ಹಾವೇರಿ-ಹಾನಗಲ್  ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸಭೆ

ಹಾವೇರಿ ಹಾನಗಲ್  ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ  ಸಭೆ ನಡೆಸಿದರು. ವಿವಿಧ ಕರ್ತವ್ಯ ನಿಭಾವಣೆಗೆ ನೋಡಲ್ ಅಧಿಕಾರಿಗಳನ್ನಾಗಿ ಸಂಜಯ ಶೆಟ್ಟೆಣ್ಣಯವರನ  ನೇಮಿಸಿದರು.   ಸಭೆ ಬಳಿಕ ಮತನಾಡಿದ ಅವರು  ಚುನಾವಣಾ ಕರ್ತವ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಇಂದಿನಿದಲೇ ತಮಗೆ ವಹಿಸಿದ ಜವಾಬ್ದಾರಿಗಳನ್ನು  ನಿಭಾಯಿಸಲು ಕಾರ್ಯಪ್ರವೃತ್ತರಾಗಿ ಎಂದು ಸೂಚನೆ ನೀಡಿದರು.ಹಾನಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಯಾವುದೇ ರಾಜಕೀಯ ಹಾಗೂ ರಾಜಕೀಯೇತರ  ಕಾರ್ಯಕ್ರಮ ನಡೆದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಹಾಜರಿರಬೇಕು.  ದೂರು ಬಂದ ಸ್ಥಳದಲ್ಲಿ ವಿಳಂಬವಿಲ್ಲದೆ ಹಾಜರಾಗಬೇಕು. ಕೋವಿಡ್ ನಿಯಮಗಳ ಉಲ್ಲಂಘನೆಯಾಗದಂತೆ ತೀವ್ರ ನಿಗಾವಹಿಸಬೇಕು.   ದಿನದ 24 ತಾಸು ತೀವ್ರ ಎಚ್ಚರಿಂದ ಕಾರ್ಯನಿರ್ವಹಿಸಬೇಕು ಎಂದು ಚುನಾವಣಾ ನಿಯೋಜಿತ ವಿವಿಧ ತಂಡಗಳ ನೋಡೆಲ್‍ಅಧಿಕಾರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದ್ದಾರೆ.

 

 

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು ಜಿಲ್ಲಾಧಿಕಾರಿಯನ್ನು ವಜಾಗೋಳಿಸುವಂತೆ ಆಗ್ರಹ

Mon Oct 4 , 2021
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ   ಜಾಲಹಳ್ಳಿಪಟ್ಟಣದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಸರ್ಕಾರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಪ್ಪು ಮಾಹಿತಿ ಒದಗಿಸಿದಕ್ಕೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸ ಬೇಕೆಂದು ಗ್ರಾ.ಪಂ ಮಾಜಿ ಸದಸ್ಯ ನರಸಣ್ಣ ನಾಯಕ ಆಗ್ರಹಿಸಿದರು ಪಟ್ಟಣದ ಶ್ರಮಿಕ ಭವನದಲ್ಲಿ ಮಾತನಾಡಿ ಅವರು ಕಳೆದ 6 ತಿಂಗಳ ಹಿಂದೆ ಇಲ್ಲಿನ ಗ್ರಾ.ಪಂ ಯನ್ನು ಸರ್ಕಾರ ಮೇಲ್ದರ್ಜೆಗೆ ಏರಿಸುವ ಮೂಲಕ ಸ್ಥಳೀಯ ಬಡ ಕೂಲಿ ಕಾರ್ಮಿಕರ ಬದುಕು ಸೇರಿದಂತೆ ಇತರೆ ಎಲ್ಲಾ […]

Advertisement

Wordpress Social Share Plugin powered by Ultimatelysocial