ಬಿಶ್ಣೋಯ್ ಜನಂಗದಿಂದ ಸಲ್ಮಾನ್ ಕೊಂದ ಕೃಷ್ಣಮೃಗಕ್ಕೆ ಸ್ಮಾರಕ ನಿರ್ಮಿತ ಯಾಕೆ ?

ಬಾಲಿವುಡ್‌ನ  ನಟ ಸಲ್ಮಾನ್ ಮಾಡಿರುವ ಕುಕೃತ್ಯ .ಇದು ಸೇರಿ ಇನ್ನು ಹತ್ತು  ಹಲವು ಗುರುತರ ಆರೋಪಗಳು ಸಲ್ಮಾನ್ ಖಾನ್ ಮೇಲಿವೆ. ಆದರೆ ಹಣ ಬಲ, ನ್ಯಾಯ ವ್ಯವಸ್ಥೆಯ ಯನ್ನು ಬಳಸಿಕೊಂಡು ಸಲ್ಮಾನ್ ಖಾನ್ ಜೈಲು ಶಿಕ್ಷೆಯಿಂದ ಇಷ್ಟು ದಿನ ದೂರ ಉಳಿದಿದ್ದಾರೆ

ಐಶ್ವರ್ಯಾ ರೈ ಮನೆಯ ಬಳಿ ಕುಡಿದು ಗಲಾಟೆ ಮಾಡಿದ್ದು, ಕುಡಿದು ವಾಹನ ಚಲಾಯಿಸಿ ಫುಟ್‌ಪಾತ್ ಮೇಲೆ ಮಲಗಿರುವವರನ್ನು ಕೊಂದಿದ್ದು,ವಿವೇಕ್ ಒಬೆರಾಯ್‌ಗೆ ನೂರಾರು ಬಾರಿ ಕರೆ ಮಾಡಿ ಕೊಲ್ಲುವುದಾಗಿ ಧಮ್ಕಿ ಹಾಕಿದ್ದು, ಮತ್ತು ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಮೋಜಿಗಾಗಿ ಭೇಟೆ ಆಡಿ ಕೊಂದ್ದಿದು ಹೀಗೆ ಸಲ್ಮಾನ್ ಖಾನ್‌ ಮೇಲಿರುವ ಆರೋಪಗಳ ಪಟ್ಟಿ ಬಹುತೇಕ ಇದರಲ್ಲಿ ಕುಡಿದು ವಾಹನ ಚಲಾಯಿಸಿ ಪಾದಾಚಾರಿ ರಸ್ತೆಯ ಮೇಲೆ ಮಲಗಿದ್ದವರ ಕೊಂದಿದ್ದು ಹಾಗೂ ಕೃಷ್ಣಮೃಗ ಭೇಟೆ ಪ್ರಕರಣಗಳೆರಡೂ ತೀವ್ರ ಸುದ್ದಿಯಾಗಿದ್ದವು. ಎರಡರಲ್ಲಿಯೂ ಜೀವ ಹಾನಿ ಸಂಭವಿಸಿತ್ತು.

ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ 2018ರಲ್ಲಿಯೇ ಸಲ್ಮಾನ್ ಖಾನ್‌ಗೆ ಐದು ವರ್ಷ ಶಿಕ್ಷೆ ಹಾಗೂ 2.50 ಲಕ್ಷ ಜುಲ್ಮಾನೆ ವಿಧಿಸಲಾಗಿದೆ. ಆದರೆ ಜೋಧ್‌ಪುರ ಸೆಷನ್ಸ್‌ ನ್ಯಾಯಾಲಯದ ಈ ಆದೇಶವನ್ನು ಸಲ್ಮಾನ್ ಖಾನ್ ಪ್ರಶ್ನೆ ಮಾಡಿದ್ದಾರೆ. ವಿಚಾರಣೆ ಇನ್ನೂ ಚಾಲ್ತಿಯಲ್ಲಿರುವ ಕಾರಣ ಸಲ್ಮಾನ್ ಖಾನ್ ಇನ್ನೂ ಹೊರಗೆ ಆರಾಮ್ಆಗಿಸುತ್ತಾಡುತ್ತಿದ್ದಾರೆ.

ಆದರೆ ಇದೀಗ ಬಿಶ್ನೋಯ್ ಸಮುದಾಯದವರು ಸಲ್ಮಾನ್ ಖಾನ್ ಕೊಂದ ಕೃಷ್ಣಮೃಗದ ನೆನಪಿಗೆ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದೆ.

