ಇಂಟರ್ನೆಟ್ ಇಲ್ಲದೆ ಮಾಡಬಹುದು ಎಲ್ಲಾ ಕೆಲಸ..? : ಸಾರ್ವಜನಿಕರಿಗೆ ಭರ್ಜರಿ ಗುಡ್‌ ನ್ಯೂಸ್

ಸಾರ್ವಜನಿಕರಿಗೆ ಭರ್ಜರಿ ಗುಡ್ನ್ಯೂಸ್: ಇಂಟರ್ನೆಟ್ ಇಲ್ಲದೆ ಡಿಜಿಟಲ್ ಪಾವತಿಗೆ ವ್ಯವಸ್ಥೆ ಮಾಡ್ತಿದೆ RBI

ಸದ್ಯ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಅವಶ್ಯಕತೆಯಿದೆ. ಆದ್ರೆ ಆರ್.ಬಿ.ಐ. ಈ ಸಮಸ್ಯೆ ದೂರ ಮಾಡಲು ಮಹತ್ವದ ಹೆಜ್ಜೆಯಿಟ್ಟಿದೆ. ಆಫ್ಲೈನ್ ಮೋಡ್ ನಲ್ಲಿ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಶೀಘ್ರದಲ್ಲಿಯೇ ಆಫ್ಲೈನ್ ಪೇಮೆಂಟ್ ತಂತ್ರಜ್ಞಾನ ಇಡೀ ದೇಶದಾದ್ಯಂತ ಜಾರಿಗೆ ಬರಲಿದೆ ಎಂದು ಆರ್.ಬಿ.ಐ. ಹೇಳಿದೆ.

ಇಂಟರ್ನೆಟ್ ಸಂಪರ್ಕ ಕಡಿಮೆಯಿರುವ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದ ಜನರು ಕೂಡ ಇದ್ರಿಂದ ಸುಲಭವಾಗಿ ಡಿಜಿಟಲ್ ಪಾವತಿ ಮಾಡಬಹುದು. ಆಗಸ್ಟ್ 6, 2020 ರಂದು, ನವೀನ ತಂತ್ರಜ್ಞಾನದ ಪ್ರಾಯೋಗಿಕ ಪ್ರಯೋಗಗಳನ್ನು ನಡೆಸುವ ಯೋಜನೆಯನ್ನು ಆರ್.ಬಿ.ಐ. ಘೋಷಿಸಿತ್ತು. ಅದು ಇಂಟರ್ನೆಟ್ ಸಂಪರ್ಕ ಲಭ್ಯವಿಲ್ಲದ ಸಂದರ್ಭಗಳಲ್ಲಿ ಆಫ್ಲೈನ್ ಮೂಡ್ ನಲ್ಲಿ ಡಿಜಿಟಲ್ ಪಾವತಿ ಪ್ರಾಯೋಗಿಕ ಪ್ರಯೋಗವನ್ನು ಒಳಗೊಂಡಿತ್ತು.

ಪ್ರಾಯೋಗಿಕ ಯೋಜನೆಯಡಿ, ಸೆಪ್ಟೆಂಬರ್ 2020 ರಿಂದ ಜೂನ್ 2021 ರವರೆಗಿನ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರಯೋಗ ಯಶಸ್ವಿಯಾಗಿದೆ. ಇದ್ರಲ್ಲಿ ಪಡೆದ ಅನುಭವ ಮತ್ತು ಉತ್ತೇಜನಕಾರಿ ಪ್ರತಿಕ್ರಿಯೆಯನ್ನು ಗಣನೆಗೆ ತೆಗೆದುಕೊಂಡು, ಆರ್.ಬಿ.ಐ. ಈಗ ದೇಶಾದ್ಯಂತ ಆಫ್‌ಲೈನ್ ಮೋಡ್‌ನಲ್ಲಿ ಚಿಲ್ಲರೆ ಡಿಜಿಟಲ್ ಪಾವತಿ ತಂತ್ರಜ್ಞಾನ ಜಾರಿಗೆ ತರಲು ಮುಂದಾಗಿದೆ. ಇದ್ರ ಬಗ್ಗೆ ಶೀಘ್ರದಲ್ಲಿಯೇ ಮಾರ್ಗಸೂಚಿ ಹೊರಬರಲಿದೆ.

ಪ್ರಾಯೋಗಿಕ ಯೋಜನೆಯಡಿ, ಬ್ಯಾಂಕುಗಳು ಮತ್ತು ಬ್ಯಾಂಕೇತರರು ಆಫ್‌ಲೈನ್ ಡಿಜಿಟಲ್ ಪಾವತಿ ನೀಡಬಹುದು. ಇಂಟರ್ನೆಟ್ ಸಂಪರ್ಕದ ಕೊರತೆ ಅಥವಾ ಅನಿಯಮಿತತೆ, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ, ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಲು ಪ್ರಮುಖ ಅಡಚಣೆಯಾಗಿದೆ ಎಂದು ಆರ್.ಬಿ.ಐ. ಹೇಳಿದೆ. ಆಫ್ಲೈನ್ ​​ಪಾವತಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕಂಪನಿಗಳನ್ನು ಪ್ರೋತ್ಸಾಹಿಸಲಾಗ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ನಾಯಕರ ವಾಹನ ಬಂದಾಗ ಬಹಳ ಎಚ್ಚರಿಕೆ, ಜೋಪಾನ; ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ್

Fri Oct 8 , 2021
  ಬಿಜೆಪಿ ನಾಯಕರ ವಾಹನ ಬಂದಾಗ ಬಹಳ ಎಚ್ಚರಿಕೆ, ಜೋಪಾನ ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ .ಶಿವಕುಮಾರ್ ಅವರು ಶುಕ್ರವಾರ ಜನತೆಗೆ ಕಿವಿಮಾತು, ಬುದ್ದಿಮಾತು ಹೇಳಿದ್ದಾರೆ. ಬಿಜೆಪಿ ನಾಯಕರ ಕಾರು ನಿಮ್ಮ ಅಕ್ಕ ಪಕ್ಕದಲ್ಲಿ ಹೋಗುವಾಗ ಮೊಬೈಲ್ ಕ್ಯಾಮರಾದಿಂದ ರೆಕಾರ್ಡ್ ಮಾಡಿಕೊಳ್ಳಿ. ಯಾವಾಗ, ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ಎಂಬುದೇ ತಿಳಿಯುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವರೊಬ್ಬರ […]

Advertisement

Wordpress Social Share Plugin powered by Ultimatelysocial