ಹಾಸಿಗೆಯಿಂದ ಎದ್ದ ಕೂಡಲೇ ಮೊಬೈಲ್‌ ನೋಡಲೇಬೇಡಿ.. ಯಾಕೆ ಗೊತ್ತಾ?

 ಅದೆಷ್ಟೋ ಜನ ತಮ್ಮ ದಿನವನ್ನು ಮೊಬೈಲ್‌ ಆನ್‌ ಮಾಡುವ ಮೂಲಕವೇ ಶುರು ಮಾಡುತ್ತಾರೆ. ಬೆಳಗ್ಗೆ ಎಚ್ಚರವಾದ ತಕ್ಷಣ ಮೊಬೈಲ್‌ ಹುಡುಕಾಟ ಶುರು. ಆದರೆ ಇದು ಎಷ್ಟರಮಟ್ಟಿಗೆ ಸರಿ ತಪ್ಪು ಎಂದು ಮುಂದೆ ತಿಳಿಯೋಣ.

ಮೊಬೈಲ್‌ ಒಂದು ಅದ್ಭುತ ಬಳಕೆ. ಅದೆಷ್ಟೋ ಕೆಲಸ, ವ್ಯವಹಾರಗಳು ಕೂತಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಆದರೆ ಇದರ ಅತಿಯಾದ ಬಳಕೆ ಮತ್ತು ಇದರ ಮೇಲಿನ ಅತಿಯಾದ ಅವಲಂಬನೆ ನಿಮ್ಮ ದೇಹದ ಹಾಗು ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಬೆಳಗ್ಗೆ ನಿದ್ರೆಯಿಂದ ಎದ್ದು ತಕ್ಷಣ ನಿಮ್ಮ ಮನಸ್ಸು ಮೆದುಳಿ ಸಂಪೂರ್ಣವಾಗಿ ವಿಶ್ರಾಂಗೊಂಡಿರುತ್ತದೆ. ಹಾಗು ನಿಮ್ಮ ಮೆದುಳಿಗೆ ಒಳ್ಳೆಯ ಕೆಲಸ ಅಥವಾ ಒಳ್ಳೆಯ ಆಲೋಚನೆಗಳನ್ನು ಕೊಡಿ. ಅದು ಬಿಟ್ಟು ಫೋನ್‌ ಹಿಡಿದರೆ ಫೋನ್‌ನಲ್ಲಿ ಬಂದ ಎಲ್ಲಾ ಆಲೋಚನೆಗಳು ನಿಮ್ಮ ಮೆದುಳಿಗೆ ಎದ್ದ ಕೂಡಲೇ ಒತ್ತಡವನ್ನುಂಟು ಮಾಡುತ್ತದೆ. ಇನ್ನು ಕೆಲವರು ಬೆಳಗ್ಗೆ ನ್ಯೂಸ್‌ಗಳನ್ನು ಮೊಬೈಲ್‌ನಲ್ಲಿಯೇ ಸ್ಕ್ರಾಲ್‌ ಮಾಡಿ ಓದಲು ಶುರು ಮಾಡುತ್ತಾರೆ. ಹೀಗೆ ಎದ್ದ ತಕ್ಷಣ ಮೊಬೈಲ್‌ ಸ್ಕ್ರಾಲ್‌ ಮಾಡಿದರೆ ನಿಮ್ಮ ಕಣ್ಣಿಗೆ ಇನ್ನಿಲ್ಲದ ಪರಿಣಾಮ ಬೀರುತ್ತದೆ. ಆದಷ್ಡು ಬೆಳಗ್ಗೆ ನ್ಯೂಸ್‌ ಪೇಪರ್‌ಗಳನ್ನೇ ಓದಿ. ನ್ಯೂಸ್‌ ಪೇಪರ್‌ ಮೇಲೆ ಕಣ್ಣಾಡಿಸಿದರೆ ಕಣ್ಣಿಗೆ ಉತ್ತಮ ಎಕ್ಸಸೈಸ್‌ ಆಗುತ್ತೆ. ಬೆಳಗ್ಗೆ ಫೋನ್‌ ಬಳಸುವ ಕುರಿತು ಸಂಶೋಧನೆ ಏನು ಹೇಳುತ್ತದೆ ಎಂದರೆ, ಶೇಕಡಾ 80 ರಷ್ಟು ಜನ ಎಲ್ಲ ವಯೋಮಾನದವರೂ ಸೇರಿ ಬೆಳಗ್ಗೆ ಎದ್ದ ತಕ್ಷಣ ಸುಮಾರು ಹದಿನೈದು ನಿಮಿಷಗಳ ಕಾಲ ಸತತವಾಗಿ ಮೊಬೈನ್‌ ಸ್ಕ್ರೋಲ್‌ ಮಾಡುತ್ತಾರೆ.

ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಪೋನ್‌ ಹಿಡಿದುಕೊಂರೆ ಮಾನಸಿಕ ಶಾಂತಿಗೆ ಧಕ್ಕೆ ಉಂಟಾಗುತ್ತದೆ. ಕಾರಣ ಇಷ್ಟೆ ಹಾಸಿಗೆಯಿಂದ ಎದ್ದ ತಕ್ಷಣ ಫೋನ್‌ ನೋಡಿದರೆ ಅದರಲ್ಲಿ ಬರುವ ಸುದ್ದಿಗಳೆಲ್ಲಾ ಒಳ್ಳೆಯದೇ ಆಗಿರುತ್ತವೆ ಅಂತೇನು ಇಲ್ಲ. ಕೆಲ ಸುದ್ದಿಗಳು ನಿಮ್ಮ ದಿನದ ಮೂಡ್‌ ಅನ್ನು ಹಾಳು ಮಾಡುವ ಸುದ್ದಿಗಳೂ ಆಗಿರುತ್ತವೆ. ಸುಖವಾಗಿ ನಿದ್ರೆ ಮಾಡಿ ಹಾಸಿಗೆಯಿಂದ ಎದ್ದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬೇರೆಯವರ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಸರಿ. ಆದಷ್ಟು ನೀವು ನಿಮ್ಮ ಜೀವನದಲ್ಲಿ ಬಗ್ಗೆ ಎದ್ದ ತಕ್ಷಣ ಗಮನಹರಿಸ. ಬೇರೆಯವ ಚಿಂತೆ ನಿಮ್ಯಾಕೆ..? ಅಲ್ವಾ.. ಆಫೀಸ್‌ಗೆ ಸಂಬಂಧಪಟ್ಟ ಮೇಲ್‌, ಮೆಸೇಜ್‌ಗಳನ್ನು ಫೋನ್‌ನಲ್ಲಿ ಎದ್ದ ತಕ್ಷಣ ನೋಡಬೇಡಿ. ಹಾಗಂತ ನೋಡದೇ ಇರಬೇಡಿ. ಆಫೀಸ್‌ ಕೆಲಸಗಳು, ಒತ್ತಡಗಳು ಎದ್ದ ತಕ್ಷಣ ನಿಮಗೆ ಒತ್ತಡ ಕಿರಿಕಿರಿ ಉಂಟಾಗಬಹುದು. ನಿತ್ಯಕರ್ಮಗಳ ನಂತರ ಆಫೀಸ್‌ ಮೇಲ್‌, ಮೆಸೇಜ್‌ಗಳತ್ತ ಗಮನಹರಿಸಿ. ಮತ್ತೊಂದು ಸಂಶೋಧನೆ ಹೇಳು ಪ್ರಕಾರ ನೀವು ಮೊಬೈಲ್‌ ನೋಡಲು ಶುರು ಮಾಡಿದರೆ ನಿಮಗೆ ಒತ್ತಡ ಶುರುವಾಗುತ್ತದೆ ಹಾಗೆಯೇ ಮೊಬೈಲ್‌ ಬಳಕೆ ಮುಂದುವರೆಸಿ ಒತ್ತಡ ಇನ್ನೂ ಹೆಚ್ಚಾಗುತ್ತದೆ. ಇದರ ಮೇಲೆ ನೀವೇ ನಿರ್ಧಾರ ಮಾಡಿ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ಬಳಕೆ ಎಷ್ಟು ಸರಿ ಎಷ್ಟು ತಪ್ಪು ಎಂದು. ಹಾಗಾಗಿ ಬೆಳಗ್ಗೆ ಕಿರಿಕಿರಿ ಉಂಟು ಮಾಡುವ ಮೊಬೈಲ್‌ ಬಳಕೆ ಕಡಿಮೆ ಮಾಡಿ ತೀರಾ ಅವಷ್ಯಕ ಎಂದಾಗ ಮಾತ್ರ ಮೊಬೈಲ್‌ ಕೈಗೆತ್ತುಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ವ್ಯಕ್ತಿ ಶವವನ್ನು ಸುತ್ತುವರಿದ 124 ಹಾವುಗಳು. ಆತನ ಸಾವಿಗೆ ಪುರಾವೆಗಳು ಸಿಗದೇ ಪೊಲೀಸರೇ ಕಂಗಾಲು!

Mon Jan 24 , 2022
ಅಮೆರಿಕ: ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಕಳೆದ ಗುರುವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಮೃತ ದೇಹದ ಬಳಿ 100ಕ್ಕೂ ಹೆಚ್ಚು ವಿಷಕಾರಿ ಮತ್ತು ವಿಷರಹಿತ ಹಾವುಗಳು ಕಂಡುಬಂದ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಹೌದು, ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ 9 ವರ್ಷದ ವ್ಯಕ್ತಿಯನ್ನು ಹಿಂದಿನ ದಿನದಿಂದ ನೋಡಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪೊಲೀಸರು ವ್ಯಕ್ತಿಯ ಮನೆಗೆ ಬಂದು ಬಾಗಿಲು ತೆರೆದರೆ, ವ್ಯಕ್ತಿಯು ನೆಲದ […]

Advertisement

Wordpress Social Share Plugin powered by Ultimatelysocial