‘ಕೆಜಿಎಫ್ 2’ ಬಳಿಕ ಗೆದ್ದ ಬಾಲಿವುಡ್ ಸಿನಿಮಾ ‘ಭೂಲ್ ಭುಲಯ್ಯ 2’, ಗಳಿಸಿದ್ದೆಷ್ಟು?

 

‘ಬಾಹುಬಲಿ’, ‘RRR’, ‘ಕೆಜಿಎಫ್ 2’ ಅಂತಹ ಸಿನಿಮಾಗಳು ಬಂದ್ಮೇಲೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಾಲಿನಲ್ಲಿ ಹೆಚ್ಚು ಸಿನಿಮಾಗಳು ಬರುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಬಾಲಿವುಡ್ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

ನಾರ್ತ್‌ನಲ್ಲಿ ಸೌತ್ ಸಿನಿಮಾಗಳ ಅಬ್ಬರ ಜೋರಾಗಿದೆ.

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸೌತ್‌ ಸಿನಿಮಾಗಳು ನರ್ತನ ಮಾಡುತ್ತಿದೆ. ಸೌತ್ ಸಿನಿಮಾಗಳ ಮುಂದೆ ಬಾಲಿವುಡ್ ಸಿನಿಮಾಗಳು ಏನು ಎನ್ನುವಂತೆ ಆಗಿ ಬಿಟ್ಟಿದೆ. ಅದರಲ್ಲೂ ‘ಪುಷ್ಪ’, ‘RRR’, ‘ಕೆಜಿಎಫ್ 2’ ಸಿನಿಮಾಗಳು ರಿಲೀಸ್ ಆದ ಬಳಿಕವಂತೂ, ಹಿಂದಿಗೆ ಡಬ್ ಆಗಿರುವ ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಹಿಂದಿಯ ಒರಿಜಿನಲ್ ಸಿನಿಮಾಗಳು ಮಕಾಡೆ ಮಲಗಿವೆ.

‘ಕೆಜಿಎಫ್ 2’ ಸಿನಿಮಾ ರಿಲೀಸ್ ಆದ ಬಳಿಕ ಬಂದ ಬಹುತೇಕ ಹಿಂದಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿವೆ. ಆದರೆ ಇದೇ ಮೊದಲು ‘ಕೆಜಿಎಫ್ 2’ ಬಳಿಕ ಬಾಕ್ಸಾಫೀಸ್‌ನಲ್ಲಿ ಹಿಂದಿ ಸಿನಿಮಾ ಒಂದು ಸದ್ದು ಮಾಡುತ್ತಿದೆ. ಅದೇ ಕಾರ್ತಿಕ್ ಆರ್ಯನ್ ಅಭಿನಯದ ‘ಭೂಲ್ ಭುಲಯ್ಯ 2’.

ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ ‘ಭೂಲ್ ಭುಲಯ್ಯ 2’. ಈ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ‘ಭೂಲ್ ಭುಲಯ್ಯ 2’ ಸಿನಿಮಾಗೆ ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

‘ಭೂಲ್ ಭುಲಯ್ಯ 2’ ಹಾರರ್ ಸಿನಿಮಾ. ಹಾರರ್ ಕಹಾನಿ ಜೊತೆಗೆ ಸಿಕ್ಕಾಪಟ್ಟೆ ಕಾಮಿಡಿ ಇದ್ದು, ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದೆಯಂತೆ. ಸಿನಿಮಾ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಗಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ದೇಶದಾದ್ಯಂತ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ‘ಭೂಲ್ ಭುಲಯ್ಯ 2’ ಸಿನಿಮಾ ರಿಲೀಸ್ ಆಗಿದೆ.

‘ಭೂಲ್ ಭುಲಯ್ಯ 2’ ರಿಲೀಸ್ ಆದ ಮೊದಲ ಅರ್ಧ ದಿನದ ಗಳಿಕೆ ಲೆಕ್ಕಾಚಾರ ಹೊರ ಬಿದ್ದಿದೆ. ಅರ್ಧ ದಿನದಲ್ಲಿ ಈ ಸಿನಿಮಾ 15 ಕೋಟಿ ಕಲೆ ಹಾಕಿದೆ ಎಂದು ಬಾಲಿವುಡ್ ವರದಿಗಳು ಹೇಳುತ್ತಿವೆ. ಇನ್ನು ಒಂದು ದಿನ ಮುಗಿಯುವುದರಲ್ಲಿ 20 ಕೋಟಿ ಮಾಡಿದರೆ, ಇದು ಬಾಲಿವುಡ್‌ನಲ್ಲಿ ಬಿಗ್ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಳ್ಳಲಿದೆ. ಸಿನಿಮಾದ ಬಗ್ಗೆ ಉತ್ತಮ ಟಾಕ್ ಇರುವುದರಿಂದ ವಾರಾಂತ್ಯದಲ್ಲಿ ಹೆಚ್ಚಿನ ಗಳಿಕೆ ಮಾಡುವ ಎಲ್ಲಾ ನಿರೀಕ್ಷೆಗಳು ಇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫ್ರಾನ್ಸ್‌ನಲ್ಲಿ ಕಳೆದ ಮೂರು ದಿನಗಳಿಂದ ಕಾನ್‌ ಫೆಸ್ಟಿವಲ್ ನಡೆಯುತ್ತಿದೆ.

Sat May 21 , 2022
  ಭಾರತದ ಹಲವು ತಾರೆಯರು ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಸದ್ಯ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ ನಟಿಯರ ಗೌನ್, ಮೇಕಪ್ ಕುರಿತೇ ಹೆಚ್ಚು ಚರ್ಚೆಯಾಗ್ತಿದೆ. ಈ ಚರ್ಚೆಯ ವಿರುದ್ದ ‘ಚಂದ್ರ ನಂದನಿ’ ಧಾರಾವಾಹಿಯ ನಟಿ ಶ್ವೇತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರಹ ಹಂಚಿಕೊಂಡಿರುವ ನಟಿ ಶ್ವೇತಾ ಕಾನ್‌ ಚಿತ್ರೋತ್ಸವದ ಕುರಿತು ತಮ್ಮ ಅಸಮಾಧನವನ್ನು ಹೊರ ಹಾಕಿದ್ದಾರೆ. ರೆಡ್ ಕಾರ್ಪೆಟ್ ಬಗ್ಗೆ ಪ್ರತಿ […]

Advertisement

Wordpress Social Share Plugin powered by Ultimatelysocial