ಸೋಂಕು ನಿರ್ವಹಣೆಗೆ ಪ್ಯಾಕೇಜ್

ಅಮೆರಿಕದಲ್ಲಿ ಸೋಂಕಿನ ಪರಿಸ್ಥಿತಿ ನಿರ್ವಹಣೆಗಾಗಿ ೩ ಟ್ರಿಲಿಯನ್ ಡಾಲರ್‌ಗಳ ಪ್ಯಾಕೇಜ್ ಅಂಗೀಕರಿಸಲಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಯಲ್ಲಿ ಈ ಅಂಶ ರಿಪಬ್ಲಿಕನ್, ಡೆಮಾಕ್ರಾಟಿಕ್ ಪಕ್ಷಗಳಿಗೆ ಪ್ರಮುಖವಾಗಿದೆ. ಆದರೆ ಪ್ಯಾಕೇಜ್ ಅಂಗೀಕರಿಸುವ ಮೊದಲು ಅಧ್ಯಕ್ಷ ಟ್ರಂಪ್ ಭಾರಿ ಸವಾಲನ್ನೇ ಎದುರಿಸಬೇಕಾಯಿತು. ಸೆನೆಟ್‌ನಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಮಿಶ್ ಮೆಕ್‌ಕಾನೆಲ್ ಅವರು ಕೊರೊನಾಗಾಗಿ ೧ ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್‌ನ್ನು ಬಿಡುಗಡೆ ಮಾಡುವ ಪ್ರಸ್ತಾವನೆ ಮಂಡಿಸಿದರು. ಆದರೆ, ಪ್ಯಾಕೇಜ್ ಘೋಷಣೆ ವಿಷಯದಲ್ಲಿ ಟ್ರಂಪ್ ಮತ್ತು ರಿಪಬ್ಲಿಕನ್ ಸಂಸದರ ನಡುವೆ ಒಡ ಮೂಡದ ಸಹಮತ ಹಾಗೂ ಡೆಮಾಕ್ರೆಟಿಕ್ ಸಂಸದರೊAದಿಗಿನ ಭಿನ್ನಾಭಿಪ್ರಾಯ, ಪ್ಯಾಕೇಜ್‌ನ ಸುಲಭ ಅಂಗೀಕಾರಕ್ಕೆ ತೊಂದರೆ ಒಡ್ಡಿತು. ಬಿರುಸಿನ ಚರ್ಚೆಯ ಬಳಿಕ ೩ ಟ್ರಿಲಿಯನ್ ಪ್ಯಾಕೇಜ್ ಅಂಗೀಕರಿಸಿರುವ ಬಗ್ಗೆ ಸ್ಪೀಕರ್ ನಾನ್ಸಿ ಪೆಲೊಸಿ ಘೋಷಣೆ ಮಾಡಿದರು.

Please follow and like us:

Leave a Reply

Your email address will not be published. Required fields are marked *

Next Post

ಖಾಸಗಿ ಆಸ್ಪತ್ರೆಗಳ ಕೊರೊನಾ ವೈರಸ್ ಪರೀಕ್ಷಾ ದರ ಇಳಿಕೆ

Wed Jul 22 , 2020
ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ವೈರಸ್ ಪರೀಕ್ಷಾ ದರವನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಒಂದು ಕೊರೊನಾ ಪರೀಕ್ಷೆಗೆ 4 ಸಾವಿರಕ್ಕಿಂತಲೂ ಅಧಿಕ ಹಣ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಗಳು ಈಗ ಗರಿಷ್ಠ 3 ಸಾವಿರ ರೂ. ಪಡೆಯುವಂತೆ ಸರ್ಕಾರ ದರವನ್ನು ನಿಗದಿಪಡಿಸಿದೆ. ಸರ್ಕಾರದಿಂದ ಪರೀಕ್ಷೆಗೆ ಶಿಫಾರಸು ಪಡೆದು ಹೋದವರಿಗೆ […]

Advertisement

Wordpress Social Share Plugin powered by Ultimatelysocial