ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆದ ಶಿವಸೇನೆ ಮತ್ತು ಎಂಇಎಸ್‍ನ್ನು ನಿಷೇಸಬೇಕೆಂದು ಆಗ್ರಹಿಸಿ ಪ್ರತಿಭಟನೆ

ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆದ ಶಿವಸೇನೆ ಮತ್ತು ಎಂಇಎಸ್‍ನ್ನು ನಿಷೇಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸೇರಿದಂತೆ 15ಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಹದೇವ್ ತಳವಾರ್ ನೇತೃತ್ವದಲ್ಲಿ ರಾಯಣ್ಣ ವೃತ್ತದ ಸಮೀಪ ಪ್ರತಿಭಟನೆ ನಡೆಸಿ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಿಎಂ ಉದ್ದವ್ ಠಾಕ್ರೆ ಅವರ ಪ್ರತಿಕೃತಿ ದಹಿಸಿ ರಾಜ್ಯ ಹೆದ್ದಾರಿ ತಡೆಯುವ ಪ್ರಯತ್ನ ನಡೆಸಲಾಗಿದೆ.ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಇದಕ್ಕೆ ಬಗ್ಗದಿದ್ದಾಗ 15ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಮಹದೇವ್ ತಳವಾರ್, ಅಜಂತ, ಎಲ್ಲೋರ, ಕೊಲ್ಲಾಪುರ ದೇವಸ್ಥಾನ ಕಟ್ಟಿದ್ದು ನಾವು. ನಾವು ಯಾವತ್ತೂ ಹೋರಾಟಗಾರರಿಗೆ ಅವಮಾನ ಮಾಡಿಲ್ಲ. ಶಿವಸೇನೆ, ಎಂಇಎಸ್ ನಮಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.ಡಿಸಿಪಿ ವಿಕ್ರಮ್ ಅಮ್ಟೆ ಅವರು ಕನ್ನಡಪರ ಹೋರಾಟಗಾರರ ಜೊತೆ ಮಾತುಕತೆ ನಡೆಸಿ, ನಿಷೇಧಾಜ್ಞೆ ಜಾರಿಯಲ್ಲಿದೆ. ಶಾಂತಿಯುತ ಪ್ರತಿಭಟನೆಗೂ ಅವಕಾಶವಿಲ್ಲ ಎಂದು ಮನವೊಲಿಸುವ ಯತ್ನ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಎಸ್ ಕೆ ಫ್ರಾಂಚೈಸಿಗೆ ಧೋನಿ ಮೊದಲ ಆಯ್ಕೆಯ ನಾಯಕನಾಗಿರಲಿಲ್ಲ:ಮಾಜಿ ಸಿಎಸ್ ಕೆ ಆಟಗಾರ ಸುಬ್ರಹ್ಮಣ್ಯಮ್ ಬದ್ರಿನಾಥ್

Sun Dec 19 , 2021
ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು 2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್‌ ನಲ್ಲಿದ್ದಾರೆ. ಮುಂಬರುವ 2022 ಸಾಲಿನ ಕೂಟದಲ್ಲೂ ಅವರು ಮತ್ತೊಮ್ಮೆ ಸಿಎಸ್ ಕೆ ತಂಡವನ್ನು ಮುನ್ನಡೆಸಲಿದ್ದಾರೆ.ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಫ್ರಾಂಚೈಸಿಯನ್ನು ಇದುವರೆಗೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಸಿಎಸ್ ಕೆ ಫ್ರಾಂಚೈಸಿಗೆ ಧೋನಿ ಮೊದಲ ಆಯ್ಕೆಯ ನಾಯಕನಾಗಿರಲಿಲ್ಲ ಎಂದು ಮಾಜಿ ಸಿಎಸ್ ಕೆ ಆಟಗಾರ ಸುಬ್ರಹ್ಮಣ್ಯಮ್ ಬದ್ರಿನಾಥ್ ಹೇಳಿದ್ದಾರೆ.ಬದ್ರಿನಾಥ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ […]

Advertisement

Wordpress Social Share Plugin powered by Ultimatelysocial