ಮೇಘನಾದ ಸಹಾ ಅವರು ವಿಜ್ಞಾನಿಯಾಗಿ ಪ್ರಸಿದ್ಧರು.

ಮೇಘನಾದ ಸಹಾ ಅವರು ವಿಜ್ಞಾನಿಯಾಗಿ ಪ್ರಸಿದ್ಧರು. ಅವರೊಬ್ಬ ಸಮಾಜಮುಖಿ. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಲೋಕಸಭಾ ಸದಸ್ಯರೂ ಆಗಿದ್ದರು. ಮೇಘನಾದ ಸಹಾ ಈಗಿನ ಬಾಂಗ್ಲಾದೇಶದ ಢಾಕಾ ಜಿಲ್ಲೆಯಲ್ಲಿರುವ ಸಿಯೋರಟಾಲಿ ಎಂಬ ಸಣ್ಣ ಗ್ರಾಮದಲ್ಲಿ 1893ರ ಅಕ್ಟೋಬರ್ 6ರಂದು ಜನಿಸಿದರು. ಬಡತನದ ಜೀವನ ಎನ್ನಬಹುದು. ಸಹಾ ಅವರಿಗೆ ವಿದ್ಯಾಭ್ಯಾಸದ ಅದಮ್ಯ ಬಯಕೆ. ಪ್ರಾಥಮಿಕ ಶಾಲೆ ಇದ್ದುದು ಆ ಗ್ರಾಮದಿಂದ ಏಳು ಮೈಲು ದೂರದಲ್ಲಿ. ಆ ಊರಿನ ಒಬ್ಬ ವೈದ್ಯ ಇವರ ಅಭ್ಯಾಸಕ್ಕೆ ನೆರವು ನೀಡಿದರು. ಮೇಘನಾದ ಸಹಾ ಜಿಲ್ಲೆಗೇ ಮೊದಲಿಗರಾಗಿ ತೇರ್ಗಡೆಯಾದಾಗ ತಿಂಗಳಿಗೆ ನಾಲ್ಕು ರೂಪಾಯಿಯ ವ್ಯಾಸಂಗ ವೇತನ ದೊರಕಿತು. ಇದರಿಂದ ಮುಂದಿನ ಓದಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಯಿತು. ಮುಂದೆ ಢಾಕಾದಲ್ಲಿ ಸರಕಾರಿ ಪ್ರೌಢಶಾಲೆಗೆ ಸೇರಿದರು. ಸ್ವಾತಂತ್ರ್ಯ ಅಂದೋಲನ ನಡೆಯುತ್ತಿದ್ದ ಕಾಲ ಅದು. ಅವರು ವಿದ್ಯಾರ್ಥಿಗಳೊಂದಿಗೆ ಒಮ್ಮೆ ಶಾಲೆಯ ಬಹಿಷ್ಕಾರದಲ್ಲಿ ಭಾಗವಹಿಸಿದ್ದುಕ್ಕಾಗಿ ವ್ಯಾಸಂಗ ವೇತನಕ್ಕೂ ಕುತ್ತು ಬಂತು.1913ರಲ್ಲಿ ಮೇಘನಾದ ಸಹಾ ಅವರು ಗಣಿತದಲ್ಲಿ ಹೆಚ್ಚಿನ ಅಂಕಗಳ ಸಹಿತ ಬಿ.ಎಸ್‌ಸಿ. ಪದವಿ ಗಳಿಸಿದರು. 1915ರಲ್ಲಿ ಎಂ.ಎಸ್‌ಸಿ ಓದಿದಾಗ ವಿಶ್ವವಿದ್ಯಾನಿಲಯಕ್ಕೆ ಎರಡನೆಯವರಾಗಿ ತೇರ್ಗಡೆಯಾದರು. ಮೊದಲನೆಯವರಾಗಿ ತೇರ್ಗಡೆಯಾದವರು ಅವರ ಸಹಪಾಠಿ ಸತ್ಯೇಂದ್ರನಾಥ್ ಬೋಸ್ ಅವರು. ಆ ಸಂದರ್ಭದಲ್ಲಿ ಕೋಲ್ಕತ್ತದಲ್ಲಿ ಬಿಳಿಯರ ಆಡಳಿತ ವ್ಯಾಪ್ತಿಗೆ ಹೊರತಾದ ಒಂದು ಹೊಸ ವಿಜ್ಞಾನ ಕಾಲೇಜು ಪ್ರಾರಂಭವಾಗಿ, ಮೇಘನಾದ ಸಹಾ ಮತ್ತು ಸತ್ಯೇಂದ್ರನಾಥ್ ಬೋಸ್ ಅವರುಗಳನ್ನು ಅಧ್ಯಾಪಕರುಗಳಾಗಿ ನೇಮಿಸಲಾಯಿತು. ಅಲ್ಲಿ ಅವರ ಬೋಧನೆ, ಅಧ್ಯಯನ ಸಂಶೋಧನೆ ಮುಂದುವರಿದವು. ಇಬ್ಬರೂ ಸೇರಿ ಅನಿಲಗಳ ಸ್ಥಿತಿಗೆ ಸಂಬಂಧಿಸಿದಂತೆ ಸಂಶೋಧನಾ ಪ್ರಬಂಧಗಳನ್ನು ಬರೆದರು. ಮೇಘನಾದ ಸಹಾ ವಿದ್ಯುತ್ ಆಯಸ್ಕಾಂತ ಮತ್ತು ಭೌತ ವಿಜ್ಞಾನಗಳಲ್ಲಿ ಸಂಶೋಧನೆ ಪ್ರಾರಂಭಿಸಿ ಮ್ಯಾಕ್ಸ್‌ವೆಲ್ ಒತ್ತಡ ಹಾಗೂ ವಿಕಿರಣ ಒತ್ತಡದ ಬಗ್ಗೆ ಕೆಲವು ಮೂಲ ಲೇಖನಗಳನ್ನು ಬರೆದರು. ಈ ಸಂಶೋಧನೆಯನ್ನು ಮಾನ್ಯ ಮಾಡಿ 1918ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯ ಅವರಿಗೆ ಡಿ.ಎಸ್ಸಿ ಪದವಿ ನೀಡಿ ಗೌರವಿಸಿತು.
ಪರಮಾಣುವಿನಿಂದ ಎಲೆಕ್ಟ್ರಾನು ಹೊರಬಿದ್ದಾಗ ಅದು ಆಯಾನು ಆಗುವುದು ರಾಸಾಯನಿಕ ವಿಯೋಜನೆಯಂತೆಯೇ, ಅಧಿಕ ಉಷ್ಣ ಶಕ್ತಿಯಿಂದ ಪರಮಾಣುಗಳು ಚೆಲ್ಲಾಪಿಲ್ಲಿಯಾಗಿ ಓಡಾಡುವಾಗ ಇಂತಹ ಆಯಾನೀಕರಣ ಉಂಟಾಗಬಹುದು ಎಂಬುದು ಅವರ ತರ್ಕ. ಹೀಗೆ ಆಯಾನೀಕರಣ ಆದಾಗ ಜೊತೆಗೇ ಎಲೆಕ್ಟ್ರಾನುಗಳು ಮತ್ತು ಆಯಾನುಗಳು ಸಮ್ಮಿಳನಗೊಂಡು ಪುನಃ ಪರಮಾಣುಗಳಾಗಬಹುದು. ಈ ಮಾಹಿತಿ ಬಳಸಿಕೊಂಡು ಅವರು ಒಂದು ಮುಖ್ಯ ಸಮೀರಕಣ ಮಾಡಿದರು. ಅದು ‘ಸಹಾ ಸಮೀಕರಣ’ ಎಂದೇ ಹೆಸರಾಗಿದೆ. ನಕ್ಷತ್ರಗಳಿಂದ ರೇಡಿಯೋ ಅಲೆಗಳು, ಏಕಧ್ರುವಗಳು ಮುಂತಾದ ವಿಷಯಗಳ ಕುರಿತು ಮೇಘನಾದ ಸಹಾ ಅವರ ಸಂಶೋಧನೆ ವಿಜ್ಞಾನಲೋಕದಲ್ಲಿ ಪ್ರಸಿದ್ಧವಾಗಿದೆ.ಇಷ್ಟೇ ಅಲ್ಲದೆ ಸ್ಥಿತಿಸ್ಥಾಪಕತ್ವ, ಜಡೋಷ್ಣ, ಸಂಖ್ಯಾಭೌತಶಾಸ್ತ್ರದ ಹೊಸ ವಿಷಯಗಳು, ರಾಸಾಯನಿಕ ವಸ್ತುಗಳ ಬಣ್ಣ, ವಾತಾವರಣದ ಅಭ್ಯಾಸ, ವಾತಾವರಣದಲ್ಲಿ ವಿದ್ಯುತ್ ಕಾಂತ ಅಲೆಗಳ ಚಲನೆ, ಪರಮಾಣು ಬೀಜದ ಅಭ್ಯಾಸ, ರೇಡಿಯೋ ವಿಕಿರಣ ಮುಂತಾದ ವಿಷಯಗಳ ಬಗ್ಗೆಯೂ ಅವರು ಸಂಶೋಧನೆ ನಡೆಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣೆ ಫಲಿತಾಂಶ ಬಂದ ಬಳಿಕ ಯಾರು ಬರ್ತಾರೆ ಅಂತಾ ಹೇಳ್ತಿನಿ.

