ಬಪ್ಪಿ ಲಾಹಿರಿ ಭಾರತೀಯ ಸಿನಿಮಾಲೋಕದ ಪ್ರಸಿದ್ಧ ಸಂಗೀತ ನಿರ್ದೇಶಕ.

 

ಭಾರತೀಯ ಸಿನಿಮಾಲೋಕದ ಪ್ರಸಿದ್ಧ ಸಂಗೀತ ನಿರ್ದೇಶಕರಲ್ಲಿ ಬಪ್ಪಿ ಲಾಹಿರಿ ಒಬ್ಬರು. ಅವರು ಸಂಗೀತ ಸಂಯೋಜಿಸಿದ ಅನೇಕ ಗೀತೆಗಳು ಜನಪ್ರಿಯವಾದವು. ಅಂತೆಯೇ ಅಪಾರ ಚಿನ್ನಾಭರಣಗಳನ್ನು ಧರಿಸಿ ತಂಪು ಕನ್ನಡಕ ಏರಿಸಿಕೊಂಡು ವಿಜೃಂಭಿಸುತ್ತಿದ್ದ ನಗೆಮೊಗದ ಅವರ ವ್ಯಕ್ತಿತ್ವವೂ ವಿಶಿಷ್ಟವಾಗಿತ್ತು. ಬಪ್ಪಿ ಲಾಹಿರಿ ಅವರ ಮೂಲ ಹೆಸರು ಅಲೋಕೇಶ್ ಲಾಹಿರಿ. ಇಂದು ಅವರ ಸಂಸ್ಮರಣೆ ದಿನ.ಬಪ್ಪಿ ಲಾಹಿರಿ 1952ರ ನವೆಂಬರ್ 27ರಂದು ಜಲ್ಪೈಗುರಿಯಲ್ಲಿ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ತಂದೆ ಅಪರೇಶ್ ಲಾಹಿರಿ. ತಾಯಿ ಬಾನ್ಸುರಿ ಲಾಹಿರಿ. ತಂದೆ ತಾಯಿ ಇಬ್ಬರೂ ಬಂಗಾಳಿ ಗಾಯಕರಾಗಿದ್ದು ಶಾಸ್ತ್ರೀಯ ಸಂಗೀತ ಮತ್ತು ಶ್ಯಾಮ ಸಂಗೀತದಲ್ಲಿ ಅಪಾರ ಸಾಧನೆ ಮಾಡಿದ್ದವರು. ಕಿಶೋರ್ ಕುಮಾರ್ ಅವರ ತಾಯಿಯ ಸಂಬಂಧಿ.ಬಪ್ಪಿ ಲಾಹಿರಿ 3ನೇ ವಯಸ್ಸಿನಲ್ಲಿ ತಬಲಾ ನುಡಿಸಲು ಪ್ರಾರಂಭಿಸಿದರು. ಮುಂದೆ ಅನೇಕ ಆಧುನಿಕ ವಾದ್ಯಗಳಲ್ಲಿ ಪರಿಣತಿ ಸಾಧಿಸಿದರು. ಬಪ್ಪಿ ದಾ ಡಿಸ್ಕೋ ಶೈಲಿಯ ಹಾಡುಗಳಿಗೆ ಹೆಸರುವಾಸಿಯಾಗಿದ್ದರೂ, ಅವರು ಭಾರತೀಯ ಸಂಗೀತದ ಸ್ವಾದವನ್ನು ಅಂತರರಾಷ್ಟ್ರೀಯ ಧ್ವನಿಗಳನ್ನು ಲವಲವಿಕೆಯ ಲಯಗಳೊಂದಿಗೆ ಚಲನಚಿತ್ರ ಸಂಗೀತಕ್ಕೆ ತಂದರು. ಚಲ್ತೇ ಚಲ್ತೆ ಮತ್ತು ಜಖ್ಮೀಯಂತಹ ಚಲನಚಿತ್ರಗಳಲ್ಲಿ ಡಿಸ್ಕೋ ಮಾದರಿಗೆ ಹೊರತಾದ ಅವರ ವಿಶಿಷ್ಟ ಸಂಗೀತದ ಭವ್ಯಗೀತೆಗಳಿವೆ.ಬಪ್ಪಿ ಲಾಹಿರಿ 19 ವರ್ಷದವರಾಗಿದ್ದಾಗ ಮುಂಬೈಗೆ ಬಂದರು. ಅವರು ತಮ್ಮ ಮೊದಲ ಅವಕಾಶವನ್ನು ಬಂಗಾಳಿ ಚಿತ್ರ ‘ದಾಡು’ (1974) ನಲ್ಲಿ ಪಡೆದರು. ಅಲ್ಲಿ ಅವರು ಲತಾ ಮಂಗೇಶ್ಕರ್ ಅವರನ್ನು ತಮ್ಮ ಸಂಯೋಜನೆಗೆ ಹಾಡುವಂತೆ ಮನವೊಲಿಸಿದರು. ಅವರು ಸಂಗೀತ ಸಂಯೋಜಿಸಿದ ಮೊದಲ ಹಿಂದಿ ಚಲನಚಿತ್ರ ‘ನನ್ಹಾ ಶಿಕಾರಿ’ (1973) ಮತ್ತು ಅವರ ಮೊದಲ ಹಿಂದಿ ಸಂಯೋಜನೆಯ ಗೀತೆ ಮುಖೇಶ್ ಹಾಡಿರುವ ಚಿತ್ರ ‘ತು ಹಿ ಮೇರಾ ಚಂದಾ’. ಅವರ ವೃತ್ತಿಜೀವನದ ಮಹತ್ವದ ತಿರುವು ತಾಹಿರ್ ಹುಸೇನ್ ಅವರ ಹಿಂದಿ ಚಲನಚಿತ್ರ ‘ಜಖ್ಮೀ’ (1975). ಈ ಚಿತ್ರದ ಮೂಲಕ ಅವರು ಸಂಗೀತ ಸಂಯೋಜಕರಾಗಿದ್ದು ಮಾತ್ರವಲ್ಲದೆ ಹಿನ್ನೆಲೆ ಗಾಯಕರಾಗಿ ಸಹಾ ಹೆಸರಾದರು. ಈ ಚಿತ್ರದಲ್ಲಿ ಕಿಶೋರ್ ಕುಮಾರ್ ಮತ್ತು ಮೊಹಮ್ಮದ್ ರಫಿ ಅವರೊಂದಿಗೆ “ನಥಿಂಗ್ ಈಸ್ ಇಂಪಾಸಿಬಲ್” ಎಂಬ ಯುಗಳ ಗೀತೆ ಸಂಯೋಜಿಸಿದರು. ಅವರ ಸಂಯೋಜನೆಗಳಾದ ಜಲ್ತಾ ಹೈ ಜಿಯಾ ಮೇರಾ, ಅಭಿ ಅಭಿ ಥಿ ದುಷ್ಮನಿ ಮತ್ತು ಆವೊ ತುಮ್ಹೆ ಚಂದ್‌ನಂತಹ ಗೀತೆಗಳು ಆಶಾ, ಕಿಶೋರ್ ಮತ್ತು ಲತಾ ಧ್ವನಿಯಲ್ಲಿ ಬಹು ಜನಪ್ರಿಯಗೊಂಡವು.ಬಪ್ಪಿ ಲಾಹಿರಿ 1970ರ ದಶಕದ ಕೊನೆಯಿಂದ 1990ರ ದಶಕದ ಆರಂಭದವರೆಗೆ ನಯಾ ಕದಮ್, ಅಂಗನ್ ಕಿ ಕಲಿ, ವಾರ್ದತ್, ಡಿಸ್ಕೋ ಡ್ಯಾನ್ಸರ್, ಹತ್ಕಡಿ, ನಮಕ್ ಹಲಾಲ್, ಮಾಸ್ಟರ್ಜಿ, ಡ್ಯಾನ್ಸ್ ಡ್ಯಾನ್ಸರ್, ಜಸ್ಟೀಸ್, ಹಿಮ್ಮತ್ವಾಲಾ ಮುಂತಾದ ಚಲನಚಿತ್ರಗಳಿಗೆ ಸಂಯೋಜಿಸಿದ ಚಲನಚಿತ್ರ ಗೀತೆಗಳಿಂದ ಅಪಾರ ಜನಪ್ರಿಯರಾಗಿದ್ದರು. ತೋಹ್ಫಾ, ಮಕ್ಸಾದ್, ಕಮಾಂಡೋ, ನೌಕರ್ ಬೀವಿ ಕಾ, ಅಧಿಕಾರ್ ಶರಾಬಿ ಮುಂತಾದವು ಅವರ ಮತ್ತಷ್ಟು ಜನಪ್ರಿಯ ಸಂಗೀತದ ಚಿತ್ರಗಳು. 1982ರಲ್ಲಿ ಅವರು ಸಂಗೀತ ನೀಡಿದ ಡಿಸ್ಕೋಡ್ಯಾನ್ಸರ್ ಚಿತ್ರ ಭಾರತೀಯ ಚಲನಚಿತ್ರರಂಗಕ್ಕೊಂದು ಹೊಸ ಪರಂಪರೆ ಹೊತ್ತು ತಂದಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಘನಾದ ಸಹಾ ಅವರು ವಿಜ್ಞಾನಿಯಾಗಿ ಪ್ರಸಿದ್ಧರು.

