ವಿಚಿತ್ರ ಘಟನೆ..ಮಲತಾಯಿಯನ್ನೇ ಮದುವೆಯಾದ ಮಗ:

ಉತ್ತರಾಖಂಡ್‌: ವಿಚಿತ್ರ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗನನ್ನೇ ಮದುವೆಯಾದ ಘಟನೆ ಉತ್ತರಾಖಂಡ್‌ ರಾಜ್ಯದ ಬಜ್ಪುರ್‌ನಲ್ಲಿ ನಡೆದಿದೆ. ಘಟನೆಯಿಂದ ಆಘಾತಗೊಂಡ ಪತಿ ಮಹಿಳೆ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಮಧ್ಯ ವಯಸ್ಸಿನ ಇಂದ್ರಾರಾಜ್ ಎಂಬವರು ತಮ್ಮ ಪತ್ನಿ ವಿರುದ್ಧ ದೂರು ದಾಖಲಿಸಿದ್ದು, ಪತ್ನಿ ಮಗನನ್ನೇ ಮದುವೆಯಾಗಿದ್ದಲ್ಲದೇ ಮನೆಯಲ್ಲಿದ್ದ 20 ಸಾವಿರ ರೂಪಾಯಿಯನ್ನು ಹೊತ್ತೊಯ್ದಿದ್ದಾಳೆ ಎಂದು ಪತಿ ದೂರಿನಲ್ಲಿ ಹೇಳಿದ್ದಾರೆ. ಅಂದಹಾಗೆ ಪತ್ನಿ ಮದುವೆಯಾದ ಪುತ್ರ ಆಕೆಯ ಮೊದಲ ಪತಿಯ ಮಗ ಎಂದು ತಿಳಿದು ಬಂದಿದೆ.

ಉತ್ತರಾಖಂಡ್‌ನ ಉಧಮ್‌ ಸಿಂಗ್ ನಗರದ ಬಜ್ಪುರ್‌ನಲ್ಲಿ ಈ ಘಟನೆ ನಡೆದಿದೆ. ಇಂದ್ರರಾಮ್‌ ಅವರು ಹನ್ನೊಂದು ವರ್ಷಗಳ ಹಿಂದೆ ಬಬ್ಲಿ ಎಂಬಾಕೆಯನ್ನು ವಿವಾಹವಾಗಿದ್ದರು. ಆಕೆ ಇಂದ್ರರಾಮ್‌ನನ್ನು ಮದುವೆಯಾದಾಗ ಆಕೆಯ ಮೊದಲ ಪತಿ ಬಬ್ಲಿಯನ್ನು ತೊರೆದಿದ್ದರು. ಮೊದಲ ಪತಿಯೊಂದಿಗೆ ಬಬ್ಲಿಗೆ ಇಬ್ಬರು ಮಕ್ಕಳಿದ್ದರು. ನಂತರ ಇಂದ್ರರಾಮ್ ಜೊತೆಗಿನ ದಾಂಪತ್ಯದಲ್ಲಿ ಇವರಿಗೆ ಮೂವರು ಮಕ್ಕಳಿದ್ದಾ

ಇಂದ್ರಾರಾಮ್‌ ದೂರಿನ ಪ್ರಕಾರ, ಬಬ್ಲಿಯ ಮೊದಲ ಪತಿಯ ಮಗ ಇತ್ತೀಚೆಗೆ ಆಗಾಗ ಮನೆಗೆ ಬರಲು ಆರಂಭಿಸಿದ್ದ. ಈಗ ಆತ ಮತ್ತು ನನ್ನ ಪತ್ನಿ ಮದುವೆಯಾಗಿದ್ದು, ಮನೆಯಲ್ಲಿದ್ದ 20,000 ತೆಗೆದುಕೊಂಡು ಪತ್ನಿ ಆತನೊಂದಿಗೆ ಹೊರಟು ಹೋಗಿದ್ದಾಳೆ ಎಂದು ಇಂದ್ರಾರಾಮ್ ದೂರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕೆಜಿಎಫ್ 2' ಬಳಿಕ ಗೆದ್ದ ಬಾಲಿವುಡ್ ಸಿನಿಮಾ 'ಭೂಲ್ ಭುಲಯ್ಯ 2', ಗಳಿಸಿದ್ದೆಷ್ಟು?

Sat May 21 , 2022
  ‘ಬಾಹುಬಲಿ’, ‘RRR’, ‘ಕೆಜಿಎಫ್ 2’ ಅಂತಹ ಸಿನಿಮಾಗಳು ಬಂದ್ಮೇಲೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಾಲಿನಲ್ಲಿ ಹೆಚ್ಚು ಸಿನಿಮಾಗಳು ಬರುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಬಾಲಿವುಡ್ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ನಾರ್ತ್‌ನಲ್ಲಿ ಸೌತ್ ಸಿನಿಮಾಗಳ ಅಬ್ಬರ ಜೋರಾಗಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸೌತ್‌ ಸಿನಿಮಾಗಳು ನರ್ತನ ಮಾಡುತ್ತಿದೆ. ಸೌತ್ ಸಿನಿಮಾಗಳ ಮುಂದೆ ಬಾಲಿವುಡ್ ಸಿನಿಮಾಗಳು ಏನು ಎನ್ನುವಂತೆ ಆಗಿ ಬಿಟ್ಟಿದೆ. ಅದರಲ್ಲೂ ‘ಪುಷ್ಪ’, ‘RRR’, ‘ಕೆಜಿಎಫ್ 2’ ಸಿನಿಮಾಗಳು ರಿಲೀಸ್ […]

Advertisement

Wordpress Social Share Plugin powered by Ultimatelysocial