Sun Feb 19 , 2023
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ನಿಂದ ಬಿಜೆಪಿಗೆ ಮತ್ತೆ ಯಾರಾದ್ರೂ ಬರ್ತಾರಾ ಎಂಬ ಪ್ರಶ್ನೆಗೆ ರಮೇಶ್ ಜಾರಕಿಹೊಳಿ “ಈಗ ಯಾರು ಬರುವುದಿಲ್ಲ ಚುನಾವಣೆ ಫಲಿತಾಂಶ ಬಂದ ಬಳಿಕ ಯಾರು ಬರ್ತಾರೆ ಅಂತಾ ಹೇಳ್ತಿನಿ. ರಿಸಲ್ಟ್ ದಿನ ಯಾರು ನನ್ನ ಕಡೆಗೆ ಬರ್ತಾರೆ? ಎಷ್ಟು ಜನ ಬರ್ತಾರೆ ಅನ್ನೋದನ್ನ ಹೇಳ್ತಿನಿ ” ಎಂದು ಪ್ರತಿಕ್ರಿಯಿಸಿದ್ದಾರೆ.ಬೆಳಗಾವಿ: ರಾಜ್ಯದಲ್ಲಿ ಚುನಾವಣೆ ನಂತರ ಮತ್ತೆ ಆಪರೇಷನ್ ಕಮಲ  ಆಗುತ್ತಾ ಎಂಬ ಪ್ರಶ್ನೆಗೆ ರಮೇಶ್ ಜಾರಕಿಹೊಳಿ  ಅವರು ಬೆಳಗಾವಿಯಲ್ಲಿ  ಟಿವಿ9 […]

Advertisement

Wordpress Social Share Plugin powered by Ultimatelysocial