“ಸಲಗ” ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಡಲಿದ್ದಾರೆ ಈ ಐವರು ದಿಗ್ಗಜರು..!

ಮೊದಲ ಬಾರಿಗೆ ನಟ ದುನಿಯಾ ವಿಜಯ್ ನಿರ್ದೇಶನ ಮಾಡಿ ಅಭಿನಯಿಸಿರುವ ಸಲಗ ಸಿನಿಮಾ ಬಿಡುಗಡೆಗೆ ಸಿದ್ಧತೆ ಈಗಾಗಲೇ  ಜೋರಾಗಿ ನಡೆಯುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ಅದ್ಧೂರಿ ಕಾರ್ಯಕ್ರಮ ಆಯೋಜಿಸಿರುವ ಚಿತ್ರತಂಡ, ಅದಕ್ಕಾಗಿ ಅತಿಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದೆ. ಅಕ್ಟೋಬರ್ 14 ರಂದು ಸಲಗ ಸಿನಿಮಾ ಬೆಳ್ಳಿ ಪರದೆ ಮೇಲೆ ಮೊದಲ ಪ್ರದರ್ಶನ ಕಾಣಲಿದೆ. ಅಕ್ಟೋಬರ್ 10 ರಂದು ಚಿತ್ರತಂಡದಿಂದ ಪ್ರಿರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಘಟಾನುಘಟಿ ನಾಯಕರು ಭಾಗವಹಿಸುತ್ತಿದ್ದಾರೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೆಂಚ್ಯೂರಿ ಸ್ಟಾರ್ ಶಿವರಾಜಕುಮಾರ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಚಂದನವನದ ಬುದ್ಧಿವಂತ ಉಪೇಂದ್ರ ಅವರು ಸಲಗ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಲಿದ್ದಾರೆ. ಇತ್ತೀಚಿಗಷ್ಟೆ ಅತಿಥಿಗಳ ಮನೆಗೆ ತೆರಳಿದ ಚಿತ್ರತಂಡ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಇಂಟರ್ನೆಟ್ ಇಲ್ಲದೆ ಮಾಡಬಹುದು ಎಲ್ಲಾ ಕೆಲಸ..? : ಸಾರ್ವಜನಿಕರಿಗೆ ಭರ್ಜರಿ ಗುಡ್‌ ನ್ಯೂಸ್

Fri Oct 8 , 2021
ಸಾರ್ವಜನಿಕರಿಗೆ ಭರ್ಜರಿ ಗುಡ್‌ ನ್ಯೂಸ್: ಇಂಟರ್ನೆಟ್ ಇಲ್ಲದೆ ಡಿಜಿಟಲ್ ಪಾವತಿಗೆ ವ್ಯವಸ್ಥೆ ಮಾಡ್ತಿದೆ RBI ಸದ್ಯ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಅವಶ್ಯಕತೆಯಿದೆ. ಆದ್ರೆ ಆರ್.ಬಿ.ಐ. ಈ ಸಮಸ್ಯೆ ದೂರ ಮಾಡಲು ಮಹತ್ವದ ಹೆಜ್ಜೆಯಿಟ್ಟಿದೆ. ಆಫ್ಲೈನ್ ಮೋಡ್ ನಲ್ಲಿ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಶೀಘ್ರದಲ್ಲಿಯೇ ಆಫ್ಲೈನ್ ಪೇಮೆಂಟ್ ತಂತ್ರಜ್ಞಾನ ಇಡೀ ದೇಶದಾದ್ಯಂತ ಜಾರಿಗೆ ಬರಲಿದೆ ಎಂದು ಆರ್.ಬಿ.ಐ. ಹೇಳಿದೆ. ಇಂಟರ್ನೆಟ್ ಸಂಪರ್ಕ ಕಡಿಮೆಯಿರುವ ಅಥವಾ ಇಂಟರ್ನೆಟ್ […]

Advertisement

Wordpress Social Share Plugin powered by Ultimatelysocial