Sun Feb 19 , 2023
ಮೇಘನಾದ ಸಹಾ ಅವರು ವಿಜ್ಞಾನಿಯಾಗಿ ಪ್ರಸಿದ್ಧರು. ಅವರೊಬ್ಬ ಸಮಾಜಮುಖಿ. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಲೋಕಸಭಾ ಸದಸ್ಯರೂ ಆಗಿದ್ದರು. ಮೇಘನಾದ ಸಹಾ ಈಗಿನ ಬಾಂಗ್ಲಾದೇಶದ ಢಾಕಾ ಜಿಲ್ಲೆಯಲ್ಲಿರುವ ಸಿಯೋರಟಾಲಿ ಎಂಬ ಸಣ್ಣ ಗ್ರಾಮದಲ್ಲಿ 1893ರ ಅಕ್ಟೋಬರ್ 6ರಂದು ಜನಿಸಿದರು. ಬಡತನದ ಜೀವನ ಎನ್ನಬಹುದು. ಸಹಾ ಅವರಿಗೆ ವಿದ್ಯಾಭ್ಯಾಸದ ಅದಮ್ಯ ಬಯಕೆ. ಪ್ರಾಥಮಿಕ ಶಾಲೆ ಇದ್ದುದು ಆ ಗ್ರಾಮದಿಂದ ಏಳು ಮೈಲು ದೂರದಲ್ಲಿ. ಆ ಊರಿನ ಒಬ್ಬ ವೈದ್ಯ ಇವರ […]

Related posts

Advertisement

Wordpress Social Share Plugin powered by Ultimatelysocial