ನೀರು ನಮ್ಮ ದೇಹಕ್ಕೆ ಎಷ್ಟು ಅವಶ್ಯಕ?

ಮಾನವನ ದೇಹದ ಶೇ.75ರಷ್ಟು ಭಾಗ ನೀರಿನಿಂದಲೇ ಕೂಡಿದೆ.
ಹೀಗಾಗಿ ನೀರು ಮಾನವನ ದೇಹಕ್ಕೆ ಅತೀ ಅವಶ್ಯಕವಾದ ಅಂಶವಾಗಿದೆ.
ಮೆದುಳು, ಚರ್ಮ ಮತ್ತು ಹೃದಯದ ಆರೋಗ್ಯವನ್ನು ನಿಯಂತ್ರಿಸುವುದರಿಂದ ಹಿಡಿದು, ದೇಹದ ಎಲ್ಲಾ ಅಂಗಗಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀರು ಪ್ರಮುಖ ಪಾತ್ರವಹಿಸುತ್ತದೆ. ತಜ್ಞರ ಪ್ರಕಾರ ಪುರುಷರು ದಿನಕ್ಕೆ 3.5 ಲೀ ನೀರನ್ನು ಸೇವಿಸಬೇಕು ಹಾಗೂ ಮಹಿಳೆಯರು2.5 ಲೀ ನೀರನ್ನು ಸೇವಿಸಬೇಕು ಎನ್ನುತ್ತಾರೆ.

ಮಾನವನ ದೇಹ ಸರಿಯಾಗಿ ಕೆಲಸ ಮಾಡಬೇಕು. ಆರೋಗ್ಯಯುತವಾಗಿರಬೇಕು ಎಂದರೆ ಸೇವಿಸುವ ಆಹಾರ, ನಿದ್ದೆ ಎಲ್ಲವೂ ಮುಖ್ಯವಾಗಿರುತ್ತದೆ. ಅದರ ಜತೆಗೆ ನೀರು ಸಹ ಅಷ್ಟೇ ಮುಖ್ಯವಾಗಿರುತ್ತದೆ.
ಪ್ರತಿದಿನ ನೀರಿನ ಸೇವನೆಗೂ ಒಂದು ಸಮಯವಿದೆ. ಹಾಗಾದರೆ ನೀರು ಸೇವನೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ನೋಡಿ ಮಾಹಿತಿ

ನಿರಂತರ 7-9ರಿಂದ ಗಂಟೆಗಳ ನಿದ್ದೆಯ ಬಳಿಕ ಬೆಳಗ್ಗೆ ನೀರಿನ ಸೇವನೆಯಿಂದ ದೇಹ ಶುದ್ಧಗೊಳ್ಳುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಮಕ್ಕಳ ಕೆಮ್ಮು ನಿವಾರಿಸಬೇಕೇ..? ಇಲ್ಲಿದೆ ʼಮನೆ ಮದ್ದುʼ

Mon Dec 20 , 2021
ಮಳೆಗಾಲ ಮತ್ತು ಚಳಿಗಾಲದಲ್ಲಿ ಚಿಕ್ಕ ಮಕ್ಕಳನ್ನು ಬಿಡದೆ ಕಾಡುವ ರೋಗಗಳೆಂದರೆ ಜ್ವರ, ಶೀತ, ಕೆಮ್ಮು, ಕಫ. ಇವುಗಳಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲೇ ಒಂದಷ್ಟು ಮನೆ ಮದ್ದುಗಳನ್ನು ಪ್ರಯತ್ನಿಸಬಹುದು. ಕೆಮ್ಮಿದರೆ ಕಫ ಬರದ ಕೆಮ್ಮಿಗೆ ಒಣ ಕೆಮ್ಮು ಎನ್ನುತ್ತಾರೆ. ಇದಕ್ಕೆ ಕಾರಣ ಬ್ಯಾಕ್ಟೀರಿಯಾ ಸೂಕ್ಷ್ಮಾಣು ಜೀವಿಗಳು. ಜೇಷ್ಠ ಮದ್ದನ್ನು ಸಣ್ಣದಾಗಿ ಪುಡಿ ಮಾಡಿ ಇದನ್ನು ಬಿಸಿ ನೀರಿನಲ್ಲಿ ಕುದಿಸಬೇಕು. 10 ನಿಮಿಷ ಕುದಿಸಿದ ಬಳಿಕ ಶೋಧಿಸಿ. ಬೆಚ್ಚಗೆ […]

Advertisement

Wordpress Social Share Plugin powered by Ultimatelysocial