ಸಲ್ಮಾನ್ ಖಾನ್ 1998 ರಲ್ಲಿ ಕೃಷ್ಣಮೃಗ ಭೇಟೆಯಾಡಿದ ರಾಜಸ್ಥಾನದ ಜೋದ್‌ಪುರದ ಸ್ಥಳದಲ್ಲಿಯೇ ಬಿಶ್ಣೋಯ್ ಸಮುದಾಯವು ಕೃಷ್ಣಮೃಗದ ಸ್ಮಾರಕ ನಿರ್ಮಾಣ ಮಾಡಲಿದ್ದು, ಜೊತೆಗೆ ಗಾಯಗೊಂಡ ಪ್ರಾಣಿಗಳ ಆರೈಕೆ ಹಾಗು ಅದರ ಸಂರಕ್ಷಣೆಗೆ ಕೇಂದ್ರವೊಂದನ್ನು  ತೇರೆಯಾಲ್ಲಿದಾರೆ.

ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಸುಲಭವಾಗಿ ತಪ್ಪಿಸಿಕೊಳ್ಳದಂತೆ ತಡೆ ಹಿಡಿದಿರುವ ಶ್ರೇಯ ಬಿಶ್ಣೋಯ್ ಸಮುದಾಯಕ್ಕೆ ಸೇರಬೇಕು. ಬಿಶ್ಣೋಯ್ ಸಮುದಾಯದವರು ಕೃಷ್ಣಮೃಗಗಳನ್ನು ತಮ್ಮ ದೇವರೆಂದು, ತಮ್ಮ ಸಮುದಾಯದ ಮೊದಲ ಗುರುವಾದ ಗುರು ಜಂಬೇಶ್ವರ್ ಅಥವಾ ಜಂಬಾಜಿಯ ಅವತಾರ ಎಂದು ನಂಬಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಭೇಟೆ ಆಡಿದಾಗ ಬಿಶ್ಣೋಯ್ ಸಮುದಾಯವು ತೀವ್ರವಾಗಿ ಖಂಡಿಸಿತು.

ಬಿಶ್ಣೋಯ್ ಸಮುದಾಯವು ಪ್ರಕೃತಿ  ಪ್ರೀತಿಸುವ  ಸಮುದಾಯ. ಪ್ರಾಣಿಗಳು, ನಿಸರ್ಗದ ರಕ್ಷಣೆಗೆ ಜೀವವನ್ನೂ ಕೊಡಲು ಸಿದ್ಧವಿರುವ ಸಮುದಾಯ. ಅವರ ಗುರು ಜಂಬಾಜಿ ಆದೇಶದಂತೆ ಈ ಸಮುದಾಯವು ಪ್ರಾಣಿಗಳನ್ನು ಉಳಿಸಲು ತಮ್ಮ ಜೀವದಾನ ಮಾಡಲು ಸಹ ಸಿದ್ಧ. ಜೊತೆಗೆ ಪ್ರಕೃತಿ ಉಳಿಸುವುದರಲ್ಲಿಯೂ ಈ ಸಮುದಾಯ ಸದಾ ಮುಂದು. ರಾಜಸ್ಥಾನದಲ್ಲಿ ಅರಣ್ಯ ರಕ್ಷಣೆಯ ಹೊಣೆಯನ್ನು ಈ ಸಮುದಾಯವೇ ಹೊತ್ತುಕೊಂಡಿದೆ. ಅರಣ್ಯ ಇಲಾಖೆಗೆ ಹೆಗಲಿಗೆ ಹೆಗಲು ಕೊಟ್ಟು ಈ ಸಮುದಾಯ ಕೆಲಸ ಮಾಡುತ್ತಿದೆ. ಸದ್ಯ ಕೃಷ್ಣಮೃಗದ ಸ್ಮಾರಕ ನಿರ್ಮಾಣ ಮಾಡುತ್ತಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

Please follow and like us:

Leave a Reply

Your email address will not be published. Required fields are marked *

Next Post

ಕೊಡಗಿನ ಕುವರಿಗೆ ಕನ್ನಡದಲ್ಲಿ ಬಾಲಯ್ಯನ ಬಣ್ಣನೇ ! Rashmika Mandanna | Nandamuri Balakrishna | SNK |

Mon Jan 10 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial