ಬರ್ತ್​ಡೇ ದಿನ ದೊಡ್ಡದಾಗಿ ಸಿಗ್ನಲ್​ ಕೊಡ್ತಾರಂತೆ ರಾಕಿ ಭಾಯ್

ರಾಕಿಂಗ್ ಸ್ಟಾರ್ ಯಶ್ ಸದಾ  ಒಂದು ದೊಡ್ಡ ಗುರಿ ಇಟ್ಟುಕೊಂಡೇ ಬಂದಿದ್ದಾರೆ. ಅದನ್ನ ಸಿನಿಮಾದ ಡೈಲಾಗ್ ರೀತಿ ಹೇಳಿ ಸುಮ್ನೆ ಆಗೋದಿಲ್ಲ. ಹೇಳಿದ್ದನ್ನ ಮಾಡ್ತಾನೇ ಬಂದಿದ್ದಾರೆ. ಕನ್ನಡ ಇಂಡಸ್ಟ್ರೀಯನ್ನ ಬೇರೆ  ಲೆವಲ್​​ಗೆ ತೆಗೆದುಕೊಂಡು ಹೊಗುತ್ತೇವೆ ಅಂತಲೇ ಹೇಳಿದ್ದರು.
ಆ ಪ್ರಕಾರ ಅದಕ್ಕಾಗಿ ಶ್ರಮಿಸಿದ್ದು ಇದೆ. ಅದಕ್ಕೆ ದಿ ಬೆಸ್ಟ್​ ಎಕ್ಸಾಂಪಲ್ ಗೊತ್ತೇ ಇದೆ. ಅದುವೇ ಕೆಜಿಎಫ್ ಕನ್ನಡ ಸಿನಿಮಾ. ಈ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದರು. ಕನ್ನಡದ ಹೆಸರನ್ನೂ ಬೇರೆ ಲೆವಲ್​ಗೆ ತೆಗೆದುಕೊಂಡು ಹೋದ್ರು. ಆದರೆ ಈಗ ಅವರ ಗುರಿ ಇನ್ನೂ ದೊಡ್ಡಮಟ್ಟದಲ್ಲಿಯೇ ಇದೆ.ರಾಕಿ ಭಾಯ್ ಯಶ್ ಇಡೀ ನಾಡಿನ ಹೆಮ್ಮೆಯನ್ನ ಹೆಚ್ಚಿಸಿದ್ದಾರೆ. ಇತಿಹಾಸ ಪುಟದಲ್ಲಿ ಇವರ ಹೆಸರು ದಾಖಲಾಗಿದೆ. ಸಿನಿಮಾ ರಂಗದ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಯಾವುದು? ವಿಜಯ್ ಕಿರಗಂದೂರು ಅವರ ಕೆಜಿಎಫ್ ಚಿತ್ರ ಅಂತಲೇ ಉತ್ತರ ಬರುತ್ತದೆ.
ಯಾರಂದ್ರೆ ಯಾರೂ ನಿರೀಕ್ಷೆ ಮಾಡದೇ ಇರೋ ಮಟ್ಟಕ್ಕೆ ಸಿನಿಮಾ ರೀಚ್ ಆಗಿದೆ. ಕನ್ನಡದ ಇತರ ಚಿತ್ರ ನಿರ್ಮಾಪಕರಿಗೂ ದಾರಿ ದೀಪದಂತೇನೆ ಆಗಿದೆ. ಇದಾದ್ಮೇಲೆ ಅಲ್ವೇ? ಕನ್ನಡ ಕಾಂತಾರ ಕೂಡ ಅದೇ ಹಾದಿಯಲ್ಲಿಯೇ ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದು?
ರಾಕಿ ಭಾಯ್ ಕನಸು-ಗುರಿ ಎರಡೂ ದೊಡ್ಡಮಟ್ಟದಲ್ಲಿಯೇ ಇವೆ. ಇಲ್ಲಿವರೆಗೂ ನ್ಯಾಷನಲ್ ಸ್ಟಾರ್ ಆಗಿದ್ದ ರಾಕಿ ಭಾಯ್ ಬೇರೆ ಲೆವಲ್​​ಗೆ ಯೋಚನೆ ಮಾಡುತ್ತಿದ್ದಾರೆ. ಇವರ ಕನಸು ಬೇರೇ ಇದೆ. ಇದರ ಲೆವಲ್ ಈಗ ಬೇರೆ ಇದೆ. ಅದು ಇಂತಿದೆ.
ರಾಕಿ ಭಾಯ್ ಯಶ್ ಈಗ ಕನ್ನಡ ಸಿನಿಮಾ, ನ್ಯಾಷನಲ್ ಸಿನಿಮಾ ಅಂತ ಯೋಚನೆ ಮಾಡ್ತಿಲ್ಲ. ಅವರ ಲೆಕ್ಕಾಚಾರ ವರ್ಲ್ಡ್ ಸಿನಿಮಾನೇ ಆಗಿದೆ. ಕಾಂಪಿಟೇಷನ್ ಇರೋದು ನ್ಯಾಷನಲ್​ ಚಿತ್ರದ ಜೊತೆಗೆ ಅಲ್ವೇ ಅಲ್ಲ. ಅವರ ಮುಂದಿನ ಕಾಂಪಿಟೇಷನ್ ಇರೋದು ವರ್ಲ್ಡ್ ಚಿತ್ರವೇ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಸಹನಾ-ಮುರಳಿ ಲಗ್ನಕ್ಕೆ ಮೇಷ್ಟ್ರ ಮನೆಯವರ ಒಪ್ಪಿಗೆ!

Mon Dec 26 , 2022
ಪುಟ್ಟಕ್ಕನ ಮಕ್ಕಳು  ಜೀ ಕನ್ನಡದ ಹೆಸರಾಂತ ಧಾರಾವಾಹಿ . ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಪುಟ್ಟಕ್ಕನ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಸಹನಾ, ಸ್ನೇಹ, ಸುಮಾ. ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ದೊಡ್ಡ ಮಗಳುಸಹನಾ ಪ್ರೀತಿ ಮಾಡ್ತೀರೋ ಮುರಳಿ ಮೇಷ್ಟ್ರು ಜೊತೆ ಮದುವೆ ಮಾಡಿಸಬೇಕು […]

Advertisement

Wordpress Social Share Plugin powered by Ultimatelysocial