುರ: ಸಿಂಗಪುರದಲ್ಲಿ ಈಚೆಗೆ ವರದಿಯಾಗಿರುವ 198 ಕೋವಿಡ್‌ ಪ್ರಕರಣಗಳಲ್ಲಿ ರೂಪಾಂತರೆ ತಳಿ ಓಮೈಕ್ರಾನ್‌ ಉಪತಳಿ ‘ಬಿಎ.2’ ಸೋಂಕಿನ ಪ್ರಕರಣಗಳೂ ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ.

‘ಬಿಎ.1’ಗೆ ಹೋಲಿಸಿದರೆ, ‘ಬಿಎ.2’ ಉಪತಳಿ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿರುವುದು ಕಂಡುಬಂದಿದೆ.

ನಿತ್ಯ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ ಎಂದು ಮೂಲಗಳು ಹೇಳಿವೆ.

ವರದಿಯಾದ 198 ಪ್ರಕರಣಗಳಲ್ಲಿ 150 ಪ್ರಕರಣಗಳು ‘ಬಿಎ.2’ ಸೋಂಕಿನವು. ವಿದೇಶಗಳಿಂದ ಬಂದವರಿಂದ ಈ ಸೋಂಕು ಕಾಣಿಸಿಕೊಂಡಿದೆ. ಉಳಿದ 48 ಪ್ರಕರಣಗಳು ಜನವರಿ 25 ರಿಂದ ಸ್ಥಳೀಯ ಮಟ್ಟದಲ್ಲಿ ವರದಿಯಾದವುಗಳಾಗಿವೆ ಎಂದು ಟುಡೇ ಪತ್ರಿಕೆ ವರದಿ ಮಾಡಿದೆ.

ಬಿಎ.2 ಸೋಂಕಿನ ತೀವ್ರತೆ ಹಾಗೂ ರೋಗನಿರೋಧಕ ಶಕ್ತಿಯಿಂದ ಪಾರಾಗಬಲ್ಲ ಸಾಮರ್ಥ್ಯದ ಕುರಿತು ಸ್ವತಂತ್ರ ಅಧ್ಯಯನದ ಅಗತ್ಯ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಸ್ಲಿಂ ಸಂಘಟನೆಗಳ ಆಕ್ರೋಶ ಮುಸ್ಲಿಂ ವಿದ್ಯಾರ್ಥಿಗಳ ಹಿಜಾಬ್ ಧರಿಸುವ ಬೇಡಿಕೆ ನಿರಾಕರಿಸಿದ ಕೇರಳ ಸರ್ಕಾರ:

Sat Jan 29 , 2022
ತಿರುವನಂತಪುರ: ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್ ಪಿ ಸಿ) ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಧರಿಸುವ ಬೇಡಿಕೆಯನ್ನು ಕೇರಳ ಸರ್ಕಾರ ನಿರಾಕರಿಸಿದೆ. ಇದು ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ರಾಜ್ಯದಲ್ಲಿ ಜಾತ್ಯತೀತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಎಸ್‌ಪಿಸಿ ಸೇರಿಕೊಂಡಿದ್ದ ಮುಸ್ಲಿಂ ವಿದ್ಯಾರ್ಥಿನಿ, ತನ್ನ ಧಾರ್ಮಿಕ ಸಂಪ್ರದಾಯಗಳ ನಿಯಮಾನುಸಾರ ಎಸ್ ಪಿ ಸಿ ಸಮವಸ್ತ್ರದ ಮೇಲೆ ಹಿಜಾಬ್ (ತಲೆ ಸ್ಕಾರ್ಫ್) ಮತ್ತು ಪೂರ್ಣ ತೋಳಿನ ಉಡುಪನ್ನು ಧರಿಸಲು ಅನುಮತಿ […]

Advertisement

Wordpress Social Share Plugin powered by Ultimatelysocial